ಆ್ಯಪ್ನಗರ

ವಾಹನ ಡಿಕ್ಕಿ: ಜಿಂಕೆ ಸಾವು

ವಿಲ್ಲುಪುರಂ ಮಂಗಳೂರು ಹೆದ್ದಾರಿಯ ಬಣಕಲ್‌ ಸಮೀಪದ ಚಕ್ಕಮಕ್ಕಿ ಬಳಿ ವಾಹನ ಡಿಕ್ಕಿ ಹೊಡೆದು ಸುಮಾರು ನಾಲ್ಕು ವರ್ಷದ ಜಿಂಕೆಯೊಂದು ಮೃತಪಟ್ಟಿದೆ.

Vijaya Karnataka 8 May 2019, 5:00 am
ಕೊಟ್ಟಿಗೆಹಾರ : ವಿಲ್ಲುಪುರಂ ಮಂಗಳೂರು ಹೆದ್ದಾರಿಯ ಬಣಕಲ್‌ ಸಮೀಪದ ಚಕ್ಕಮಕ್ಕಿ ಬಳಿ ವಾಹನ ಡಿಕ್ಕಿ ಹೊಡೆದು ಸುಮಾರು ನಾಲ್ಕು ವರ್ಷದ ಜಿಂಕೆಯೊಂದು ಮೃತಪಟ್ಟಿದೆ.
Vijaya Karnataka Web vehicle collision deers death
ವಾಹನ ಡಿಕ್ಕಿ: ಜಿಂಕೆ ಸಾವು


ಸೋಮವಾರ ರಾತ್ರಿ ವಾಹನ ಡಿಕ್ಕಿ ಹೊಡೆದಿದೆ. ಮಂಗಳವಾರ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಪಶುವೈದ್ಯಾಧಿಕಾರಿ ರಮಿತ್‌ ಮರಣೋತ್ತರ ಪರೀಕ್ಷೆ ನಡೆಸಿ ಶವ ಸಂಸ್ಕಾರ ನಡೆಸಲಾಯಿತು.

ಈ ಸಂದರ್ಭ¨ ವಲಯ ಅರಣ್ಯಾಧಿಕಾರಿ ಪ್ರಸಾದ್‌, ಉಪವಲಯ ಅರಣ್ಯಾಧಿಕಾರಿ ಉಮೇಶ್‌, ಪಶು ವೈದ್ಯಾಧಿಕಾರಿ ರಮಿತ್‌, ಅರಣ್ಯ ರಕ್ಷ ಕ ಮೋಸಿನ್‌, ನಾಗರಾಜ್‌ ಇದ್ದರು.

ಸೂಚನಾಫಲಕವಿದ್ದರೂ ವನ್ಯಜೀವಿಗಳ ಸಾವು : ವಿಲ್ಲುಪುರಂ ಮಂಗಳೂರು ಹೆದ್ದಾರಿಯಲ್ಲಿ ಅರಣ್ಯ ಇಲಾಖೆ ಕೆಲ ಕಡೆಗಳಲ್ಲಿ ವನ್ಯಜೀವಿಗಳ ಸಂಚಾರ ಪ್ರದೇಶವಾಗಿರುವುದರಿಂದ ವಾಹನವನ್ನು ನಿಧಾನವಾಗಿ ಚಲಿಸಿ ಎಂಬ ಸೂಚನಾ ಫಲಕ ಹಾಕಲಾಗಿದೆ. ಆದರು ಚಾಲಕರು ಅಜಾಗರೂಕತೆಯಿಂದ ಚಾಲನೆ ಮಾಡಿ ವನ್ಯಜೀವಿಗಳ ಜೀವಕ್ಕೆ ಸಂಚಕಾರ ತಂದೊಡ್ಡುವ ಘಟನೆಗಳು ನಡೆಯುತ್ತಲೇ ಇವೆ. ಈ ಹಿಂದೆಯೂ ವಾಹನಗಳಿಗೆ ಸಿಲುಕಿ ಅಪರೂಪದ ಪುನುಗು ಬೆಕ್ಕು, ನವಿಲು, ಅಳಿಲು, ಮೊಲ, ಕಾಡುಹಂದಿ, ಮಂಗ ಮುಂತಾದ ವನ್ಯಮೃಗಗಳು ಮೃತಪಟ್ಟ ಘಟನೆಗಳು ನಡೆದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ