ಆ್ಯಪ್ನಗರ

ಚಿಕ್ಕಮಗಳೂರಿನ ಶಕುನ ರಂಗನಾಥ ಸ್ವಾಮಿ ದೇವಾಲಯದ ಹುಂಡಿ ಕಳ್ಳತನ: ಲಕ್ಷಾಂತರ ರೂ. ಹಣ ಕದ್ದೊಯ್ದ ಕಳ್ಳರು

ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶಕುನ ರಂಗನಾಥ ಸ್ವಾಮಿ ದೇವಾಲಯದಲ್ಲಿ 4 ಲಕ್ಷಕ್ಕೂ ಹೆಚ್ಚು ಹಣವಿದ್ದ 4 ಹುಂಡಿ ಕಳ್ಳತನವಾಗಿದೆ. 8 ಕ್ಕೂ ಹೆಚ್ಚು ಕಳ್ಳರು ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.

Vijaya Karnataka Web 30 May 2019, 12:38 pm
ಚಿಕ್ಕಮಗಳೂರು: ದೇವಾಲಯದ ಹುಂಡಿಯನ್ನೇ ಕಳ್ಳರು ಕದ್ದೊಯ್ದ ಘಟನೆ ಜಿಲ್ಲೆಯ ಸಖರಾಯಪಟ್ಟದಲ್ಲಿ ನಡೆದಿದೆ. ಇತಿಹಾಸ ಪ್ರಸಿದ್ಧ ಶಕುನ ರಂಗನಾಥ ಸ್ವಾಮಿ ದೇವಾಲಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.
Vijaya Karnataka Web 22


ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶಕುನ ರಂಗನಾಥ ಸ್ವಾಮಿ ದೇವಾಲಯದಲ್ಲಿ 4 ಲಕ್ಷಕ್ಕೂ ಹೆಚ್ಚು ಹಣವಿದ್ದ 4 ಹುಂಡಿ ಕಳ್ಳತನವಾಗಿದೆ. 8ಕ್ಕೂ ಹೆಚ್ಚು ಕಳ್ಳರು ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಈ ದೇವಾಲಯದಲ್ಲಿ ಈ ಹಿಂದೆಯೂ ಹಲವು ಬಾರಿ ಕಳ್ಳತನವಾಗಿದೆ ಎಂದು ತಿಳಿದುಬಂದಿದ್ದು, 4ನೇ ಬಾರಿ ಹುಂಡಿ ಕಳ್ಳತನವಾಗುತ್ತಿದೆಯಂತೆ. ಈ ಸಂಬಂಧ ಸಖರಾಯಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಜತೆಗೆ ಬೆರಳಚ್ಚು ತಜ್ಞರು ಹಾಗೂ ಡಾಗ್ ಸ್ವ್ಕಾಡ್ ತಂಡದವರು ಸಹ ತನಿಖೆ ನಡೆಸಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ