ಆ್ಯಪ್ನಗರ

ಕಾಶಿಗೂ -ರಾಮೇಶ್ವರಕ್ಕೂ ಅವಿನಾಭಾವ ಸಂಬಂಧ

ಮನುಷ್ಯನ ಜೀವನದ ಕೊನೆಯ ಸಂಕಲ್ಪ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ.ಕಾಶಿ -ರಾಮೇಶ್ವರ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದ್ದು ನಾವು ಕಾಶಿಯಿಂದ ಬಂದು ರಾಮೇಶ್ವರ ದೇವಾಲಯವನ್ನು ಉದ್ಘಾಟನೆ ಮಾಡಿರುವುದು ಸಂತಸ ತಂದಿದೆ ಎಂದು ಕಾಶಿ ಮಹಾಪೀಠದ ಜಂಗಮವಾಡಿ ಮಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತಾದ್ಪರು ಹೇಳಿದರು.

Vijaya Karnataka 9 Feb 2019, 5:00 am
ಆಲ್ದೂರು : ಮನುಷ್ಯನ ಜೀವನದ ಕೊನೆಯ ಸಂಕಲ್ಪ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ.ಕಾಶಿ -ರಾಮೇಶ್ವರ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದ್ದು ನಾವು ಕಾಶಿಯಿಂದ ಬಂದು ರಾಮೇಶ್ವರ ದೇವಾಲಯವನ್ನು ಉದ್ಘಾಟನೆ ಮಾಡಿರುವುದು ಸಂತಸ ತಂದಿದೆ ಎಂದು ಕಾಶಿ ಮಹಾಪೀಠದ ಜಂಗಮವಾಡಿ ಮಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತಾದ್ಪರು ಹೇಳಿದರು.
Vijaya Karnataka Web CKM-8ALDUR1A


ಹಾಂದಿ ಗ್ರಾಮದಲ್ಲಿ ಶುಕ್ರವಾರ ಶ್ರಿ ರಾಮೇಶ್ವರ ನೂತನ ದೇವಾಲಯ ಉದ್ಘಾಟಿಸಿ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಜೀವಿತಾ ಅವಧಿಯಲ್ಲಿ ಕಾಶಿ- ರಾಮೇಶ್ವರಕ್ಕೆ ಬಂದು ದರ್ಶನ ಮಾಡಲು ಸಾಧ್ಯವಿಲ್ಲ. ಆದರೆ ಇಂದು ಹಾಂದಿ ಗ್ರಾಮದಲ್ಲಿ ಉದ್ಘಾಟಿಸಿರುವ ರಾಮೇಶ್ವರ ದೇವರ ದರ್ಶನ ಮಾಡಿದರೆ ರಾಮೇಶ್ವರಕ್ಕೆ ಹೋದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.

ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಲಿಂಗೈಕ್ಯ ಬೊಮ್ಮೇಗೌಡರು ದೀಪಕ್ಕೆ ಎಣ್ಣೆಯಾಗಿ , ಶಕ್ತಿಯಾಗಿ , ಸತ್ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ಬೆಳಕಾಗಿದ್ದರು. ಅವರ ಸಂಕಲ್ಪದಂತೆ ಇಂದು ರಾಮೇಶ್ವರ ದೇವಸ್ಥಾನ ಉದ್ಘಾಟನೆಯಾಗಿದೆ.ಧರ್ಮ ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಾಸಗೊಳಿಸಬೇಕು. ಚಿಂತನೆಗಳು,ಆಲೋಚನೆಗಳು ಸಕಾರಾತ್ಮಕವಾಗಿರಬೇಕು,ಯಾರನ್ನೂ ನೋಯಿಸದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾ.ಪು. ದಿವ್ಯಪ್ರಸಾದ್‌ ಮಾತನಾಡಿ, ದಾನಿಗಳು ದೇಣಿಗೆ ನೀಡಿ ಸುಂದರ ದೇವಾಲಯದ ನಿರ್ಮಾಣಕ್ಕೆ ಸಹಕರಿಸಿದ್ದಾರೆ. ಇಂದು ಸಹ ದೇಣಿಗೆ ನೀಡಲು ಮುಂದೆ ಬರುತ್ತಿರುವುದು ಶ್ಲಾಘನೀಯ ಎಂದರು.

ಬೆಳಗ್ಗೆ ರಾಮೇಶ್ವರ ಸ್ವಾಮಿಗೆ ರುದ್ರಾಭಿಷೇಕ ಹಾಗೂ ಕುಂಭಾಭಿಷೇಕ ನಡೆದವು.ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಂದ ದೇವಾಲಯಕ್ಕೆ ಕಲಶಾರೋಹಣ ನಡೆಯಿತು. ರಾಮೇಶ್ವರ ಸ್ವಾಮಿಗೆ ಅಷ್ಟೋತ್ತರ , ಮಹಾಮಂಗಳಾರತಿ ನಡೆದವು. ಪ್ರಾಸ್ತಾವಿಕವಾಗಿ ಬಿ.ಬಿ. ರೇಣುಕಾರ್ಯ ಮಾತನಾಡಿದರು. ಜಿಲ್ಲಾ ಪಂ ಸದಸ್ಯ ನಿಖಿಲ್‌ ಚಕ್ರವರ್ತಿ , ರಾಜಶೇಖರ್‌ ಮಾತನಾಡಿದರು. ಧÜರ್ಮದರ್ಶಿಗಳಾದ ಭಗತ್‌, ವೀರಶೈವ ಸಮಾಜದ ಹೋಬಳಿಅಧ್ಯಕ್ಷ ಇ.ಸಿ.ಉಮೇಶ್‌, ನಿಶ್ಚಲ್‌,ತೀರ್ಥಪ್ಪ ಪಾಲ್ಗೊಂಡಿದ್ದರು. ದಾನಿಗಳಾದ ಲಲಿತಮ್ಮ ಪುಟ್ಟೇಗೌಡ, ನಿವೇಶನದ ದಾನಿಗಳಾದ ವೇದಾವತಿ ಬೊಮ್ಮೇಗೌಡ, ದೇವಸ್ಥಾನ ಸಮಿತಿ ಕಾರ್ಯದರ್ಶಿ ರಾಜಶೇಖರ್‌ ಸೇರಿದಂತೆ ದೇವಸ್ಥಾನಕ್ಕೆ ದೇಣಿಗೆ ನೀಡಿದ ಭಕ್ತಾದಿಗಳನ್ನು ಸನ್ಮಾನಿಸಲಾಯಿತು. ಜೀವಿತಾ ಪ್ರಾರ್ಥಿಸಿದರು. ಮಂಜುನಾಥ್‌ಸ್ವಾಮಿ ನಿರೂಪಿಸಿದರು. ಭಾಗ್ಯ ಕುಮಾರ್‌ ಸ್ವಾಗತಿಸಿ, ಯೋಗಿತ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ