ಆ್ಯಪ್ನಗರ

ದಲಿತ ಹೋರಾಟದಿಂದ ಸಂವಿಧಾನ ಉಳಿಸಲು ಸಾಧ್ಯ

ದಲಿತರ ಹೋರಾಟದಲ್ಲಿ ಇನ್ನೂ ಗುರಿ ಸಾಧನೆಯಾಗಿಲ್ಲ, ಸವರ್ಣೀಯರು ಸಾಮಾಜಿಕ ಮತ್ತು ಮಾನಸಿಕವಾಗಿ ದಲಿತರನ್ನು ದೂರವಿಟ್ಟಿರುವುದು ದುರಂತವಾಗಿದೆ ಎಂದು ಮಾಜಿ ಶಾಸಕ ವೈ.ಎಸ್‌.ವಿ ದತ್ತ ವಿಷಾದ ವ್ಯಕ್ತಪಡಿಸಿದರು.

Vijaya Karnataka 27 Apr 2019, 9:18 pm
ಕಡೂರು:ದಲಿತರ ಹೋರಾಟದಲ್ಲಿ ಇನ್ನೂ ಗುರಿ ಸಾಧನೆಯಾಗಿಲ್ಲ, ಸವರ್ಣೀಯರು ಸಾಮಾಜಿಕ ಮತ್ತು ಮಾನಸಿಕವಾಗಿ ದಲಿತರನ್ನು ದೂರವಿಟ್ಟಿರುವುದು ದುರಂತವಾಗಿದೆ ಎಂದು ಮಾಜಿ ಶಾಸಕ ವೈ.ಎಸ್‌.ವಿ ದತ್ತ ವಿಷಾದ ವ್ಯಕ್ತಪಡಿಸಿದರು.
Vijaya Karnataka Web CKM-26KDR2


ಪಟ್ಟಣದ ಅಂಬೇಡ್ಕರ್‌ ಭವನ ಆವರಣದಲ್ಲಿ ಕಡೂರು ತಾಲೂಕು ದಲಿತ ಸಂಘಟನೆ ಎಂ. ಕೃಷ್ಣಪ್ಪ ಬಣದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಡಾ. ಬಿ.ಆರ್‌. ಅಂಬೇಡ್ಕರ್‌ ಮತ್ತು ಡಾ. ಬಾಬು ಜಗಜೀವನರಾಮ್‌ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರ ಅನಾವರಣ ಮಾಡಿ ಅವರು ಮಾತನಾಡಿದರು.ದಲಿತರ ಅನೇಕ ಬಣಗಳು ಸಂಘಟನೆಯಾಗಿ ಹೋರಾಟ ಮಾಡಿದರೆ ಮಾತ್ರ ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.

ಡಿಎಸ್‌ಎಸ್‌ ರಾಜ್ಯ ಖಜಾಂಚಿ ಭದ್ರಾವತಿ ಸತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1974 ರಲ್ಲಿ ರಾಜ್ಯದಲ್ಲಿ ದಲಿತ ಸಂಘಟನೆಯನ್ನು ಪ್ರಾರಂಭಿಸಿದ ಕೀರ್ತಿ ಪ್ರೊ. ಬಿ. ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ. ಅಂಬೇಡ್ಕರ್‌ ಆದರ್ಶಗಳನ್ನು ಮೈಗೂಡಿಸಿಕೊಂಡು ಸಂಘಟನೆ ಮಾಡಿದವರು. ಇದೀಗ ಸಂವಿಧಾನ ಅಪಾಯದಲ್ಲಿದೆ. ಸಂವಿಧಾನವನ್ನು ಉಳಿಸಿ ಮನುವಾದವನ್ನು ತೊಲಗಿಸಬೇಕಾಗಿದೆ. ತೇಜಸ್ವಿ ಸೂರ್ಯ, ಅಂನತ್‌ಕುಮಾರ್‌ ಹೆಗಡೆ, ಪೇಜಾವರ ಶ್ರೀಗಳು ಸಂವಿಧಾನ ಬದಲಾಯಿಸಲು ಹೇಳಿಕೆ ನೀಡುತ್ತಿದ್ದು. ಇಂತಹವರ ವಿರುದ್ಧ ನಮ್ಮ ಸಂಘಟನೆಗಳು ಹೋರಾಟ ಮಾಡಬೇಕಾಗಿದೆ ಎಂದು ದಲಿತ ಸಂಘಟನೆಗಳಿಗೆ ಕರೆ ನೀಡಿದರು.

ಕೆಪಿಸಿಸಿ ಸದಸ್ಯ ಕೆ.ಎಸ್‌.ಆನಂದ್‌ ಮಾತನಾಡಿ, ಸಂವಿಧಾನ ವಿರೋಧಿಗಳು ಹೆಚ್ಚುತ್ತಿದ್ದು. ಇಂತಹವರ ವಿರುದ್ಧ ದಲಿತ ಸಂಘಟನೆಗಳು ಎಚ್ಚರ ವಹಿಸಬೇಕಾಗಿದೆ. ಅಂಬೇಡ್ಕರ್‌ ನೀಡಿರುವ ಸಂವಿಧಾನವನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಕಡೂರು ಕ್ಷೇತ್ರದಲ್ಲಿ ಮೊದಲ ಬಾರಿಗೆ ದಲಿತ ಮಹಿಳೆಯೊಬ್ಬರು ತಾ.ಪಂ. ಅಧ್ಯಕ್ಷ ಸ್ಥಾನ ಏರಲು ಸಂವಿಧಾನದಿಂದ ಸಾಧ್ಯವಾಯಿತು. ದಲಿತರನ್ನು ತುಳಿಯುವ ಕೆಲಸ ಇಂದಿಗೂ ನಡೆಯುತ್ತಿದ್ದು ಅನೇಕ ಶಕ್ತಿಗಳು ಒಂದಾಗಿವೆ, ಇಂತಹ ಶಕ್ತಿಗಳ ವಿರುದ್ಧ ಹೋರಾಟವಾಗಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಕಡೂರಳ್ಳಿ ಪ್ರಶಾಂತ್‌ ಮಾತನಾಡಿ, ದಲಿತ ಸಂಘಟನೆಗಳು ಒಗ್ಗೂಡಿ ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳಬೇಕು ಇಲ್ಲವಾದರೆ ಮುಂದೊಂದು ದಿನ ನಾವು ಕಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದರು. ಕಡೂರು ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ. ಎ.ಜಿ . ಶ್ರೀಧರಬಾಬು ಅಂಬೇಡ್ಕರ್‌ ಜೀವನ ಮತ್ತು ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಸಂಚಾಲಕ ಕೆ.ಸಿ. ವಸಂತಕುಮಾರ್‌, ತಾಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಪ್ರಹ್ಲಾದ್‌, ಎಪಿಎಂಸಿ ಅಧ್ಯಕ್ಷ ಶಿವಕುಮಾರ್‌, ತಾ.ಪಂ. ಸದಸ್ಯೆ ಪ್ರೇಮಬಾಯಿ, ಲಕ್ಕಪ್ಪ, ಎಂ.ಹೆಚ್‌. ಚಂದ್ರಪ್ಪ, ಬಾಸೂರು ಚಂದ್ರಮೌಳಿ, ಜಿಗಣಿಹಳ್ಳಿ ನೀಲಕಂಠಪ್ಪ, ಬಸವರಾಜು, ರಾಘವೇಂದ್ರ, ಪ್ರಭು, ಬಸವರಾಜು, ಯೋಗೀಶ್‌, ನಂಜುಂಡಪ್ಪ, ಸಂತೋಷ್‌, ರಂಗಸ್ವಾಮಿ, ಆನಂದ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ