ಆ್ಯಪ್ನಗರ

ಸರಕಾರಕ್ಕೆ ಆಂಗ್ಲ ಮಾಧ್ಯಮದ ಮೋಹ ಬೇಡ (ಹೆಡ್‌)

ಸರಕಾರ ಕನ್ನಡ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳಬೇಕು. ಸರಕಾರಕ್ಕೆ ಆಂಗ್ಲ ಮಾಧ್ಯಮದ ಮೋಹ ಬೇಡ. ಮಕ್ಕಳಿಗೆ ಕನ್ನಡ ಭಾಷೆ, ಸಂಸ್ಕೃತಿ ಕಲಿಸಬೇಕಿದೆ ಎಂದು ಸಾಣೇಹಳ್ಳಿ ಶ್ರೀ ಪೀಠದ ಪಟ್ಟಾಧ್ಯಕ್ಷ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 3 Jan 2019, 5:00 am
ಅಜ್ಜಂಪುರ : ಸರಕಾರ ಕನ್ನಡ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳಬೇಕು. ಸರಕಾರಕ್ಕೆ ಆಂಗ್ಲ ಮಾಧ್ಯಮದ ಮೋಹ ಬೇಡ. ಮಕ್ಕಳಿಗೆ ಕನ್ನಡ ಭಾಷೆ, ಸಂಸ್ಕೃತಿ ಕಲಿಸಬೇಕಿದೆ ಎಂದು ಸಾಣೇಹಳ್ಳಿ ಶ್ರೀ ಪೀಠದ ಪಟ್ಟಾಧ್ಯಕ್ಷ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web CKM-02ajp03


ಪಟ್ಟಣ ಸಮೀಪದ ಸಾಣೇಹಳ್ಳಿಯಲ್ಲಿ ಶಿವಕುಮಾರ ಕಲಾ ಸಂಘ ಸೋಮವಾರ ಪ್ರತಿ ವರ್ಷದಂತೆ ನಡೆಸುವ ವರ್ಷದ ಹರ್ಷ ಕಾರ್ಯಕ್ರಮದಲ್ಲಿ ಮಾತನಾಡಿ, ಇಂಗ್ಲಿಷ್‌ ಒಂದು ಭಾಷೆಯನ್ನಾಗಿ ಕಲಿಸಲು ನಮ್ಮ ಆಕ್ಷೇಪವಿಲ್ಲ. ಆಸೆ-ಆಮಿಷಗಳಿಗೆ ಒಳಗಾಗಿರುವ ನಮ್ಮ ಜನಪ್ರತಿನಿಧಿಗಳಿಂದ ಏನನ್ನು ತಾನೇ ನಿರೀಕ್ಷಿಸುವುದು ಸಾಧ್ಯ ಎಂದರು.

ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಜಗತ್ತಿನ ಎಲ್ಲ ದೇಶಗಳಲ್ಲೂ ರಂಗಚಿಂತನೆ ಇದೆ. ರಂಗಭೂಮಿಯಿಂದ ಜನರನ್ನು ಸುಲಭವಾಗಿ ಪರಿವರ್ತಿಸಲು ಸಾಧ್ಯ. ಕಾವಿಧಾರಿಗಳು ಏನನ್ನು ಮಾಡಬೇಕು, ಏನನ್ನು ಮಾಡಬಹುದು ಎನ್ನುವುದಕ್ಕೆ ಪಂಡಿತಾರಾಧ್ಯ ಶ್ರೀಗಳ ಕಾರ್ಯಚಟುವಟಿಕೆಗಳೇ ಸಾಕ್ಷಿ ಎಂದರು.

ಮಧುರೆಯ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಪಂಡಿತಾರಾಧ್ಯ ಶ್ರೀಗಳು ವರ್ಷದ ಉದ್ದಗಲಕ್ಕೂ ಸಾಹಿತ್ಯ, ಸಂಸ್ಕೃತಿಗೆ ಅನುಪಮ ಕೊಡುಗೆ ನೀಡುತ್ತಿದ್ದಾರೆ. ಕಲೆ, ಸಾಹಿತ್ಯ ಸಂಸ್ಕೃತಿಗಳು ವ್ಯಕ್ತಿತ್ವವನ್ನು ವಿಕಾಸಗೊಳಿಸುವಂತಿರಬೇಕು ಎನ್ನುವ ಆಶಯದ ಹಿನ್ನೆಲೆಯಲ್ಲಿ ಇಲ್ಲಿನ ಕಾರ್ಯಕ್ರಮಗಳು ರೂಪಿತವಾಗಿರುತ್ತವೆ ಎಂದರು.

ರಂಗಕರ್ಮಿ ಬಾಬು ಹಿರಣ್ಣಯ್ಯ ಮಾತನಾಡಿ, ನಾಡಿನ ಸಂಸ್ಕೃತಿಯ ಔನ್ನತ್ಯವನ್ನು ಕಾಪಾಡುವುದು ರಂಗಭೂಮಿ. ಧರ್ಮ ಮತ್ತು ರಂಗಭೂಮಿಯ ಸಂಗಮದ ಕ್ಷೇತ್ರವೇ ಸಾಣೇಹಳ್ಳಿ. ರಂಗಭೂಮಿಯೇ ಇಲ್ಲಿನ ಧರ್ಮವಾಗಿರುವುದು ಜಗತ್ತಿನ ಕಣ್ಣು ತೆರೆಸುವಂಥದ್ದು. ಮನುಷ್ಯನ ಆತ್ಮದ ಬೆಳವಣಿಗೆ ರಂಗಭೂಮಿಯಿಂದ ಸಾಧ್ಯ ಎಂದರು.

ಡಾ. ಮಲ್ಲಿಕಾರ್ಜುನ ಕಲಮರನಹಳ್ಳಿ ,ಕನ್ನಡ ಕಲಾಕೇಂದ್ರದ ಅಧ್ಯಕ್ಷ ಬಿ. ಬಾಲಚಂದ್ರರಾವ್‌ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್‌.ಎನ್‌. ರಂಗಸ್ವಾಮಿ, ಚಂದ್ರಶೇಖರ ತಾಳ್ಯ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಬಸವಜ್ಞಾನ ಗುರುಕುಲ ಆಶ್ರಮದ ಈಶ್ವರ ಮಂಟೂರು ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ಜಿ.ವಿ. ಕೊಟ್ರೇಶಪ್ಪ ಮಾತನಾಡಿದರು.ಎಚ್‌.ಎಸ್‌. ನಾಗರಾಜ್‌, ಕೆ. ದಾಕ್ಷಾಯಿಣಿ, ಕೆ. ಜ್ಯೋತಿ, ಸತೀಶ ತಂಡದವರು ವಚನ ಗೀತೆ ಹಾಡಿದರು. ಭೂಮಿಕಾ ಸ್ವಾಗತಿಸಿ, ತನುಜಾ ನಿರೂಪಿಸಿ, ಸಂಜನಾ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ