ಆ್ಯಪ್ನಗರ

ಸದ್ಗುಣಗಳೆ ಮಾನವೀಯ ಮೌಲ್ಯ

ತಾನೂ ಬದುಕಿ ಇತರರನ್ನೂ ಬದುಕಲು ಬಿಡುವುದೇ ಮಾನವೀಯತೆ ಎಂದು ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಹೇಳಿದರು.

Vijaya Karnataka 16 Dec 2019, 5:00 am
ಚಿಕ್ಕಮಗಳೂರು: ತಾನೂ ಬದುಕಿ ಇತರರನ್ನೂ ಬದುಕಲು ಬಿಡುವುದೇ ಮಾನವೀಯತೆ ಎಂದು ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಹೇಳಿದರು.
Vijaya Karnataka Web the virtues are humanitarian value
ಸದ್ಗುಣಗಳೆ ಮಾನವೀಯ ಮೌಲ್ಯ


ನಗರದ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿರೋಟರಿ ಕಾಫಿಲ್ಯಾಂಡ್‌ ಶನಿವಾರ ಆಯೋಜಿಸಿದ್ದ ಕಾರ‍್ಯಕ್ರಮದಲ್ಲಿಮಾನವೀಯ ಮೌಲ್ಯದ ಬಗ್ಗೆ ಅವರು ವಿಶೇಷ ಉಪನ್ಯಾಸ ನೀಡಿ ಸಂವಾದಿಸಿದರು.

ಸೇವೆ, ಪ್ರೀತಿ, ಪ್ರೇಮ, ಸೌಹಾರ್ದತೆ, ಸಹಿಷ್ಣುತೆ, ಸಹೋದರತೆ, ಅಹಿಂಸೆ ಮತ್ತಿತರ ಸದ್ಗುಣಗಳೆ ಮಾನವೀಯ ಮೌಲ್ಯಗಳು. ಇವುಗಳನ್ನು ಅರಿತು ಆಚರಣೆಗೆ ತಂದಿದ್ದೇ ಆದರೆ ಆರೋಗ್ಯಪೂರ್ಣ ಸಮಾಜ ನಮ್ಮದಾಗುತ್ತದೆ. ನಾವು ಸುಖ, ಸಂತೋಷ, ನೆಮ್ಮದಿಯಿಂದ ಬದುಕಬೇಕು ಎಂಬ ಅಪೇಕ್ಷೆಯಂತೆ ಇತರರೂ ನಮ್ಮಂತೆ ಬಾಳಿ ಬದುಕಬೇಕೆಂಬ ಉದಾರತೆ ನಿಜವಾದ ಖುಷಿಯನ್ನು ತಂದುಕೊಡುತ್ತದೆ ಎಂದರು.

12ನæೕ ಶತಮಾನದ ಶರಣರು ಸಮಾಜೋದ್ಧಾರ ಕಾರ‍್ಯಗಳ ಮೂಲಕ ಮಾನವೀಯ ಮೌಲ್ಯಗಳನ್ನು ನೆಲೆಗೊಳಿಸಲು ಪರಿಶ್ರಮಿಸಿದರು. ಅನೇಕ ವಚನಗಳ ಮೂಲಕ ಮಾನವೀಯ ಗುಣಲಕ್ಷಣಗಳನ್ನು ಸಾದರಪಡಿಸಿದ್ದಾರೆ. ಜಗತ್ತಿನ ಅನೇಕ ದಾರ್ಶನಿಕರು ಸಾಧುಸತ್ಪುರುಷರು, ಸಂತ, ಆಚಾರ್ಯರು ಒಳ್ಳೆಯ ಗುಣಗಳನ್ನು ಬೋಧಿಸಿದ್ದಾರೆ. ವಿಚಾರಗಳು ಆಚರಣೆಗೆ ಇಳಿಯಬೇಕು. ನುಡಿದಂತೆ ನಡೆಯುವುದನ್ನು ಕಲಿಯಬೇಕು ಎಂದು ಹೇಳಿದರು.

ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಮಾನವೀಯ ನೆಲೆಯಲ್ಲಿಸಾರ್ಥಕ ಸೇವೆಯನ್ನು ಶತಮಾನದಿಂದ ಮಾಡಿಕೊಂಡು ಬಂದಿದೆ. ಪ್ರತಿಫಲಾಪೇಕ್ಷಿಸದ ನಿಸ್ವಾರ್ಥವಾದ ನೆರವನ್ನು ಸೇವೆ ಎನ್ನಬಹುದು. ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿರೋಟರಿ ಜಗತ್ತಿನಾದ್ಯಂತ ನಿರ್ವಹಿಸುತ್ತಿರುವ ಸೇವಾಕಾರ‍್ಯಗಳು ಮಾನವೀಯತೆಯನ್ನು ಎತ್ತಿಹಿಡಿಯುತ್ತಿದೆ ಎಂದ ತಿಪ್ಪೇರುದ್ರಪ್ಪ, ಬಾಳಸಂಧ್ಯಾ ಕಾಲದಲ್ಲಿಹಿರಿಯ ನಾಗರಿಕರಿಗೆ ಆಸರೆಯಾಗಿರುವ 'ಜೀವನಸಂಧ್ಯಾ' ಉತ್ತಮ ಯೋಜನೆ ಎಂದು ಉದಾಹರಿಸಿದರು.

ರೋಟರಿ ಕಾಫಿ ಲ್ಯಾಂಡ್‌ ಅಧ್ಯಕ್ಷ ಬಿ.ಕೆ.ಗುರುಮೂರ್ತಿ ಸ್ವಾಗತಿಸಿ, ಕಾರ‍್ಯದರ್ಶಿ ರುದ್ರೇಶ್‌ ಕಡೂರ್‌ ಅತಿಥಿ ಪರಿಚಯಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ