ಆ್ಯಪ್ನಗರ

ಜಾಗತಿಕ ಜನಸಂಖ್ಯಾ ನೀತಿ ಅಗತ್ಯ

ಪರಿಸರ ನಾಶ ಮತ್ತು ಅಸಮತೋಲನದಿಂದ ಮನುಷ್ಯಕುಲವೇ ನಿಷ್ಕ್ರಿಯ ಪ್ರಭೇದವಾಗುತ್ತಿದೆ ಎಂದು ಕುವೆಂಪು ವಿದ್ಯಾನಿಕೇತನ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ. ಶಂಕರ್‌ ಆತಂಕ ವ್ಯಕ್ತಪಡಿಸಿದರು.

Vijaya Karnataka 14 Jul 2019, 5:00 am
ಚಿಕ್ಕಮಗಳೂರು : ಪರಿಸರ ನಾಶ ಮತ್ತು ಅಸಮತೋಲನದಿಂದ ಮನುಷ್ಯಕುಲವೇ ನಿಷ್ಕ್ರಿಯ ಪ್ರಭೇದವಾಗುತ್ತಿದೆ ಎಂದು ಕುವೆಂಪು ವಿದ್ಯಾನಿಕೇತನ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ. ಶಂಕರ್‌ ಆತಂಕ ವ್ಯಕ್ತಪಡಿಸಿದರು.
Vijaya Karnataka Web CKM-12RUDRAP1


ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜನಸಂಖ್ಯಾ ಸಮಸ್ಯೆ ಬಹು ಸಂಕೀರ್ಣವಾಗಿದೆ. ಆಹಾರ, ಆರೋಗ್ಯ, ವಲಸೆ, ಬಡತನ, ಲಿಂಗಾನುಪಾತ, ಹೊಸ ಭಯಾನಕ ಮಾರಕ ಕಾಯಿಲೆಗಳು, ವಯೋವೃದ್ಧತೆ ಮತ್ತಿತರೆ ಎಲ್ಲ ಸಮಸ್ಯೆಗಳಿಗೆ ಜನಸಂಖ್ಯಾ ಸಮಸ್ಯೆ ಮೂಲ ಕಾರಣವಾಗಿದೆ ಎಂದು ಅಭಿಪ್ರಾಯಿಸಿದರು.

ಜಗತ್ತಿನ ಕೇವಲ ಒಂಬತ್ತು ದೇಶಗಳಾದ ಚೀನಾ, ಭಾರತ, ಬಾಂಗ್ಲಾ, ಪಾಕಿಸ್ತಾನ, ಇಂಡೋನೇಷ್ಯಾ, ನೈಜೀರಿಯಾ, ಅಲ್ಜೀರಿಯಾ, ದಕ್ಷಿಣ ಆಫ್ರಿಕಾದಲ್ಲಿ ಜನಸಂಖ್ಯಾ ಹೆಚ್ಚಳದ ಸಮಸ್ಯೆಯಾದರೆ ಉಳಿದ ರಾಷ್ಟ್ರಗಳಿಗೆ ಜನಸಂಖ್ಯಾ ಕೊರತೆ ಸಮಸ್ಯೆಯಾಗಿದೆ. ಹಾಗಾಗಿ ಜಾಗತಿಕ ಜನಸಂಖ್ಯಾ ನೀತಿಯ ಅಗತ್ಯವಿದೆ ಎಂದರು.

ಪ್ರಾಂಶುಪಾಲ ವಿ.ಎಸ್‌. ರಾಘವೇಂದ್ರ, ಉಪಪ್ರಾಂಶುಪಾಲ ಜ್ಯೋತಿಷ್‌ ಹಾಜರಿದ್ದರು. ವಿದ್ಯಾರ್ಥಿ ವಿಶ್ರುತ್‌ ನಿರೂಪಿಸಿ, ವಿದ್ಯಾರ್ಥಿನಿ ಶೌರ್ಯ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ