ಆ್ಯಪ್ನಗರ

ವಿದ್ಯಾಗಣಪತಿ ಮಹೋತ್ಸವಕ್ಕೆ ಅದ್ಧೂರಿ ತೆರೆ

ಪಟ್ಟಣದ ಶ್ರೀ ವಿದ್ಯಾಗಣಪತಿ ಸಮುದಾಯ ಭವನದಲ್ಲಿಪ್ರತಿಷ್ಟಾಪಿಸಿದ್ದ 61ನೇ ವರ್ಷದ ಶ್ರೀ ವಿದ್ಯಾಗಣಪತಿ ಪೂಜಾ ಮಹೋತ್ಸವ ಸೋಮವಾರ ಅದ್ಧೂರಿಯಾಗಿ ತೆರೆ ಕಂಡಿತು.

Vijaya Karnataka 19 Sep 2019, 10:21 pm
ಬಾಳೆಹೊನ್ನೂರು : ಪಟ್ಟಣದ ಶ್ರೀ ವಿದ್ಯಾಗಣಪತಿ ಸಮುದಾಯ ಭವನದಲ್ಲಿಪ್ರತಿಷ್ಟಾಪಿಸಿದ್ದ 61ನೇ ವರ್ಷದ ಶ್ರೀ ವಿದ್ಯಾಗಣಪತಿ ಪೂಜಾ ಮಹೋತ್ಸವ ಸೋಮವಾರ ಅದ್ಧೂರಿಯಾಗಿ ತೆರೆ ಕಂಡಿತು.
Vijaya Karnataka Web 19AJP02(2)_35


ಆ ಪ್ರಯುಕ್ತ ಬೆಳಗ್ಗೆ ದಾವಣಗೆರೆಯ ಭಾರತಿ ಆರ್ಕೆಸ್ಟ್ರಾ, ಮಧ್ಯಾಹ್ನ ವಿಸರ್ಜನಾ ಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ, ನಂತರ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಸುಮಾರು 15ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ನಂತರ ರಾಣಿಬೆನ್ನೂರಿನ ನ್ಯೂ ಹನುಮಾನ್‌ ಬ್ರಾಸ್‌ ಬ್ಯಾಂಡ್‌ ಚಲಿಸುವ ಆರ್ಕೆಸ್ಟ್ರಾ, ಗುರುವಾಯನಕೆರೆ ಸೃಷ್ಟಿ ಆರ್ಟ್ಸ್ ಅವರಿಂದ ಕೀಲುಕುದುರೆ, ಚಿಲಿಪಿಲಿ ಗೊಂಬೆ ಮತ್ತು ಕರಗ ನೃತ್ಯಗಳು ಹಾಗೂ ಸ್ಥಳೀಯ ಕಲಾವಿದರಿಂದ ಹಲಗೆ ಮತ್ತು ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಚಂಡೆಬಳಗದವರಿಂದ ಚಂಡೆವಾದನ ಹಾಗೂ ನೃತ್ಯ, ಅಲ್ಲದೆ ನಗರದ ಜೇಸಿ ವೃತ್ತದಲ್ಲಿವಿಶೇಷವಾದ ಸಿಡಿಮದ್ದು ಪ್ರದರ್ಶನದೊಂದಿಗೆ ಬಾಳೆಹೊನ್ನೂರಿನ ಮುಖ್ಯ ರಸ್ತೆಯಲ್ಲಿಶ್ರೀ ವಿದ್ಯಾಗಣಪತಿಯ ಭವ್ಯ ಮೆರವಣಿಗೆ ನಡೆಯಿತು. ಡಿವೈಎಸ್ಪಿ ಜಾಗೀರ್‌ದಾರ್‌, ವೃತ್ತ ನಿರೀಕ್ಷಕ ಮಂಜು, ಠಾಣಾಧಿಕಾರಿ ತೇಜಸ್ವಿ ನೇತೃತ್ವದಲ್ಲಿಬಿಗಿ ಪೋಲೀಸ್‌ ಬಂದೋಬಸ್‌್ತ ಮಾಡಲಾಗಿತ್ತು. ಶ್ರೀಗಣಪತಿ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್‌.ಹರೀಶ್‌ ಕಗ್ಗಿನಗದ್ದೆ, ಕಲ್ಮಕ್ಕಿ ಟಿ.ಎಂ.ಉಮೇಶ್‌, ಎಂ.ಎಸ್‌.ಜಯಪ್ರಕಾಶ್‌, ಟಿ.ಎಂ.ನಾಗೇಶ್‌, ಸುಧಾಕರ್‌, ಬನ್ನೂರು ನಾರಾಯಣಗೌಡ, ಬಿ.ಕೆ.ಮಧುಸೂಧನ್‌, ಎಂ.ಎಸ್‌.ಚೆನ್ನಗಿರಿಗೌಡ, ಸುಧಾಕರ್‌, ಸುರೇಂದ್ರ, ಹಿರಿಯಣ್ಣ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ