ಆ್ಯಪ್ನಗರ

ಕೆಸರುಗದ್ದೆಯಾಯಿತು ಹೆದ್ದಾರಿ

ಹಾಸನ, ಬೇಲೂರು ಮಾರ್ಗದ ಹೆದ್ದಾರಿ ರಸ್ತೆ ಬದಿಯಲ್ಲಿ ಒಳಚರಂಡಿ ಮಂಡಳಿಯಿಂದ ಅವೈಜ್ಞಾನಿಕ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಪೈಪ್‌ ಒಡೆದು ರಸ್ತೆ ಕೆಸರುಗದ್ದೆಯಾಗಿ ಸಂಚಾರಕ್ಕೆ ಅಡಚಣೆಯಾಗಿದೆ.

Vijaya Karnataka 15 Jun 2019, 5:00 am
ಚಿಕ್ಕಮಗಳೂರು : ಹಾಸನ, ಬೇಲೂರು ಮಾರ್ಗದ ಹೆದ್ದಾರಿ ರಸ್ತೆ ಬದಿಯಲ್ಲಿ ಒಳಚರಂಡಿ ಮಂಡಳಿಯಿಂದ ಅವೈಜ್ಞಾನಿಕ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಪೈಪ್‌ ಒಡೆದು ರಸ್ತೆ ಕೆಸರುಗದ್ದೆಯಾಗಿ ಸಂಚಾರಕ್ಕೆ ಅಡಚಣೆಯಾಗಿದೆ.
Vijaya Karnataka Web CKM-14RUDRAP1


ನಗರಸಭೆ ವ್ಯಾಪ್ತಿಯ ಹಿರೇಮಗಳೂರು ವಾರ್ಡಿನ ಕೋದಂಡರಾಮಚಂದ್ರಸ್ವಾಮಿ ದೇವಾಲಯಕ್ಕೆ ತೆರಳುವ ಬೇಲೂರು ಮಾರ್ಗದ ಹೆದ್ದಾರಿ ರಸ್ತೆಬದಿಯಲ್ಲಿ ಒಳಚರಂಡಿ ಮಂಡಳಿಯಿಂದ ಒಳಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭ ಕುಡಿವ ನೀರಿನ ಪೈಪ್‌ಗೆ ಹಾನಿಯಾಗಿ ನೀರು ಚಿಮ್ಮುತ್ತಿದ್ದು ರಸ್ತೆ ಬದಿ ಕೆಸರುಗದ್ದೆಯಾಗಿ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.

ಹಾಸನ ,ಮೈಸೂರು ಹಾಗೂ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು ನಿತ್ಯ ಟ್ರಾಫಿಕ್‌ ಜಾಂ ಆಗುತ್ತಿದೆ. ಈ ನಡುವೆ ದ್ವಿಚಕ್ರ ಸವಾರರು ಬಿದ್ದೆದ್ದು ಹೋಗುವಂತಾಗಿದೆ. ಗುತ್ತಿಗೆದಾರ ಮತ್ತು ಒಳಚರಂಡಿಮಂಡಳಿ ಬೇಜವಾಬ್ದಾರಿ ಕಾಮಗಾರಿಯಿಂದ ರಸ್ತೆ ಸಂಚಾರಿಗಳಿಗೆ ಕಿರಿಕಿರಿಯಾಗುತ್ತಿದ್ದರೆ, ಪೈಪ್‌ ಒಡೆದು ಹೋಗಿ ಹಿರೇಮಗಳೂರು ಬಡಾವಣೆಗೆ ಕಳೆದ 4 ದಿನದಿಂದ ಕುಡಿಯಲು ನೀರಿಲ್ಲದಂತಾಗಿದೆ. ಕಳೆದ ಆರೇಳು ತಿಂಗಳ ಬೇಸಿಗೆಯಲ್ಲಿ ಕಾಮಗಾರಿ ಕೈಗೊಳ್ಳದೆ ಸುಮ್ಮನಿದ್ದ ಗುತ್ತಿಗೆದಾರ ಈಗ ಮಳೆಗಾಲ ಆರಂಭವಾಗುತ್ತಿದ್ದಂತೆ ಕಾಮಗಾರಿ ಶುರುವಿಟ್ಟುಕೊಂಡು ನೂರಾರು ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಕಾಮಗಾರಿ ಕೂಡ ಕಳಪೆಯಾಗಿದ್ದು ದೂರು ನೀಡಲು ಎಂಜಿನಿಯರ್‌ ಇತ್ತ ತಲೆ ಹಾಕಿಲ್ಲ ಎಂದು ಅವರ ದೂರಾಗಿದೆ. ಈ ಎಲ್ಲ ಅಡಚಣೆಗಳನ್ನು ತಡೆಯಬೇಕಾದರೆ ಮಳೆಗಾಲ ಮುಗಿಯುವವರೆಗೂ ಕಾಮಗಾರಿ ತಡೆಹಿಡಿಯಬೇಕು ಹಾಗೂ ಕೂಡಲೆ ಪೈಪ್‌ ಲೈನ್‌ ದುರಸ್ತಿಪಡಿಸಿ ಗ್ರಾಮಕ್ಕೆ ನೀರು ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ