ಆ್ಯಪ್ನಗರ

ಭದ್ರಾ ಹುಲಿ ಸಂರಕ್ಷಿತ ವಲಯದಲ್ಲಿ ಗಬ್ಬದ ಹುಲಿ ಸಾವು

ಭದ್ರಾ ಹುಲಿ ಸಂರಕ್ಷಿತ ಹೆಬ್ಬೆ ವಲಯದ ತೇಗೂರು ಗುಡ್ಡದ ಬಳಿ ಗಬ್ಬದ ಹುಲಿ, ಹೊಟ್ಟೆಯೊಳಗಿದ್ದ ಎರಡು ಮರಿಗಳು ಮೃತಪಟ್ಟಿವೆ.

Vijaya Karnataka 24 Feb 2019, 5:00 am
ಚಿಕ್ಕಮಗಳೂರು : ಭದ್ರಾ ಹುಲಿ ಸಂರಕ್ಷಿತ ಹೆಬ್ಬೆ ವಲಯದ ತೇಗೂರು ಗುಡ್ಡದ ಬಳಿ ಗಬ್ಬದ ಹುಲಿ, ಹೊಟ್ಟೆಯೊಳಗಿದ್ದ ಎರಡು ಮರಿಗಳು ಮೃತಪಟ್ಟಿವೆ.
Vijaya Karnataka Web CKM-23aragap1


ಸುಮಾರು ಎಂಟು ವರ್ಷದ ಹುಲಿಯ ಬೆನ್ನಿನ ಮೇಲೆ ಸಣ್ಣ ಪ್ರಮಾಣದ ಗಾಯದ ಗುರುತುಗಳು ಕಂಡುಬಂದಿವೆ. ದೇಹದ ಎಡಭಾಗ ಕೊಳೆತಿದ್ದು, ಎರಡು ಮರಿಗಳೂ ತಾಯಿಯ ಹೊಟ್ಟೆಯಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ.

ಮರಣೋತ್ತರ ಪರೀಕ್ಷೆ ಸಂದರ್ಭ ಹುಲಿಯ ಹೊಟ್ಟೆಯೊಳಗೆ ದನದ ಮಾಂಸ, ದನಗಳ ಕಿವಿಗೆ ಹಾಕುವ ಪ್ಲಾಸ್ಟಿಕ್‌ ಓಲೆ ಸಿಕ್ಕಿದ್ದು, ವಿಷಪ್ರಾಶನದಿಂದ ಮೃತಪಟ್ಟಿರುವ ಶಂಕೆ ಮೂಡಿದೆ. ಹೆಬ್ಬೆ ವಲಯದಲ್ಲಿ ಎರಡು ವರ್ಷಗಳ ಹಿಂದೆ ಎರಡು ಹುಲಿಗಳು ಪರಸ್ಪರ ಕಾದಾಟದಲ್ಲಿ ಮೃತಪಟ್ಟಿದ್ದವು.

ಪಶು ವೈದ್ಯಾಧಿಕಾರಿ ವಿನಯ್‌, ಜಯರಾಮ್‌ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ, ಹೆಬ್ಬೆ ವಲಯ ಅರಣ್ಯಾಧಿಕಾರಿ ಮಂಜುನಾಥ್‌, ವೈಲ್ಡ್‌ಲೈಫ್‌ ವಾರ್ಡನ್‌ ಹೊನ್ನಾಳು ಸತೀಶ್‌, ಮಹೇಂದ್ರ ಜೈನ್‌ ಸಮ್ಮುಖದಲ್ಲಿ ಕಳೇಬರವನ್ನು ದಹನ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ