ಆ್ಯಪ್ನಗರ

ತಪ್ಪು ಮಾಡದೇ ನಾನ್ಯಾಕೆ ಭಯಬೀಳಲಿ: ಎಚ್‌ಡಿಕೆ

ದೂರವಾಣಿ ಕದ್ದಾಲಿಕೆ ತನಿಖೆ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಆಸೆಗೆ ನಾನು ತಣ್ಣೀರು ಎರಚುವುದಿಲ್ಲ. ಆದರೆ, ತಪ್ಪು ಮಾಡದ ನಾನು ಭಯಪಡುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Vijaya Karnataka 20 Aug 2019, 5:00 am
ಕಳಸ: ದೂರವಾಣಿ ಕದ್ದಾಲಿಕೆ ತನಿಖೆ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಆಸೆಗೆ ನಾನು ತಣ್ಣೀರು ಎರಚುವುದಿಲ್ಲ. ಆದರೆ, ತಪ್ಪು ಮಾಡದ ನಾನು ಭಯಪಡುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
Vijaya Karnataka Web why do i fear not doing wrong hdk
ತಪ್ಪು ಮಾಡದೇ ನಾನ್ಯಾಕೆ ಭಯಬೀಳಲಿ: ಎಚ್‌ಡಿಕೆ


ತಾಲೂಕಿನ ಪ್ರವಾಹಪೀಡಿತ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆ ಆಲಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಇವರು ಏನು ಘನಂಧಾರಿ ಕೆಲಸ ಮಾಡಿದ್ದಾರೆ ಎಂದು ಫೋನ್‌ ಕದ್ದಾಲಿಕೆ ಮಾಡಬೇಕು. ಫೋನ್‌ ಕದ್ದಾಲಿಕೆ ವಿಚಾರದಲ್ಲಿ ನನ್ನ ಮೇಲೆ ವಯಕ್ಕಿಕ ದ್ವೇಷ ಸಾಧಿಸುವ ಸಲುವಾಗಿ ಇನ್ಯಾರೋ ಬಡಪಾಯಿಗಳು ತೊಂದರೆಗೆ ಒಳಗಾಗಬಾರದು. ಇದರ ಸತ್ಯಾಂಶಗಳು ಹೊರಗಡೆ ಬರುವ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಇವರು ಸರಕಾರದಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬ ಕುರಿತ ಸತ್ಯಾಂಶಗಳನ್ನೆಲ್ಲಜನತೆಯ ಮುಂದಿಡುವುದು ಸೂಕ್ತವಾಗಿದೆ. ಗೌರವ, ಸ್ವಾಭಿಮಾನವನ್ನು ಕಳೆದುಕೊಂಡು ಬದುಕುವವನು ನಾನಲ್ಲ ಎಂದರು.

ಆಪರೇಷನ್‌ ಕಮಲದಲ್ಲಿ ನಡೆದಿರುವ ಘಟನೆಗಳ ಬಗ್ಗೆಯೂ ಸಿಬಿಐ ತನಿಖೆ ನಡೆಸಲಿ. ಯಡಿಯೂರಪ್ಪ ಅವರು ಅಷ್ಟೊಂದು ಪರಿಶುದ್ಧವಾಗಿ ಈ ನಾಡಿನ ಜನತೆಗೆ ಸರ್ವತ್ಯಾಗ ಮಾಡುತ್ತಿದ್ದಾರೆ ಅನ್ನುವುದಾದರೆ, ಆಪರೇಷನ್‌ ಕಮಲದಲ್ಲಿ ಯಾರ ಪಾಪದ ಹಣ ಸಂಗ್ರಹ ಮಾಡಿದ್ರು, ಹಣ ಎಲ್ಲಿಂದ ಬಂತು, ಅವರಿಗೆ ಸರಕಾರದ ಮುಖಾಂತರ ಉಡುಗೋರೆ ಕೊಟ್ಟಿರುವುದು ಇವೆಲ್ಲ ಸತ್ಯಾಂಶ ಹೊರ ಬಂದ್ರೆ ಒಳ್ಳೆಯದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ