ಆ್ಯಪ್ನಗರ

ಮದ್ಯಮುಕ್ತರನ್ನಾಗಿಸುವುದೆ ದೇವರ ಸೇವೆ

ಮದ್ಯವ್ಯಸನಿಯನ್ನು ಮದ್ಯಮುಕ್ತರನ್ನಾಗಿಸುವುದೆ ದೇವರ ಸೇವೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅರವಿಂದ ಸೋಮಯಾಜಿ ಹೇಳಿದರು.

Vijaya Karnataka 19 Jun 2019, 5:00 am
ಕೊಪ್ಪ: ದ್ಯವ್ಯಸನಿಯನ್ನು ಮದ್ಯಮುಕ್ತರನ್ನಾಗಿಸುವುದೆ ದೇವರ ಸೇವೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅರವಿಂದ ಸೋಮಯಾಜಿ ಹೇಳಿದರು.
Vijaya Karnataka Web CKM-18KPH1


ಪಟ್ಟಣದಲ್ಲಿ ವೇದಿಕೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ನವಜೀವನ ಪೋಷಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ನವಜೀವನ ಸಮಿತಿ ಸದಸ್ಯ ಕನಿಷ್ಟ 50 ಮಂದಿಯನ್ನು ಮದ್ಯ ಮುಕ್ತರನ್ನಾಗಿಸಲು ಶ್ರಮಿಸಬೇಕು. ದುಶ್ಚಟದಿಂದ ಕಾಯಿಲೆ ಉದ್ಭವಿಸುತ್ತದೆ. ಕಾಯಿಲೆ ರಹಿತ, ನಗು ತುಂಬಿದ, ಕಡಿಮೆ ವೆಚ್ಚದಲ್ಲಿ ಅತಿಹೆಚ್ಚು ಸುಖ ಪಡುವುದೆ ಶ್ರೀಮಂತಿಕೆ ಜೀವನವಾಗಿದೆ. ಇದು ಡಾ.ವೀರೇಂದ್ರ ಹೆಗ್ಗಡೆಯವರ ಆಶಯವಾಗಿದೆ. ಅದರ ಅನುಷ್ಠಾನಕ್ಕಾಗಿ ಇಂತಹ ತರಬೇತಿ ನೀಡಲಾಗುತ್ತಿದೆ ಎಂದರು.

ಸಂಪನ್ಮೂಲ ವ್ಯೆಕ್ತಿ ವೇದಿಕೆಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್‌ ಮಾತನಾಡಿ, ಪರಸ್ಪರ ನಂಬಿಕೆ, ಒಗ್ಗಟ್ಟು, ಬದ್ಧತೆ, ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಲು ನಾವು ಸಂಘಟಿತರಾಗಬೇಕು. ಕನಿಷ್ಟ ತಿಂಗಳಿಗೊಂದು ಸಭೆ ಆಯೋಜಿಸಬೇಕು. ಶ್ರೀ ಕ್ಷೇತ್ರದ ವತಿಯಿಂದ ಸ್ವ ಉದ್ಯೋಗ ಮಾಡಲಿಚ್ಛಿಸುವ ನವಜೀವನ ಸಮಿತಿ ಸದಸ್ಯರಿಗೆ ವಿಶೇಷ ಅನುದಾನ ನೀಡಲಾಗುವುದು. ರಾಜ್ಯದಲ್ಲಿ ಈಗಾಗಲೆ 86 ಸಾವಿರ ರೂ. ಸಹಾಯಧನವನ್ನು ಜನಜಾಗೃತಿ ವೇದಿಕೆ ಮೂಲಕ ನೀಡಲಾಗಿದೆ. ಸ್ವಾರ್ಥ ತ್ಯೆಜಿಸಿ, ಸಂತೋಷದ ಬದುಕು ಸಾಗಿಸಿ ಎಂದರು.

ರಾಘವೇಂದ್ರ ಭಟ್‌, ಬಾಲಕೃಷ್ಣ, ಜಿ.ಆರ್‌.ವಿಶ್ವನಾಥ್‌, ಎಲ್‌.ಎಂ.ಪ್ರಕಾಶ್‌ ಮತ್ತಿತರರು ಹಾಜರಿದ್ದರು.

ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಡಿ.ದಿನೇಶ್‌ ಸ್ವಾಗತಿಸಿ, ಜಿಲ್ಲಾ ನಿರ್ದೇಶಕ ಪ್ರಕಾಶ್‌ ರಾವ್‌ ಪ್ರಾಸ್ತಾವಿಕ ನುಡಿದು, ಮಂಜುನಾಥ್‌ ವಂದಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ನವಜೀವನ ಸಮಿತಿ ಸದಸ್ಯರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ