ಆ್ಯಪ್ನಗರ

ಶಾಲಾ ಸಂಸತ್‌ ಚುನಾವಣೆಗೆ ‘ಇವಿಎಂ’ ಬಳಕೆ

ಪಟ್ಟಣದ ಕರ್ನಾಟಕ ಪಬ್ಲಿಕ್‌ ಶಾಲೆಯ 2019-20ನೇ ಸಾಲಿನ ಶಾಲಾ ಸಂಸತ್‌ ಚುನಾವಣೆಯನ್ನು ಸ್ವ ರಚಿತ ಇವಿಎಂ ಮೂಲಕ ನಡೆಸಲಾಯಿತು.

Vijaya Karnataka 10 Jul 2019, 5:00 am
ಕಳಸ : ಪಟ್ಟಣದ ಕರ್ನಾಟಕ ಪಬ್ಲಿಕ್‌ ಶಾಲೆಯ 2019-20ನೇ ಸಾಲಿನ ಶಾಲಾ ಸಂಸತ್‌ ಚುನಾವಣೆಯನ್ನು ಸ್ವ ರಚಿತ ಇವಿಎಂ ಮೂಲಕ ನಡೆಸಲಾಯಿತು.
Vijaya Karnataka Web CKM-8KLS3


ಲೋಕಸಭೆ ಮತ್ತು ವಿದಾನ ಸಭೆಯ ಚುನಾವಣೆ ನಡೆಸುವ ಮಾದರಿಯಲ್ಲೇ ಪ್ರಕ್ರಿಯೆ ನಡೆಸಲಾಯಿತು. ಚುನಾವಣೆಯಲ್ಲಿ ನಾಯಕ ಸ್ಥಾನಕ್ಕಾಗಿ ದೀಕ್ಷಿತ್‌,ಕೌಶಿಕ್‌,ಪ್ರತಾಪ್‌ ಹಾಗೂ ನಾಯಕಿ ಸ್ಥಾನಕ್ಕಾಗಿ ನಿನಿಷ,ರಕ್ಷಿತಾ,ಸಂಜನಾ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.ಇದಕ್ಕಾಗಿ ಇಲ್ಲಿಯ ಗಣಿತ ಶಿಕ್ಷ ಕ ಸಂದೇಶ್‌ ರಚಿಸಿದ ಇವಿಎಂ ಬಳಕೆ ಮಾಡಲಾಗಿತ್ತು. ಯಂತ್ರದಲ್ಲಿ ಅಭ್ಯರ್ಥಿ ಹೆಸರು,ಮತದಾನ ಹಾಕಿದ ಕೂಡಲೇ ಮತ ಯಾರಿಗೆ ಹಾಕಿದ್ದೇವೆ ಎನ್ನುವ ಮಾಹಿತಿ ಹಾಗೂ ಸುಲಭ ರೀತಿಯ ಕೌಂಟಿಂಗ್‌ ವ್ಯವಸ್ಥೆಯನ್ನು ಕೂಡ ಅಳವಡಿಸಲಾಗಿತ್ತು.ಒಂದು ಬಾರಿ ಎರಡು ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕುವಂತ ವ್ಯವಸ್ಥೆಯನ್ನು ಇದರಲ್ಲಿ ಮಾಡಲಾಗಿತ್ತು.ಅಲ್ಲದೆ ಮತದಾನ ಮಾಡುವ ಹಾಗೂ ಅಲ್ಲಿಯ ಸಂಪೂರ್ಣ ವಿಡಿಯೊ ಚಿತ್ರೀಕರಣವನ್ನು ಮೊಬೈಲ್‌ ಆಪ್‌ ಮುಖಾಂತರ ಡಿಸ್‌ಪ್ಲೇ ಮುಖಾಂತರ ತೋರಿಸಲಾಯಿತು.ಎಲ್ಲ ಚುನಾವಣೆಯ ಪ್ರಕ್ರಿಯೆಗಳನ್ನು ಅಚ್ಚು ಕಟ್ಟಾಗಿ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಇದೊಂದು ಹೊಸ ಅನುಭವ ನೀಡಿತು. ಎರಡು ಗಂಟೆಗಳ ಕಾಲ ನಡೆದ ಮತದಾನದಲ್ಲಿ ಶಾಲೆಯ ನಾಯಕನಾಗಿ ಪ್ರತಾಪ್‌,ನಾಯಕಿಯಾಗಿ ನಿನಿಷ ಆಯ್ಕೆಯಾದರು.ನಂತರ ಶಾಲಾ ಮಂತ್ರಿ ಮಂಡಲ ಉದ್ಘಾಟಿಸಲಾಯಿತು. ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದ ವಿವಿದ ಖಾತೆಯ ಮಂತ್ರಿಗಳು ದೇವರ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದರು.

ಈ ಸಂದರ್ಭ ಮಾತನಾಡಿದ ಶಾಲಾ ಪ್ರಾಂಶುಪಾಲ ಶಿವಪ್ಪ,ಇವಿಎಂ ಪ್ಯಾಢ್‌ ಬಳಸಿ ಶಾಲಾ ಸಂಸತ್‌ ಚುನಾವಣೆ ಮಾಡುತ್ತಿರುವುದು ಬಹುಶಃ ಜಿಲ್ಲೆಯಲ್ಲಿಯೇ ಪ್ರಥಮ ಇರಬಹುದು. ಲೋಕಸಭೆ ಚುನಾವಣೆಯ ಮಾದರಿಯಲ್ಲಿಯೇ ಚುನಾವಣೆಯ ಪ್ರಕ್ರಿಯೆ ಮಾಡಲಾಯಿತು.ಇದರಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ನಾಯಕತ್ವ ಬೆಳೆಸಲು ಮಕ್ಕಳಿಗೆ ಶಾಲಾ ಮಟ್ಟದಲ್ಲಿಯೇ ಪೂರಕವಾಗುತ್ತದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ