ಆ್ಯಪ್ನಗರ

ಗೌರಿ ಕಾಲುವೆಗೆ ನೀರು ಬಿಡದಿದ್ದರೆ ಪ್ರತಿಭಟನೆ

ಗೌರಿ ಕಾಲುವೆಗೆ ಮೇ 29ರಿಂದ ಸಮರ್ಪಕವಾಗಿ ಕುಡಿವ ನೀರು ಪೂರೈಕೆ ಮಾಡದಿದ್ದರೆ ಸ್ಥಳೀಯರೊಂದಿಗೆ ಸೇರಿ ಕಾಲಿಕೊಡ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ನಗರಸಭೆ ಸದಸ್ಯ ರೂಬಿನ್‌ ಮೊಸೆಸ್‌ ಎಚ್ಚರಿಸಿದ್ದಾರೆ.

Vijaya Karnataka 29 May 2018, 5:00 am
ಚಿಕ್ಕಮಗಳೂರು: ಗೌರಿ ಕಾಲುವೆಗೆ ಮೇ 29ರಿಂದ ಸಮರ್ಪಕವಾಗಿ ಕುಡಿವ ನೀರು ಪೂರೈಕೆ ಮಾಡದಿದ್ದರೆ ಸ್ಥಳೀಯರೊಂದಿಗೆ ಸೇರಿ ಕಾಲಿಕೊಡ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ನಗರಸಭೆ ಸದಸ್ಯ ರೂಬಿನ್‌ ಮೊಸೆಸ್‌ ಎಚ್ಚರಿಸಿದ್ದಾರೆ.
Vijaya Karnataka Web water from gauri canal protest
ಗೌರಿ ಕಾಲುವೆಗೆ ನೀರು ಬಿಡದಿದ್ದರೆ ಪ್ರತಿಭಟನೆ


ಗೌರಿ ಕಾಲುವೆಯಲ್ಲಿ ಕಳೆದ ಒಂದು ತಿಂಗಳಿಂದ ಕುಡಿವ ನೀರಿಲ್ಲದೆ ಜನ ಪರದಾಡುವಂತಾಗಿದೆ. ಟ್ಯಾಂಕರ್‌ನಲ್ಲಿ ನೀಡುತ್ತಿರುವ ನೀರು ಜನತೆಗೆ ಸಾಕಾಗುತ್ತಿಲ್ಲ. ನಗರಸಭೆಯಿಂದ ಮಲತಾಯಿ ದೋರಣೆ ಮಾಡಲಾಗುತ್ತಿದೆ. ಆ ಮೂಲಕ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ನಗರಸಭೆಯಿಂದ ನಡೆಯುತ್ತಿದೆ ಎಂದಿರುವ ರೂಬಿನ್‌, ಬಹುಮತ ಇದೆ ಎಂಬ ಒಂದೇ ಒಂದು ಕಾರಣಕ್ಕೆ 1080 ರೂ. ಇದ್ದ ನೀರಿನ ಕಂದಾಯವನ್ನು 1480 ಕ್ಕೆ ಏರಿಸಲಾಗಿದೆ ಎಂದು ಅವರು ನೀಡಿರುವ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ವಾರ್ಡ್‌ಗಳಲ್ಲಿ ಕೈ ಪಂಪುಗಳು ಕೆಟ್ಟು ನಿಂತಿವೆ. ಕಳೆದ ಎರಡು ವರ್ಷದಿಂದ ಅದನ್ನು ರಿಪೇರಿ ಮಾಡುವ ಯೋಗ್ಯತೆ ನಗರಸಭೆಗಿಲ್ಲ. ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ. ಕಳೆದ ಅನೇಕ ವರ್ಷದಿಂದ ಬಿಜೆಪಿ ಆಡಳಿತ ಮಾಡುತ್ತಿರುವ ನಗರಸಭೆಯಿಂದ ಅಭಿವೃದ್ಧಿ ಶೂನ್ಯವಾಗಿದೆ ಎಂದು ದೂರಿದ್ದಾರೆ.

ನೀರು ಪೂರೈಕೆ ಮಾಡುವಲ್ಲೂ ವಾರ್ಡ್‌ಗಳಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ನಗರಸಭೆ ಆಡಳಿತ ಗೌರಿಕಾಲುವೆಗೆ ನೀರಿನ ವ್ಯವಸ್ಥೆ ಸರಿಪಡಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ