ಆ್ಯಪ್ನಗರ

ರಾಜಯೋಗದಿಂದ ಮನಸ್ಸು ನಿರ್ಮಲ

ರಾಜಯೋಗ ಅಭ್ಯಾಸದಿಂದ ಮನಸ್ಸು ನಿರ್ಮಲವಾಗುತ್ತದೆ. ಆತ್ಮಶುದ್ಧಿಯಿಂದ ಪರಮಾತ್ಮನನ್ನು ಕಾಣಲು ಸಾಧ್ಯಎಂದು ಪ್ರಜಾಪಿತ ಬ್ರಹ್ಮಾಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಸಂಚಾಲಕಿ ಬಿ.ಕೆ.ಭಾಗ್ಯಹೇಳಿದರು.

Vijaya Karnataka 21 Jan 2019, 5:00 am
ಚಿಕ್ಕಮಗಳೂರು : ರಾಜಯೋಗ ಅಭ್ಯಾಸದಿಂದ ಮನಸ್ಸು ನಿರ್ಮಲವಾಗುತ್ತದೆ. ಆತ್ಮಶುದ್ಧಿಯಿಂದ ಪರಮಾತ್ಮನನ್ನು ಕಾಣಲು ಸಾಧ್ಯಎಂದು ಪ್ರಜಾಪಿತ ಬ್ರಹ್ಮಾಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಸಂಚಾಲಕಿ ಬಿ.ಕೆ.ಭಾಗ್ಯಹೇಳಿದರು.
Vijaya Karnataka Web CKM-20rudrap9


ಬ್ರಹ್ಮಾಕುಮಾರೀಸ್‌ ಸಂಸ್ಥೆ ಸ್ಥಾಪಕ ಬಾಬಾ ಲೇಖ್‌ರಾಜ್‌ ಅವರ ಸ್ಮೃತಿ ದಿನದ ಅಂಗವಾಗಿ ನಗರದ ಬಸವನಹಳ್ಳಿಯ ಬ್ರಹ್ಮಾಕುಮಾರೀಸ್‌ ಸಂಸ್ಥೆಯ ಜ್ಞಾನಪ್ರಕಾಶ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವಶಾಂತಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಆತ್ಮದ ನಿಜ ಸ್ವರೂಪ ಶಾಂತಿ. ಆತ್ಮಸ್ಥಿತಿಯನ್ನು ಜಾಗೃತಗೊಳಿಸುವುದು ಅಗತ್ಯವಾಗಿದೆ. ಆತ್ಮಶಕ್ತಿಯನ್ನು ಪರಮಶಕ್ತಿಯೊಂದಿಗೆ ಜೋಡಣೆ ಮಾಡಿದಾಗ, ಶಾಂತಿ ಪ್ರಕಂಪನಗಳ ಮೂಲಕ ಮನೋಬಲ ಹೆಚ್ಚುತ್ತದೆ ಎಂದರು.

ಶಿಕ್ಷ ಣದಿಂದ ಉನ್ನತ ಹುದ್ದೆ, ಹಣ ದೊರೆಯುತ್ತದೆ. ಆದರೆ,ಮನೋ ವಿಕಾರಗಳನ್ನು ತ್ಯಜಿಸಲು ಆಧ್ಯಾತ್ಮಿಕ ಮಾರ್ಗದ ಅಗತ್ಯವಿದೆ. ರಾಜಯೋಗ ಅಭ್ಯಾಸದಿಂದ ಆತ್ಮದ ಅರಿವಾಗುತ್ತದೆ. ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು.

ಗೃಹ ರಕ್ಷ ಕದಳದ ಜಿಲ್ಲಾಕಮಾಂಡೆಂಟ್‌ ಅನಿಲ್‌ಕುಮಾರ್‌ ಮಾತನಾಡಿ, ಜಾಗತೀಕರಣದ ಅಬ್ಬರದಲ್ಲಿ ಮನುಷ್ಯ ತನ್ನತನವನ್ನು ಮರೆಯುತ್ತಿದ್ದಾನೆ. ಅದರಿಂದ ಪ್ರಪಂಚದಲ್ಲಿ ಅಶಾಂತಿ ಹೆಚ್ಚಾಗುತ್ತಿದೆ. ಮನೋವಿಕಾರಗಳನ್ನು ತ್ಯಜಿಸಿ ಎಲ್ಲರನ್ನು ಸಹೋದರತ್ವದಿಂದ ಕಾಣಬೇಕು. ವಿಶ್ವಮಾನವರಾಗಿ ಜೀವನ ಸಾಗಿಸಬೇಕು ಎಂದರು.

ಸ್ಪಂದನಾ ಕ್ಲಿನಿಕ್‌ ವೈದ್ಯ ಡಾ.ಸಂತೋಷ್‌ ನೆಹ್ತಾ ಮಾತನಾಡಿ, ವಿದೇಶಗಳನ್ನು ಗೆಲ್ಲುವುದರಿಂದ ವಿಶ್ವಶಾಂತಿ ದೊರಕುವುದಿಲ್ಲ. ಸಾಮಾನ್ಯ ಪ್ರಜೆಯ ಯೋಚನಾ ಲಹರಿಯಲ್ಲಿ ಶಾಂತಿ ಬಯಸಬೇಕು. ತನ್ನಲ್ಲಿ, ತನ್ನ ಸುತ್ತಲಿನ ಪರಿಸರದಲ್ಲಿ ಶಾಂತಿ ಕಾಪಾಡಬೇಕು. ಆಗ ದೇಶದಲ್ಲಿ ಶಾಂತಿ ನೆಲಸುತ್ತದೆ ಎಂದರು. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ನಿವೃತ್ತ ಅಧಿಕಾರಿ ಹೊನ್ನಪ್ಪ, ಟೌನ್‌ ಕೋಆಪರೇಟಿವ್‌ ಸೊಸೈಟಿಯ ಶ್ರೀನಿವಾಸ್‌, ಬ್ರಹ್ಮಾಕುಮಾರೀಸ್‌ ಸಂಸ್ಥೆಯ ನಂದಕುಮಾರ್‌, ಎಚ್‌.ಪಾಲಾಕ್ಷ ಮ್ಮ, ಲೋಕೇಶ್‌, ನಾಗೇಶ್‌, ಪ್ರೇಮಾ, ದೇವಿಕಾ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ