ಆ್ಯಪ್ನಗರ

ಜಿಲ್ಲಾಧಿಕಾರಿ ಅಮಾನತು ಆಗ್ರಹಿಸಿ ದಾವೆ

ರೈತರ ಒತ್ತುವರಿ ವಿಚಾರದಲ್ಲಿ ಉಚ್ಛ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸದ ಜಿಲ್ಲಾಧಿಕಾರಿ ವಿರುದ್ಧ ಸರಕಾರದ ಮುಖ್ಯ ಕಾರ್ಯದರ್ಶಿ ಬಳಿ ದಾವೆ ಹೂಡಲಾಗುವುದು ಎಂದು ಕೆಪಿಸಿಸಿ ರಾಜ್ಯ ಕಿಸಾನ್‌ ಸೆಲ್‌ ಅಧ್ಯಕ್ಷ ಸಚ್ಚಿನ್‌ ಮೀಗ ಹೇಳಿದರು.

Vijaya Karnataka 8 Aug 2018, 5:00 am
ಕೊಪ್ಪ :ರೈತರ ಒತ್ತುವರಿ ವಿಚಾರದಲ್ಲಿ ಉಚ್ಛ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸದ ಜಿಲ್ಲಾಧಿಕಾರಿ ವಿರುದ್ಧ ಸರಕಾರದ ಮುಖ್ಯ ಕಾರ್ಯದರ್ಶಿ ಬಳಿ ದಾವೆ ಹೂಡಲಾಗುವುದು ಎಂದು ಕೆಪಿಸಿಸಿ ರಾಜ್ಯ ಕಿಸಾನ್‌ ಸೆಲ್‌ ಅಧ್ಯಕ್ಷ ಸಚ್ಚಿನ್‌ ಮೀಗ ಹೇಳಿದರು.
Vijaya Karnataka Web the petition was filed by the deputy commissioner
ಜಿಲ್ಲಾಧಿಕಾರಿ ಅಮಾನತು ಆಗ್ರಹಿಸಿ ದಾವೆ


ಪಟ್ಟಣದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಬೆಳಗೊಳ ಗ್ರಾಮಸ್ಥರು ಮತ್ತು ಕಾಂಗ್ರೆಸ್‌ ರೈತ ವಿಭಾಗದ ವತಿಯಿಂದ ಸಣ್ಣ ಹಿಡುವಳಿದಾರರ ಜಮೀನು ತೆರವುಗೊಳಿಸಿದ ಅರಣ್ಯಾಧಿಕಾರಿ ಅಮಾನತ್ತು ಒತ್ತಾಯಿಸಿ ಆಯೋಜಿಸಿದ್ದ ಸಾಂಕೇತಿಕ ಮುತ್ತಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಚ್ಚಿನ್‌ ಮೀಗ ಮತ್ತು ಎಸ್‌.ಆರ್‌.ಹಿರೇಮಠ್‌ ವ್ಯಾಜ್ಯದ ವಿಚಾರದಲ್ಲಿ ರಾಜ್ಯ ಉಚ್ಛ ನ್ಯಾಯಾಲಯವು ನೀಡಿದ್ದ ತೀರ್ಪಿನಲ್ಲಿ ರೈತರು ಒತ್ತುವರಿ ಮಾಡಿದ್ದ 5 ಎಕರೆ ವರೆಗಿನ ಕಂದಾಯ ಭೂಮಿ ಮತ್ತು 3 ಎಕರೆ ವರೆಗಿನ ಅರಣ್ಯ ಭೂಮಿಯನ್ನು ತೆರವು ಮಾಡುವಂತಿಲ್ಲ. ಕಾಫಿ ಬೆಳೆಗಾರರು 10 ಎಕರೆ ವರೆಗೆ ಒತ್ತುವರಿ ಮಾಡಿದ್ದರೆ ಅವರಿಗೆ ಭೋಗ್ಯದ ಮೂಲಕ ನೀಡಲು ಸರಕಾರ ಆಯವ್ಯಯದಲ್ಲಿ ಪ್ರಸ್ತಾಪ ಮಾಡಿದೆ. ತಾಲೂಕಿನ ಬೆಳಗೊಳದಲ್ಲಿನ ಚಿಕ್ಕ ಹಿಡುವಳಿದಾರರಾದ ದೇವರಾಜ್‌, ಸುಮಂತ್‌, ಮಿತ್ರ, ಕೃಷ್ಣಮೂರ್ತಿ ಆಚಾರ್‌ ಮತ್ತು ರಾಘವೇಂದ್ರ ಇವರ ಜಮೀನನ್ನು ಅರಣ್ಯಾಧಿಕಾರಿ ತೆರವುಗೊಳಿಸಿ, ಅಡಕೆ, ಕಾಫಿ, ಬಾಳೆ, ಹಾಲವಾಣ, ಸಿಲ್ವರ್‌ ಗಿಡ ಕಡಿದು ಹಾಕಿದ್ದಾರೆ. ತೆರವುಗೊಳಿಸಿದ ಪ್ರದೇಶದಲ್ಲಿ ಗಿಡ ಕಡಿಯಲು ಅವರಿಗೆ ಯಾರೂ ಅಧಿಕಾರ ನೀಡಿಲ್ಲ. ಇವರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು. ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸದೆ ಇರುವ ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಆ.9ರಂದು ಸರಕಾರದ ಮುಖ್ಯ ಕಾರ್ಯದರ್ಶಿ ಬಳಿ ದಾವೆ ಹೂಡಲಾಗುವುದು ಎಂದರು.

ಸಂತ್ರಸ್ತರ ಪರವಾಗಿ ರಾಘವೇಂದ್ರ ಮಾತನಾಡಿ, ಕಳೆದ ಒಂದು ವಾರದಿಂದ ಅರಣ್ಯಾಧಿಕಾರಿ ತಂಡವು ನಮ್ಮ ಜಮೀನನ್ನು ತೆರವುಗೊಳಿಸಿ ಗಿಡ ಕಡಿಯುತ್ತಿದ್ದಾರೆ. ನಮಗೆ ಮಾನಸಿಕ ಹಿಂಸೆ ನೀಡಿದ್ದಾರೆ. ನಮಗಿಂತ ಹೆಚ್ಚು ಒತ್ತುವರಿ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಗ್ರಾಮಸ್ಥರಾದ ವಿಜಯೇಂದ್ರ, ಅನಿಲ್‌, ದುಗ್ಗಪ್ಪ, ವಾಸಪ್ಪ ಮತ್ತಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ