ಆ್ಯಪ್ನಗರ

ಮಕ್ಕಳ ಏಳ್ಗೆಗೆ ತಂದೆ ಪಾತ್ರ ಅಪಾರ

ಅಪ್ಪನಾದವನು ಮಕ್ಕಳಿಗೆ ಮೊದಲ ಆದರ್ಶ ವ್ಯಕ್ತಿ ಎಂದು ಜಯಪುರದ ಬಿಜಿಎಸ್‌ ಕಾಲೇಜಿನ ಉಪನ್ಯಾಸಕ ಸೋಮೇಶ್‌ಗೌಡ ಹೇಳಿದರು.

Vijaya Karnataka 19 Jun 2019, 5:00 am
ಬಾಳೆಹೊನ್ನೂರು : ಅಪ್ಪನಾದವನು ಮಕ್ಕಳಿಗೆ ಮೊದಲ ಆದರ್ಶ ವ್ಯಕ್ತಿ ಎಂದು ಜಯಪುರದ ಬಿಜಿಎಸ್‌ ಕಾಲೇಜಿನ ಉಪನ್ಯಾಸಕ ಸೋಮೇಶ್‌ಗೌಡ ಹೇಳಿದರು.
Vijaya Karnataka Web CKM-18BHR3


ಬಾಳೆಹೊನ್ನೂರು ಚೈತನ್ಯ ಗೆಳೆಯರ ಬಳಗದಿಂದ ಶ್ರೀ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಫಾದರ್ಸ್‌ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪ್ಪ ಎಂದರೆ ಆಕಾಶವಾಗಿದ್ದು, ಯಾವುದೇ ತಂದೆಯೂ ಮುಂಗೋಪಿಯಾಗಿದ್ದರೂ ಸಹ ತನ್ನ ಮಕ್ಕಳಲ್ಲಿ ಮೃದುತ್ವ ತುಂಬುತ್ತಾನೆ. ಅಪ್ಪನನ್ನು ಜಗತ್ತಿನಲ್ಲಿ ಆಲದ ಮರಕ್ಕೆ ಹೋಲಿಸಲಿದ್ದು, ತನ್ನ ಮಕ್ಕಳ ಸುಖಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧನಿರುತ್ತಾನೆ.

ಅಪ್ಪ ಎನ್ನುವ ಪದಕ್ಕೆ ಕೇವಲ ತಂದೆ ಎಂಬ ಅರ್ಥವಲ್ಲದೇ, ಹಿರಿಯ, ಶ್ರೇಷ್ಠ, ಗುರು, ದೇವರು ಮುಂತಾದ ಅರ್ಥಗಳೂ ಇವೆ. ಜಗತ್ತಿನಲ್ಲಿ ತಾಯಿಯನ್ನು ಭೂಮಿಗೆ, ತಂದೆಯನ್ನು ಆಕಾಶಕ್ಕೆ ಹೋಲಿಸುವ ಪರಿಪಾಠವಿದೆ ಎಂದರು.

ಕೆಸವಿನಮನೆಯ ಪ್ರಗತಿಪರ ಕೃಷಿಕ ಕೆ.ಆರ್‌.ದೇವಪ್ಪಗೌಡ ಮಾತನಾಡಿ, ಮಕ್ಕಳ ಜೀವನದಲ್ಲಿ ಅಪ್ಪಂದಿರ ಪಾತ್ರ ಮಹತ್ವದ್ದಾಗಿದ್ದು, ಮಕ್ಕಳನ್ನು ಬೆಳೆಸಲು ತಂದೆಯಾದವನು ಜೀವನದಲ್ಲಿ ಅಪಾರ ಶ್ರಮ ಪಡುತ್ತಾನೆ. ಮಕ್ಕಳ ಏಳ್ಗೆಗಾಗಿ ತಂದೆಯ ಪಾತ್ರ ಹಿಮ್ಮೇಳದಲ್ಲಿ ನಮ್ಮ ಗಮನಕ್ಕೆ ಬಾರದೆ ಅಪಾರವಾಗಿರುತ್ತದೆ ಎಂದರು.

ಮಹಲ್ಗೋಡುವಿನ ಕೃಷಿಕ ಕೆ.ಜೆ.ಶ್ರೀನಿವಾಸ್‌ ಮಾತನಾಡಿದರು. ಬಾಲ ಪ್ರತಿಭೆಗಳಾದ ರಮ್ಯಕೃಷ್ಣ, ಸ್ಪಂದನ ಸುರೇಂದ್ರ, ಸಾಕ್ಷಿ ಅವರಿಂದ ತಂದೆಯ ದಿನದ ಮಹತ್ವದ ಗಾಯನ ಕಾರ್ಯಕ್ರಮ ನಡೆಯಿತು.

ನರಸಿಂಹರಾಜಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಚೈತನ್ಯ ವೆಂಕಿ, ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸತೀಶ್‌ ಅರಳೀಕೊಪ್ಪ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಮಂಜುನಾಥ್‌ ತುಪ್ಪೂರು, ಪತ್ರಕರ್ತ ಬಿ.ಎಸ್‌.ನಾಗಾಜ್‌, ಅಂಚೆಪಾಲಕ ಬಿ.ಎಸ್‌.ಶ್ರೀನಿವಾಸ್‌, ಜೇಸಿ ನಿಕಟಪೂರ್ವಾಧ್ಯಕ್ಷ ಬಿ.ಎಚ್‌.ಮನುಕುಮಾರ್‌, ಎಚ್‌.ಗೋಪಾಲ್‌, ದಯಾಕರ್‌ ಸುವರ್ಣ, ಓ.ಡಿ.ಸ್ಟೀಫನ್‌, ರೆನ್ನಿ ದೇವಯ್ಯ, ರಿಚರ್ಡ್‌ ಮಥಾಯಿಸ್‌, ಡಿ.ರಾಜೇಂದ್ರ, ಹುಸೇನ್‌, ಕೆ.ಎಂ.ರಾಘವೇಂದ್ರ, ರಾಮ್‌ಪ್ರಸಾದ್‌, ಕೆ.ಪ್ರಸಾದ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ