ಆ್ಯಪ್ನಗರ

ಕಾಡಾನೆ ಕಾಟಕ್ಕೆ ರೊಚ್ಚಿಗೆದ್ದ ಜನ

ತಾಲೂಕಿನಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ, ಜನರು ರೊಚ್ಚಿಗೆದಿದ್ದಾರೆ. ಜನರಿಗೆ ಉತ್ತರ ಹೇಗೆ ನೀಡುವುದು? ಅರಣ್ಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ, ಸಭೆಗೆ ಅಧಿಕಾರಿ ಸಭೆಗೆ ಕರೆಸಿ ಎಂದು ತಾ.ಪಂ. ಇಒಗೆ ಅಧ್ಯಕ್ಷ ಕೆ.ಸಿ.ರತನ್‌ ತರಾಟೆಗೆ ತೆಗೆದುಕೊಂಡರು.

Vijaya Karnataka 25 Jul 2019, 5:00 am
ಮೂಡಿಗೆರೆ : ತಾಲೂಕಿನಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ, ಜನರು ರೊಚ್ಚಿಗೆದಿದ್ದಾರೆ. ಜನರಿಗೆ ಉತ್ತರ ಹೇಗೆ ನೀಡುವುದು? ಅರಣ್ಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ, ಸಭೆಗೆ ಅಧಿಕಾರಿ ಸಭೆಗೆ ಕರೆಸಿ ಎಂದು ತಾ.ಪಂ. ಇಒಗೆ ಅಧ್ಯಕ್ಷ ಕೆ.ಸಿ.ರತನ್‌ ತರಾಟೆಗೆ ತೆಗೆದುಕೊಂಡರು.
Vijaya Karnataka Web tp monthly kdp meeting
ಕಾಡಾನೆ ಕಾಟಕ್ಕೆ ರೊಚ್ಚಿಗೆದ್ದ ಜನ


ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಬುಧವಾರ ಮಾಸಿಕ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿ ಕಾರಿದರು.

ಸಭೆ ಆರಂಭದಲ್ಲಿ ತಾಲೂಕು ಆರೋಗ್ಯಾಧಿಕಾರಿ, ಅರಣ್ಯ ಇಲಾಖೆ ಅಧಿಕಾರಿ ಸಭೆಗೆ ಹಾಜರಿರಲಿಲ್ಲ. ಅವರ ಬದಲಾಗಿ ಇಲಾಖೆ ಸಿಬ್ಬಂದಿಗಳನ್ನು ಸಭೆಗೆ ಕಳುಹಿಸಲಾಗಿತ್ತು. ಇದನ್ನು ಗಮನಿಸಿದ ತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌ ಅವರು, ಸಭೆಗೆ ಸಂಬಂಧಿಸಿದ ಅಧಿಕಾರಿಗಳು ಬರಬೇಕೆ ಹೊರತು, ಅವರ ಬದಲಿಗೆ ಬೇರೆಯವರನ್ನು ಬರಲು ನಿಯಮದಲ್ಲಿ ಅವಕಾಶವಿಲ್ಲ. ಹಾಗೇನಾದರೂ ಬೇರೆಯವರನ್ನು ಕಳುಹಿಸುವುದಾದರೆ ಮೊದಲೇ ತಾ.ಪಂ.ಗೆ ಮಾಹಿತಿ ನೀಡಿರಬೇಕು ಎಂದು ಪ್ರತಿ ಸಭೆಯಲ್ಲೂ ತಿಳಿಸಲಾಗುತ್ತದೆ. ಆದರೂ ಅಧಿಕಾರಿಗಳು ಅದೇ ತಪ್ಪು ಮಾಡುತ್ತಿದ್ದಾರೆ ಎಂದು ದೂರಿದರು.,

ಉಪಾಧ್ಯಕ್ಷೆ ಸವಿತಾ ರಮೇಶ್‌ ಮಾತನಾಡಿ, ಕಿರುಗುಂದ ಶಾಲೆಯಲ್ಲಿರುವ ಮರವೊಂದನ್ನು ಮುಖ್ಯ ಶಿಕ್ಷ ಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ರು ಸೇರಿ ಯಾರ ಗಮನಕ್ಕೂ ತರದೇ 5 ಸಾವಿರಕ್ಕೆ ಮಾರಿದ್ದಾರೆ. ಎಸ್‌ಡಿಎಂಸಿ ಬದಲಾಯಿಸಿ. ಶಿಕ್ಷ ಕರ ಮೇಲೆ ಕ್ರಮ ಕೈಗೊಳ್ಳಿ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿಗೆ ತಿಳಿಸಿದರು.

ತಾಲೂಕಿನಾದ್ಯಂತ ಡೆಂಗೆ ಹೆಚ್ಚಾಗಿದೆ. ಡೆಂಗೆ ಬಾರದಂತೆ ಪರಿಸರ ಶುಚಿಯಾಗಿಟ್ಟುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷ ಕೆ.ಸಿ.ರತನ್‌ ಪ್ರಶ್ನಿಸಿದಾಗ, ಡೆಂಗೆ ಹೆಚ್ಚಾಗಿದೆ. ಇಲ್ಲಿಯೇ ಚಿಕಿತ್ಸೆ ನೀಡಿದರೆ ಚಿಕಿತ್ಸೆ ಫಲಕಾರಿಯಾಗಬಹುದು ಹಾಗಾಗಿ ರೋಗಿಗಳ ಆರೋಗ್ಯ ದೃಷ್ಟಿಯಿಂದ ಡೆಂಗೆ ರೋಗಿಗಳನ್ನು ಚಿಕ್ಕಮಗಳೂರಿಗೆ ಕಳುಹಿಸಲಾಗುತ್ತಿದೆ ಎಂದು ಎಂಜಿಎಂ ಆಸ್ಪತ್ರೆ ಅಧಿಕಾರಿ ಮಂಜುಳಾ ಸಭೆಗೆ ಮಾಹಿತಿ ನೀಡಿದರು.

ಸಭೆ ಪ್ರಾರಂಭಗೊಳ್ಳುವ ಮುನ್ನ ಜಿ.ಪಂ. ಅನುದಾನದಲ್ಲಿ ಜಿ.ಪಂ. ಸದಸ್ಯೆ ಸುಧಾ ಯೋಗೇಶ್‌ ಅವರ ವ್ಯಾಪ್ತಿಯ 7 ಪಂಚಾಯಿತಿಯಲ್ಲಿ ಫಲಾನುಭವಿಗಳಿಗೆ ಪಶು ಇಲಾಖೆಯಿಂದ ಕೋಳಿ ಮರಿಗಳನ್ನು ವಿತರಿಸಲಾಯಿತು. ತಾ.ಪಂ. ಉಪಾಧ್ಯಕ್ಷ ಸವಿತಾ ರಮೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್‌ ಕುಮಾರ್‌, ಜಿ.ಪಂ. ಸದಸ್ಯೆ ಸುಧಾ ಯೋಗೇಶ್‌, ಕಾರ್ಯ ನಿರ್ವಹಕ ಅಧಿಕಾರಿ ವೆಂಕಟೇಶ್‌ ಹಾಜರಿದ್ದರು.
------
ಆಟ ಆಡ್ತಾ ಇದ್ದೀರಾ

ಹೆಸಗಲ್‌ ವ್ಯಾಪ್ತಯಲ್ಲಿ ಕುಡಿಯುವ ನೀರು ಸರಬರಾಜು ಮೋಟಾರಿಗೆ ವಿದ್ಯುತ್‌ ಯಾಕೆ ನೀಡಿಲ್ಲ. ಜಿ.ಪಂ. ಮತ್ತು ಮೆಸ್ಕಾಂ ಇಲಾಖೆ ಅಧಿಕಾರಿಗಳು ಆಟವಾಡುತ್ತಿದ್ದೀರಾ? ಜನರಿಗೆ ನೀರು ಸಿಗುತ್ತಿಲ್ಲ. ಕುಡಿಯುವ ನೀರಿಗೆ ತೊಂದರೆ ಮಾಡಿದರೆ ಸುಮ್ಮನಿರೋಲ್ಲ .ಶುದ್ಧಗಂಗಾ ಘಟಕದ ಬಗ್ಗೆ ಕೇಳಿ ಕೇಳಿ ಸಾಕಾಗಿ ಹೋಗಿದೆ. ಉದ್ಘಾಟನೆ ಬೇಗ ಮಾಡಿ. ಹೆಸಗಲ್‌ ಗ್ರಾಮದಲ್ಲಿ ಶುದ್ಧಗಂಗಾ ಘಟಕದಲ್ಲಿ ಹುಳ ಬರುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ. ಅದನ್ನು ಕೂಡಲೇ ಪರಿಶೀಲಿಸಬೇಕು ಎಂದು ಅಧ್ಯಕ್ಷ ರತನ್‌ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ