ಆ್ಯಪ್ನಗರ

ಕಡೂರು ಪುರಸಭೆ ಆಡಳಿತ ಬಿಜೆಪಿಗೆ: ಬೆಳ್ಳಿಪ್ರಕಾಶ

ಪುರಸಭೆಗೆ ಇದೇ 29ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಶಾಸಕ ಬೆಳ್ಳಿಪ್ರಕಾಶ್‌ ಹೇಳಿದರು.

Vijaya Karnataka 25 May 2019, 9:22 pm
ಕಡೂರು : ಪುರಸಭೆಗೆ ಇದೇ 29ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಶಾಸಕ ಬೆಳ್ಳಿಪ್ರಕಾಶ್‌ ಹೇಳಿದರು.
Vijaya Karnataka Web CKM-24kdr2


ಅವರು ತಮ್ಮ ಕಚೇರಿಯಲ್ಲಿ ಶುಕ್ರವಾರ ಪುರಸಭೆ ಚುನಾವಣೆಗೆ ಪಕ್ಷ ದ 6 ಅಂಶಗಳ ಕಾರ್ಯಕ್ರಮದ ಪ್ರಣಾಳಿಕೆ ಬಿಡುಗಡೆ ಮಾಡಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪುರಸಭೆಯ ಚುನಾವಣೆಗೆ ಅಭಿವೃದ್ಧಿಯೇ ನಮ್ಮ ಗುರಿ. ಸಹಕಾರವೇ ನಮ್ಮ ಶಕ್ತಿ ಯಾಗಿದೆ. ಕಡೂರು ಬಿಜೆಪಿ ನಗರ ಘಟಕವು 6 ಅಂಶಗಳನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಹೋಗಲಿದ್ದೇವೆ. ಅವುಗಳಲ್ಲಿ ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ, ಕುಡಿಯುವ ನೀರು, ರಸ್ತೆ, ಒಳಚರಂಡಿ, ಬೀದಿದೀಪ, ಸ್ವಚ್ಛತೆಗೆ ಆದ್ಯತೆ, ನಿವಾಸಿಗಳ ಪುರಸಭೆ ಕೆಲಸಕಾರ್ಯಗಳಿಗೆ ತ್ವರಿತಕ್ರಮ, ವಸತಿಹೀನ ಬಡಕುಟುಂಬಗಳ ವಸತಿಗೆ ವಿಶೇಷ ಆದ್ಯತೆ, ಬಡವರ ಅಲ್ಪಸಂಖ್ಯಾತರ ಆಸ್ತಿಗಳ ರಕ್ಷ ಣೆ, ಹಸಿರು ನಗರದ ಉದ್ದೇಶಗಳಿರುವ 6 ಅಂಶಗಳ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಮತಯಾಚಿಸಲಿದ್ದೇವೆ ಎಂದರು.

ಇರುವ 23 ವಾರ್ಡ್‌ಗಳಲ್ಲಿ 18 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮತದಾರರು ಈ ಬಾರಿ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಮತ್ತೊಮ್ಮೆ ಗೆಲ್ಲುವುದರ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದು ಇದು ಸಹ ನಮಗೆ ವರದಾನವಾಗಲಿದೆ ಎಂದರು.

ಜಿ.ಪಂ. ಸದಸ್ಯ ಕೆ.ಆರ್‌.ಮಹೇಶ್‌ ಒಡೆಯರ್‌, ತಾ.ಪಂ. ಸದಸ್ಯ ಜಿಗಣೆಹಳ್ಳಿ ಮಂಜು, ಲಕ್ಕಪ್ಪ, ಚಂದ್ರಶೇಖರ್‌ ಅಡಕೆ, ರಾಜನಾಯ್ಕ, ಶಾಮಿಯಾನ ಚಂದ್ರು, ಚಿನ್ನರಾಜು ಮತ್ತು ಮಚ್ಚೇರಿ ಓಂಕಾರಪ್ಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ