ಆ್ಯಪ್ನಗರ

ಮಾಧ್ಯಮದಿಂದ ಮೌಲ್ಯ ಪ್ರೇರೇಪಿಸುವ ಕಾರ‍್ಯ

ಸರಿ, ತಪ್ಪುಗಳನ್ನು ವಿಶ್ಲೇಷಿಸಿ ಸತ್ಯ, ಸ್ವಚ್ಛ ಮಾಹಿತಿಗಳನ್ನು ನೀಡುವ ಮಾಧ್ಯಮ ರಂಗವೂ ಮೌಲ್ಯಗಳನ್ನು ಪ್ರೇರೇಪಿಸುವ ಕೆಲಸ ಮಾಡುತ್ತದೆ ಎಂದು ಸಾಹಿತಿ ಚಟ್ನಹಳ್ಳಿ ಮಹೇಶ್‌ ಅಭಿಪ್ರಾಯಪಟ್ಟರು.

Vijaya Karnataka 15 Sep 2019, 5:00 am
ಚಿಕ್ಕಮಗಳೂರು: ಸರಿ, ತಪ್ಪುಗಳನ್ನು ವಿಶ್ಲೇಷಿಸಿ ಸತ್ಯ, ಸ್ವಚ್ಛ ಮಾಹಿತಿಗಳನ್ನು ನೀಡುವ ಮಾಧ್ಯಮ ರಂಗವೂ ಮೌಲ್ಯಗಳನ್ನು ಪ್ರೇರೇಪಿಸುವ ಕೆಲಸ ಮಾಡುತ್ತದೆ ಎಂದು ಸಾಹಿತಿ ಚಟ್ನಹಳ್ಳಿ ಮಹೇಶ್‌ ಅಭಿಪ್ರಾಯಪಟ್ಟರು.
Vijaya Karnataka Web value driven business from the media
ಮಾಧ್ಯಮದಿಂದ ಮೌಲ್ಯ ಪ್ರೇರೇಪಿಸುವ ಕಾರ‍್ಯ


ನಗರದ ಬಸವನಹಳ್ಳಿ ಮಹಿಳಾಶ್ರಮದ ಸಹಯೋಗದಲ್ಲಿಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದಿಂದ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿಶಿಕ್ಷಣದಲ್ಲಿಮಾಧ್ಯಮಗಳ ಪಾತ್ರ ವಿಷಯದ ಬಗ್ಗೆ ಮಾತನಾಡಿದರು.

ಜನಪರ ಲೋಕಶಿಕ್ಷಣ ನೀಡುವ ಮಹತ್ವದ ಕಾರ‍್ಯ ಮಾಧ್ಯಮ ಕ್ಷೇತ್ರದ್ದಾಗಿದೆ. ವಾಸ್ತವವಾಗಿ ಬದುಕಿಗೆ ಬೇಕಾದ ರೀತಿನೀತಿಯೊಂದಿಗೆ ಮೌಲ್ಯಯುತ ಗುಣ ಕಲಿಸುವುದು ಶಿಕ್ಷಣದ ಆಶಯ. ಮಾಧ್ಯಮವೂ ಇಂತಹ ಶ್ರೇಷ್ಠ ಕಾರ‍್ಯವನ್ನೇ ಮಾಡುತ್ತದೆ. ಇವೆರಡೂ ಪರಸ್ಪರ ಪೂರಕ ಮತ್ತು ಜನಮುಖಿ ಚಿಂತನೆಗಳನ್ನು ಬೆಳೆಸುತ್ತವೆ ಎಂದರು.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರಾರ‍ಯಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಕ ಮಾತನಾಡಿ, ಪತ್ರಿಕೆಗಳನ್ನೂ ಒಳಗೊಂಡಂತೆ ಮಾಧ್ಯಮರಂಗ ಜನಸಮುದಾಯಕ್ಕೆ ಹೊಸ, ವೈಶಿಷ್ಟ್ಯಪೂರ್ಣ ಸಂಗತಿಗಳನ್ನು ತಿಳಿಸುವ ಮೂಲಕ ಶಿಕ್ಷಣ ನೀಡುತ್ತಿದೆ ಎಂದರು.ಗುರುವಂದನೆ ಸ್ವೀಕರಿಸಿದ ವಿಶ್ರಾಂತ ಶಿಕ್ಷಕ ಹಂಸಗಾರು ಲಕ್ಷ್ಮೇನಾರಾಯಣ, ಅಧ್ಯಕ್ಷತೆ ವಹಿಸಿದ್ದ ಮಹಿಳಾಶ್ರಮದ ಕಾರ‍್ಯದರ್ಶಿ ಅನಿತಾನಾಗೇಂದ್ರ ಮಾತನಾಡಿದರು. ನಿರ್ದೇಶಕಿ ಆರುಂಧತಿ, ಶಿಕ್ಷಕರಾದ ಪುಷ್ಪಲತ, ಕಮಲ, ಹೇಮಲತ, ಸುಧಾಮ, ಗೋಪಾಲ ನೇತೃತ್ವದಲ್ಲಿಭಾರತಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.ಮಹಿಳಾಶ್ರಮದ ಮುಖ್ಯ ಶಿಕ್ಷಕ ಎಸ್‌.ಪ್ರವೀಣ್‌ಕುಮಾರ್‌ ಸ್ವಾಗತಿಸಿ, ಶಿಕ್ಷಕಿ ಸುಧಾ ನಿರೂಪಿಸಿದರು. ಪ್ರತಿಷ್ಠಾನದ ಕಾರ‍್ಯದರ್ಶಿ ಸುಮಿತ್ರಾಶಾಸ್ತ್ರಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ