ಆ್ಯಪ್ನಗರ

ಸಾಧಕರಿಗಿದು ಅವಕಾಶದ ಕಾಲ : ಶಾಸಕ

ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ವೃತ್ತಿಯು ಜಾತಿಗೆ ಮೀಸಲಾಗಿಲ್ಲ.ಶಿಕ್ಷ ಣದಲ್ಲಿ ಪ್ರಗತಿ ಸಾಧಿಸಿ ಉನ್ನತ ಹುದ್ದೆ ಪಡೆಯುವ ಅವಕಾಶ ಎಲ್ಲರಿಗೂ ಇದೆ ಎಂದು ಶಾಸಕ ಹಾಗೂ ಎಂಎಡಿಬಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.

Vijaya Karnataka 11 Feb 2019, 5:00 am
ಶೃಂಗೇರಿ : ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ವೃತ್ತಿಯು ಜಾತಿಗೆ ಮೀಸಲಾಗಿಲ್ಲ.ಶಿಕ್ಷ ಣದಲ್ಲಿ ಪ್ರಗತಿ ಸಾಧಿಸಿ ಉನ್ನತ ಹುದ್ದೆ ಪಡೆಯುವ ಅವಕಾಶ ಎಲ್ಲರಿಗೂ ಇದೆ ಎಂದು ಶಾಸಕ ಹಾಗೂ ಎಂಎಡಿಬಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.
Vijaya Karnataka Web CKM-10SRI1


ಪಟ್ಟಣದ ಕಾಳಿಕಾಂಬಾ ರಸ್ತೆಯಲ್ಲಿರುವ ಆರ್ಯ ಈಡಿಗರ ಸಂಘದ ಕಟ್ಟಡದಲ್ಲಿ ಆರ್ಯ ಈಡಿಗರ ಸಂಘ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿ ವೇತನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಈಡಿಗರ ಕುಲ ಕಸುಬನ್ನೇ ವೃತ್ತಿಯಾಗಿ ಪಡೆದು ಜೀವನ ನಿರ್ವಹಣೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.ದೇಶಕ್ಕೆ ಹಾಗೂ ರಾಜ್ಯಕ್ಕೆ ನಿಮ್ಮ ಸಮುದಾಯದ ಕೊಡುಗೆ ಅಪಾರವಾಗಿದ್ದು,ಚಿತ್ರ ರಂಗದ ಮೇರು ನಟ ಡಾ.ರಾಜಕುಮಾರ್‌ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಈಡಿಗರ ಕೊಡುಗೆ ಇದೆ.ಈಗ ಶಿಕ್ಷ ಣ ಪಡೆಯುವುದು ಎಲ್ಲರ ಹಕ್ಕು ಆಗಿದ್ದು,ಅವಕಾಶವು ಮುಕ್ತವಾಗಿದೆ.ಶಿಕ್ಷ ಣ ಪಡೆಯುವ ವಿದ್ಯಾರ್ಥಿಗಳಿಗೆ ಸಮಾಜ ಹಾಗೂ ಸಮುದಾಯದ ನೆರವು ದೊರಕುತ್ತಿದೆ.ಹಾಲಿ ನಿರ್ಮಾಣ ಹಂತದಲ್ಲಿರುವ ಭವನಕ್ಕೆ ಶಾಸಕರ ಅನುದಾನದಲ್ಲಿ ಹತ್ತು ಲಕ್ಷ ರೂ.ನೀಡುವುದಾಗಿ ಹಾಗೂ ಸರಕಾರದಿಂದ ನೆರವು ನೀಡುವ ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಅಗಸವಳ್ಳಿ ನಾರಾಯಣ ಮಾತನಾಡಿ,ನಮ್ಮ ಸಮಾಜ ಬಂಧುಗಳು ತಾಲೂಕಿನಲ್ಲಿ ಸಾಕಷ್ಟು ಇದ್ದರೂ ಸಂಘಟನೆಯ ಕೊರತೆಯಿಂದ ನಿರ್ಮಾಣ ಹಂತದ ಕಟ್ಟಡವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.1986 ರಲ್ಲಿ ಸಂಘಕ್ಕೆ ನಿವೇಶನ ಮಂಜೂರಾತಿಯಾಗಿದ್ದು,ಮೂರು ಕೋಟಿ ರೂ.ಕಟ್ಟಡ ನಿರ್ಮಾಣವಾಗುತ್ತಿದೆ.ಈಗಾಗಲೇ 1.5 ಕೋಟಿ ರೂ ಕಾಮಾಗಾರಿ ಮುಗಿದಿದ್ದು,ಶಾಸಕರು ಹಾಗೂ ಸರಕಾರದ ನೆರವು ಪಡೆದು ಕಟ್ಟಡವನ್ನು ಪೂರ್ಣಗೊಳಿಸಲಾಗುತ್ತದೆ.ಸಮಾಜ ಬಂಧುಗಳಿಗೆ ವಿವಿಧ ರೀತಿಯ ನೆರವು,ವಿದ್ಯಾರ್ಥಿ ವೇತನ ಮುಂತಾದ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಇದೇ ಸಂದರ್ಭ ಅಡಕೆ ಸುಲಿಯುವ ಯಂತ್ರ ಹಾಗೂ ಕೃಷಿ ಉಪಕರಣದ ಆವಿಷ್ಕಾರ ನಡೆಸಿರುವ ಸಿ.ವಿ.ನಟರಾಜ್‌ ಅವರನ್ನು ಅಭಿನಂದಿಸಲಾಯಿತು.ಜೆ.ಪಿ.ನಾರಾಯಣಸ್ವಾಮಿ ದತ್ತಿನಿಧಿ ಮತ್ತಿತರ ಪ್ರೋತ್ಸಾಹ ಧನವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಜಿಪಂ ಸದಸ್ಯರಾದ ಎನ್‌.ಆರ್‌.ಪುರ ಸದಾಶಿವ,ಶಿಲ್ಪಾರವಿ,ತಾಪಂ ಅಧ್ಯಕ್ಷೆ ಜಯಶೀಲ,ಸದಸ್ಯರಾದ ರೇಖಾ,ಕೆ.ಆರ್‌.ವೆಂಕಟೇಶ್‌,ಸಮಾಜದ ಮುಖಂಡರಾದ ಎಂ.ಎಸ್‌.ರಾಮಸ್ವಾಮಿ,ಸುಬ್ರಾಯ ನಾಯ್ಕ್‌,ಎಂ.ಆರ್‌.ಪೂರ್ಣೇಶ್‌,ಲಕ್ಷ ್ಮಣ ನಾಯ್ಕ್‌,ಹೆಗ್ತೂರು ಗಿರೀಶ್‌,ಎಚ್‌.ಆರ್‌.ವಿಷ್ಣುಮೂರ್ತಿ,ಎ.ಎಸ್‌.ವೆಂಕಟೇಶ್‌,ಜಿ.ಎನ್‌.ಸುಬ್ರಮಣ್ಯ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ