ಆ್ಯಪ್ನಗರ

ಚಾರ್ಮಾಡಿ ಘಾಟ್‌ನಲ್ಲಿಮತ್ತೆ ಸಂಚಾರ ನಿಷೇಧ

ಚಾಮಾಡಿ ಘಾಟ್‌ನಲ್ಲಿಹೆದ್ದಾರಿ ಸಂಚಾರ ಸುಗಮಗೊಳಿಸುವ ಕಾರ್ಯಕ್ಕೆ ಮುಂದುವರಿದ ಮಳೆ, ಗುಡ್ಡ ಕುಸಿತ ಘಟನೆಗಳು ಅಡ್ಡಿಯಾಗಿದ್ದು, ಸಂಚಾರವನ್ನು ಮಂಗಳವಾರದಿಂದ ಮತ್ತೆ ಸ್ಥಗಿತಗೊಳಿಸಲಾಗಿದೆ.

Vijaya Karnataka 4 Sep 2019, 5:00 am
ಕೊಟ್ಟಿಗೆಹಾರ : ಚಾಮಾಡಿ ಘಾಟ್‌ನಲ್ಲಿಹೆದ್ದಾರಿ ಸಂಚಾರ ಸುಗಮಗೊಳಿಸುವ ಕಾರ್ಯಕ್ಕೆ ಮುಂದುವರಿದ ಮಳೆ, ಗುಡ್ಡ ಕುಸಿತ ಘಟನೆಗಳು ಅಡ್ಡಿಯಾಗಿದ್ದು, ಸಂಚಾರವನ್ನು ಮಂಗಳವಾರದಿಂದ ಮತ್ತೆ ಸ್ಥಗಿತಗೊಳಿಸಲಾಗಿದೆ.
Vijaya Karnataka Web SMG-0309-2-15-03KTG10


ಮಹಾಮಳೆಗೆ ಚಾರ್ಮಾಡಿ ಘಾಟ್‌ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಿದ್ದರು. ಮಹಾಮಳೆಗೆ ಮೂರ್ನಾಲ್ಕು ಕಡೆ ಗುಡ್ಡ ಹಾಗೂ ಮರಗಳು ರಸ್ತೆಗೆ ಬಿದ್ದಿತ್ತು. ಹೆದ್ದಾರಿ ಪ್ರಾಧಿಕಾರದವರು ತೆರವುಗೊಳಿಸುವ ಕಾರ್ಯದಲ್ಲಿನಿರತರಾಗಿದ್ದರು. ಗುಡ್ಡ ಕುಸಿತವಾದ ಮಣ್ಣನ್ನು ತೆಗೆದಂತೆಲ್ಲಮತ್ತಷ್ಟು ಮಣ್ಣು ಕುಸಿಯುತ್ತಿದ್ದು ಕಾರ್ಯಾಚರಣೆ ನಡೆಸುವುದು ಸವಾಲಾಗಿದೆ.

ಗುಡ್ಡ ಕುಸಿದು ಸಂಪೂರ್ಣ ಹಾನಿಯಾಗಿದ್ದ ರಸ್ತೆಯಲ್ಲಿಮಣ್ಣನ್ನು ತೆರವುಗೊಳಿಸಲಾಗಿದ್ದರೂ ಕೆಲವೆಡೆ ರಸ್ತೆಯೇ ಕುಸಿದು ಹೋಗಿದೆ. ಚಾರ್ಮಾಡಿ ಘಾಟ್‌ ಸಂಚಾರಕ್ಕೆ ಸೂಕ್ತವಾಗಿಲ್ಲಎಂದು ಜಿಲ್ಲಾವರಿಷ್ಠಾಧಿಕಾರಿ ಹರೀಶ್‌ ಪಾಂಡೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದ್ದಾರೆ. ಹಾಗಾಗಿ ಚಾರ್ಮಾಡಿ ಘಾಟ್‌ನಲ್ಲಿವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಘಾಟ್‌ನ ಹೆದ್ದಾರಿಯಲ್ಲಿಕಳೆದ ಒಂದೆರಡು ದಿನಗಳಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ