ಆ್ಯಪ್ನಗರ

ಪಿಸಿ ಮೇಲೆ ಕಾರು ಹತ್ತಿಸಲು ಯತ್ನ

ಸಂಚಾರ ಠಾಣೆ ಪೊಲೀಸರು ನಗರದ ಬೇಲೂರು ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಕಾರು ಚಾಲಕನೊಬ್ಬ ಕಾನ್ಸ್‌ಟೇಬಲ್‌ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದು, ಕಾನ್ಸ್‌ಟೇಬಲ್‌ ಕರುಣ ಅವರ ಎರಡೂ ಕೈ, ಸೊಂಟಕ್ಕೆ ಪೆಟ್ಟು ಬಿದ್ದಿದೆ.

Vijaya Karnataka 11 Dec 2018, 5:00 am
ಚಿಕ್ಕಮಗಳೂರು : ಸಂಚಾರ ಠಾಣೆ ಪೊಲೀಸರು ನಗರದ ಬೇಲೂರು ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಕಾರು ಚಾಲಕನೊಬ್ಬ ಕಾನ್ಸ್‌ಟೇಬಲ್‌ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದು, ಕಾನ್ಸ್‌ಟೇಬಲ್‌ ಕರುಣ ಅವರ ಎರಡೂ ಕೈ, ಸೊಂಟಕ್ಕೆ ಪೆಟ್ಟು ಬಿದ್ದಿದೆ.
Vijaya Karnataka Web CKM-10ARAGAP6


ಕಾರು ಚಾಲಕ ತೇಗೂರು ಗ್ರಾಮದ ಬಿ.ಎಸ್‌.ಆದಿತ್ಯ (ಸ್ವಂತ ಊರು ಆವುತಿ ಹೋಬಳಿ ಬೆರಣಗೋಡು)ನನ್ನು ಪೊಲೀಸರು ಬಂಧಿಸಿ ಕಾರು ವಶಕ್ಕೆ ತೆಗೆದುಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿ.7ರಂದು ಘಟನೆ ನಡೆದಿದ್ದು, ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ.

ಸಂಚಾರ ಠಾಣೆ ಪಿಎಸೈ ಕೆ.ಆರ್‌.ರಮ್ಯ, ಕಾನ್ಸ್‌ಟೇಬಲ್‌ ಕೆ.ಬಿ.ಕರುಣ ನಗರದ ಬೇಲೂರು ರಸ್ತೆಯ ಎಸ್‌ಟಿಜೆ ಕಾಲೇಜು ಮುಂಭಾಗ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಬೇಲೂರು ಕಡೆಯಿಂದ ಅತ್ಯಂತ ವೇಗವಾಗಿ ಬಂದ ಕಾರನ್ನು ನಿಲ್ಲಿಸುವಂತೆ ಕರುಣ ಸೂಚಿಸಿದ್ದರು.

ವಾಹನದ ಚಾಲಕ ಕಾರನ್ನು ನಿಲ್ಲಿಸಿ ತಕ್ಷಣ ಏಕಾಏಕಿ ರಭಸದಿಂದ ಸ್ವಲ್ಪ ದೂರ ತೆಗೆದುಕೊಂಡು ಹೋಗಿ ಪುನಃ ಅದೇ ರಭಸದಲ್ಲಿ ವಾಪಸ್‌ ಬಂದು ಕರುಣ ಅವರ ಮೇಲೆ ಕಾರನ್ನು ಹತ್ತಿಸಲು ಯತ್ನಿಸಿದ್ದ. ಕರುಣ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಕಾರು ಗುದ್ದಿ ಎರಡೂ ಕೈ ಮತ್ತು ಸೊಂಟಕ್ಕೆ ಪೆಟ್ಟು ಬಿದ್ದಿದೆ. ಈ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ನಗರ ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ಇ.ನಿರಂಜನ್‌ಕುಮಾರ್‌, ಪಿಎಸೈ ಕೆ.ಆರ್‌.ರಘು, ಸಿಬ್ಬಂದಿ ಲೋಹಿತ್‌ ಸೋಮವಾರ ಚಾಲಕನನ್ನು ಬಂಧಿಸಿ ಕಾರು ವಶಪಡಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ