ಆ್ಯಪ್ನಗರ

ನಿಸ್ತೇಜ ಸ್ಥಿತಿಯಲ್ಲಿದೆ ಸರಕಾರ

ಅತಿವೃಷ್ಟಿಯಿಂದ ಜನ ಮನೆ ,ಜಮೀನು ಕಳೆದುಕೊಂಡು ನಿರ್ಗತಿಕರಾಗಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಆದರೆ, ರಾಜ್ಯ ಸರಕಾರ ಲಕ್ವಾ ಹೊಡೆದ ಸ್ಥಿತಿಯಲ್ಲಿನಿಸ್ತೇಜವಾಗಿದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಕಟುಟೀಕೆ ವ್ಯಕ್ತಪಡಿಸಿದರು.

Vijaya Karnataka 5 Oct 2019, 5:00 am
ಚಿಕ್ಕಮಗಳೂರು : ಅತಿವೃಷ್ಟಿಯಿಂದ ಜನ ಮನೆ ,ಜಮೀನು ಕಳೆದುಕೊಂಡು ನಿರ್ಗತಿಕರಾಗಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಆದರೆ, ರಾಜ್ಯ ಸರಕಾರ ಲಕ್ವಾ ಹೊಡೆದ ಸ್ಥಿತಿಯಲ್ಲಿನಿಸ್ತೇಜವಾಗಿದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಕಟುಟೀಕೆ ವ್ಯಕ್ತಪಡಿಸಿದರು.
Vijaya Karnataka Web the government is in a dormant state
ನಿಸ್ತೇಜ ಸ್ಥಿತಿಯಲ್ಲಿದೆ ಸರಕಾರ


ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ ಮಲೆನಾಡಿಗೆ ಇಂತಹ ನೆರೆ ಬಂದಿದ್ದನ್ನು ನಾನು ಕಂಡಿರಲಿಲ್ಲ.ಊರಿಗೆ ಊರೇ ಕೊಚ್ಚಿಹೋಗಿದ್ದು ಜನ ದಿಗ್ಭ್ರಾಂತರಾಗಿದ್ದಾರೆ. ಸರಕಾರ ಅನ್ನೋದು ಇದೆಯಾ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಎರಡೂ ಸರಕಾರಕ್ಕೆ ಕಣ್ಣು, ಕಿವಿ, ಮೂಗು ಕೊನೆಗೆ ಹೃದಯವೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆರೆ ಬಂದು 50 ದಿನ ಕಳೆಯುತ್ತಾ ಬಂತು. ಸರಕಾರದ ಪ್ರತಿನಿಧಿಗಳು ಬಂದರು ಸಭೆ ಮಾಡಿ ಹೋದರು.ಜಿಲ್ಲಾಉಸ್ತುವಾರಿ ಸಚಿವ ಸಿ.ಟಿ.ರವಿ, ಮಾಧುಸ್ವಾಮಿ ಬಂದು ಹೋದರು. ನೆರೆ ಸಂತ್ರಸ್ತರಿಗೆ ಯಾವುದೇ ಪ್ರಯೋಜನವಾಗಲಿಲ್ಲ.ಇಂತಹದ್ದೇ ಪರಿಸ್ಥಿತಿ ಕಳೆದ ವರ್ಷ ಕೊಡಗಿನಲ್ಲಿಆದಾಗ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಯುದ್ಧೋಪಾದಿಯಲ್ಲಿಕಾರ್ಯನಿರ್ವಹಿಸಿ ನೆರೆ ಸಂತ್ರಸ್ತರಿಗೆ ಸ್ಪಂದಿಸಿದ್ದರು. ಇಂದು ಕೇಂದ್ರ ಮತ್ತು ರಾಜ್ಯದಲ್ಲಿಒಂದೇ ಸರಕಾರವಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈಗ ಹಣ ಬರುತ್ತೆ, ಆಗ ಬರುತ್ತೆ ಎಂದು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ.ಕನಿಷ್ಠ 2-3 ಸಾವಿರ ಕೋಟಿ ಯನ್ನಾದರೂ ಮೊದಲು ನೀಡಲಿ. ಸಮೀಕ್ಷೆ ತಪ್ಪಾಗಿದ್ದರೆ ಆಮೇಲೆ ಪರಿಶೀಲಿಸಲಿ. ಅದನ್ನು ಬಿಟ್ಟು ಕಳುಹಿಸಿರುವ ಸಮೀಕ್ಷೆ ಸರಿಯಿಲ್ಲಎಂದು ಸಬೂಬು ಹೇಳುತ್ತಾ ಕುಳಿತರೆ ಇಲ್ಲಿನೆರೆ ಸಂತ್ರಸ್ತರ ಪರಿಸ್ಥಿತಿ ಕೇಳುವವರಾರ‍ಯರು ಎಂದು ಪ್ರಶ್ನಿಸಿದರು.

ತಮ್ಮ ಜಮೀನು ಪ್ರವಾಹದಿಂದ ಕೊಚ್ಚಿ ಹೋದಾಗ ಸರಿಪಡಿಸಲು ಸರಕಾರದಿಂದ ಯಾವುದೇ ಪರಿಹಾರ ಬಾರದ ಕಾರಣ ಕಳಸ ತಾಲೂಕಿನ ಚನ್ನಪ್ಪಗೌಡರು ತಮ್ಮ ಜನೀನಲ್ಲಿಎದೆಗೆ ಗಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು.ಅವರು ಸಾವಿಗೀಡಾಗಿ ತಿಂಗಳಾದರೂ ನಯಾಪೈಸೆ ಪರಿಹಾರ ಬಂದಿಲ್ಲ. ಎಸ್‌.ಕೆ.ಮೇಗಲ್‌ ಗ್ರಾಮದ ಚಂದ್ರೇಗೌಡ ಎಂಬುವರುತಮ್ಮ ಜಮೀನು ಮಳೆಯಲ್ಲಿಕೊಚ್ಚಿಹೋದ ಕಾರಣಕ್ಕೆ ಅ.2 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು.ಕಳಸದಲ್ಲಿದಿನ ದಿನಕ್ಕೂ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ. ಜನ ಆತ್ಮ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದರು.

.ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಜೆಡಿಎಸ್‌ ನಿಂದ ಅ.10 ರಂದು ಬೆಂಗಳೂರಿನಲ್ಲಿಪ್ರತಿಭಟನೆ ನಡೆಸಿ ನೆರೆ ಪರಿಹಾರ ಬಿಡುಗಡೆಗೆ ಆಗ್ರಹಿಸಲಾಗುವುದು ಎಂದರು. ಎಸ್ಸಿಎಸ್ಟಿ ವಿಭಾಗದ ಲಕ್ಷ್ಮಣ , ಧನಪಾಲ, ತಿಮ್ಮೇಗೌಡ,ಮಹೇಶ್‌ ಹಾಜರಿದ್ದರು.


------------

ರಾಜ್ಯದಿಂದ ಗೆದ್ದು ಹೋಗಿರುವ 25 ಎಂಪಿಗಳು ಮೋದಿ ಭಜನೆ ಮಾಡುತ್ತಿದ್ದಾರೆ. ಇನ್ನಾದರೂ ಅವರ ಜವಾಬ್ದಾರಿ ಅರಿತು ಕೆಲಸ ಮಾಡಲಿ. ಅವರಿಗೆ ಅನುದಾನ ಕೇಳಲು ಧೈರ್ಯವಿಲ್ಲಎಂದರೆ ಸರ್ವಪಕ್ಷ ನಿಯೋಗ ಕರೆದೊಯ್ಯಲಿ.ಸರಕಾರದ ಮೇಲೆ ಒತ್ತಡ ತಂದು ಪರಿಹಾರದ ಹಣ ತರುವ ಪ್ರಯತ್ನ ಮಾಡೋಣ.

-ಬಿ.ಬಿ.ನಿಂಗಯ್ಯ ,ಮಾಜಿ ಸಚಿವ

----------

ಚಂದ್ರೇಗೌಡರ ಪಾರ್ಥೀವ ಶರೀರ ಅವರ ಮನೆಯಲ್ಲಿದ್ದಾಗಲೇ ಕೊಚ್ಚಿ ಹೋದ ಜಮೀನನ್ನು ಸಮೀಕ್ಷೆ ಮಾಡಲು ಗ್ರಾಮ ಲೆಕ್ಕಿಗ ಬಂದಿದ್ದಾರೆ. ಇಷ್ಟು ದಿನ ಆತ ಎಲ್ಲಿಗೆ ಹೋಗಿದ್ದ. ಸಾವಿನ ಮನೆಗೆ ಬಂದು ಕೊಚ್ಚಿ ಹೋದ ಜಾಗ ತೋರಿಸಿ ಎಂದು ಕೇಳಿರುವ ವಿಎ ಅವರನ್ನು ಅಮಾನತು ಮಾಡಬೇಕು.

-ಎಚ್‌.ಎಚ್‌.ದೇವರಾಜ್‌ ,ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ

-------------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ