ಆ್ಯಪ್ನಗರ

ಶಾಲೆಗೆ ಮೈದಾನಕ್ಕೆ ಬಂದ ಕಾಡುಕೋಣ: ಮಕ್ಕಳು ಆತಂಕ

ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿದ್ದ ವೇಳೆ ಎದುರಿನ ಮೈದಾನದಲ್ಲಿ ಧೈತ್ಯಾಕಾರದ ಕಾಡುಕೋಣ ಪ್ರತ್ಯಕ್ಷ ವಾಗಿ ಕೆಲಹೊತ್ತು ಭಯಭೀತರನ್ನಾಗಿ ಮಾಡಿದ ಘಟನೆ ಕೊಪ್ಪ ತಾಲೂಕು ಬಸರಿಕಟ್ಟೆಯ ಶ್ರೀ ಸದ್ಗುರು ಪ್ರೌಢಶಾಲೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

Vijaya Karnataka 15 Nov 2018, 9:04 am
ಜಯಪುರ (ಚಿಕ್ಕಮಗಳೂರು) : ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿದ್ದ ವೇಳೆ ಎದುರಿನ ಮೈದಾನದಲ್ಲಿ ಧೈತ್ಯಾಕಾರದ ಕಾಡುಕೋಣ ಪ್ರತ್ಯಕ್ಷ ವಾಗಿ ಕೆಲಹೊತ್ತು ಭಯಭೀತರನ್ನಾಗಿ ಮಾಡಿದ ಘಟನೆ ಕೊಪ್ಪ ತಾಲೂಕು ಬಸರಿಕಟ್ಟೆಯ ಶ್ರೀ ಸದ್ಗುರು ಪ್ರೌಢಶಾಲೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
Vijaya Karnataka Web CKM-14jpr1


ಮಕ್ಕಳು ಎಂದಿನಂತೆ ಶಾಲಾ ಪ್ರಾರ್ಥನೆ ಮುಗಿಸಿ ಆಟದ ಮೈದಾನದತ್ತ ಬರುತ್ತಿದ್ದಾಗ, ಸ್ವಲ್ಪ ದೂರದಲ್ಲೇ ಕಾಡುಕೋಣವೊಂದು ನಿಧಾನಗತಿಯಲ್ಲಿ ಓಡಾಡುತ್ತಿರುವುದು ಕಂಡುಬಂತು. ಭಯಗೊಂಡ ವಿದ್ಯಾರ್ಥಿಗಳು ತಕ್ಷಣ ಶಿಕ್ಷ ಕರಿಗೆ ವಿಷಯ ತಿಳಿಸಿದ್ದಾರೆ.

ಅಷ್ಟರಲ್ಲೇ ಕಾಡುಕೋಣ ರಾಜ ಗಾಂಭೀರ್ಯದ ಹೆಜ್ಜೆ ಹಾಕುತ್ತ ಯಾವುದೇ ತೊಂದರೆ ಕೊಡದೆ ಹೊನ್ನಗುಂಡಿ ಗ್ರಾಮದ ಕಡೆಗೆ ಸಾಗಿದ್ದು, ಮಕ್ಕಳು ನಿಟ್ಟುಸಿರು ಬಿಟ್ಟಿದ್ದಾರೆ.

ಕಾಫಿ ತೋಟಗಳೇ ಹೆಚ್ಚಿರುವ ಬಸರಿಕಟ್ಟೆ ಸುತ್ತಮುತ್ತ ಕಾಡುಕೋಣಗಳ ಹಾವಳಿ ಹೆಚ್ಚುತ್ತಿದ್ದು, ವಾರ, ಎರಡು ದಿನಕ್ಕೊಮ್ಮೆ ಸಾರ್ವಜನಿಕರಿಗೆ ದರ್ಶನ ನೀಡುವುದು ಈ ಗ್ರಾಮದಲ್ಲಿ ಸಾಮಾನ್ಯವಾಗಿದೆ. ಈ ಕುರಿತು ಹÇವು ಭಾರಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹಿಂದೆ ಗುಡ್ಡೇತೋಟದಿಂದ ಮುಖಂಡರ ನಿಯೋಗ ಕೊಪ್ಪದ ಡಿಎಫ್‌ಒ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ತೋಟಗಳ ಗಡಿಯಲ್ಲಿ ವಿದ್ಯುತ್‌ ಬೇಲಿ ನಿರ್ಮಿಸುವ ಭರವಸೆ ನೀಡಿದ್ದರು.

ಸರಕಾರದಿಂದ 1.50 ಲಕ್ಷ ರೂ. ಮೀಸಲಿರಿಸಿದ ಬಗ್ಗೆ ರಾಜ್ಯ ಪತ್ರದಲ್ಲೂ ಪ್ರಕಟವಾಗಿದ್ದು, ಈ ವರೆಗೂ ಕಾಮಗಾರಿ ನಡೆಯದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ತೋಟದ ಸುತ್ತಲೂ ಶೇಡ್‌ ನಟ್‌ ಹಾಗೂ ಆಳದ ಚರಂಡಿಯನ್ನು ತೆಗೆದು ಕಾಡುಕೋಣ ತೋಟಗಳಿಗೆ ನುಗ್ಗದಂತೆ ಸಜ್ಜು ಮಾಡಿಕೊಂಡಿದ್ದಾರೆ. ಸೂಕ್ತ ದಾರಿ ಇಲ್ಲದೇ ಕಾಡು ಪ್ರಾಣಿಗಳು ಗ್ರಾಮದೊಳಗೆ ನುಗ್ಗುತ್ತಿದ್ದು, ಜನರು ಭಯದಲ್ಲೇ ಕಾಲ ಕಳೆಯುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ