ಆ್ಯಪ್ನಗರ

ಗಾಯಗೊಂಡ 15 ಅಡಿ ಉದ್ದದ ಕಾಳಿಂಗ ಸರ್ಪ: ಚಿಕಿತ್ಸೆ ನೀಡಿ ರಕ್ಷಿಸಿದ ವೈದ್ಯರು

ಗ್ರಾಮಕ್ಕೆ ಬಂದಿದ್ದ ಕಾಳಿಂಗ ಸರ್ಪವೊಂದು ಹಾವು ಹಿಡಿಯುವವರ ಅಚಾತುರ್ಯದಿಂದ ಗಾಯಗೊಂಡಿದ್ದು, ವೈದ್ಯರ ಚಿಕಿತ್ಸೆಯಿಂದ ಗುಣಮುಖಗೊಂಡ ಪ್ರಕರಣ ಚಿಕ್ಕಮಗಳೂರಿನಲ್ಲಿ ವರದಿಯಾಗಿದೆ. 15 ಅಡಿ ಉದ್ದದ ಕಾಳಿಂಗನಿಗೆ ಭದ್ರಾ ಹುಲಿ ಅಭಯಾರಣ್ಯದ ವೈದ್ಯರು ಗಾಯವನ್ನು ಹೊಲಿದು ಗುಣಪಡಿಸಿದ್ದಾರೆ.

Vijaya Karnataka Web 21 Jul 2018, 9:51 pm
ಚಿಕ್ಕಮಗಳೂರು: ಗ್ರಾಮಕ್ಕೆ ಬಂದಿದ್ದ ಕಾಳಿಂಗ ಸರ್ಪವೊಂದು ಹಾವು ಹಿಡಿಯುವವರ ಅಚಾತುರ್ಯದಿಂದ ಗಾಯಗೊಂಡಿದ್ದು, ವೈದ್ಯರ ಚಿಕಿತ್ಸೆಯಿಂದ ಗುಣಮುಖಗೊಂಡ ಪ್ರಕರಣ ಚಿಕ್ಕಮಗಳೂರಿನಲ್ಲಿ ವರದಿಯಾಗಿದೆ. 15 ಅಡಿ ಉದ್ದದ ಕಾಳಿಂಗನಿಗೆ ಭದ್ರಾ ಹುಲಿ ಅಭಯಾರಣ್ಯದ ವೈದ್ಯರು ಗಾಯವನ್ನು ಹೊಲಿದು ಗುಣಪಡಿಸಿದ್ದಾರೆ.

ತೀವ್ರ ಗಾಯಗೊಂಡಿದ್ದ ಹಾವನ್ನು ಉರಗ ರಕ್ಷಕ ನಾಗೇಶ್ ಹುಯಿಲಗೋಳ ಅವರು ಭದ್ರಾ ಟೈಗರ್ ರಿಸರ್ವ್‌ನ ವೈದ್ಯರ ಬಳಿ ತಂದಿದ್ದರು. ಹಾವು ಗಾಯಗೊಂಡು ಹಲವು ದಿನಗಳಾಗಿದ್ದರಿಂದ ನಿತ್ರಾಣಗೊಂಡಿತ್ತು. ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ವೈದ್ಯರು ಹಾವಿನ ಗಾಯವನ್ನು ಬಿಚ್ಚಿ, ಶುಚಿಗೊಳಿಸಿ ನಂತರ ಗಾಯ ಹೊಲಿದು ಬ್ಯಾಂಡೇಜ್ ಹಾಕಿದ್ದಾರೆ.

ಒಂದು ದಿನ ಹಾವನ್ನು ನಿಗಾ ವಹಿಸಿ ನೋಡಿಕೊಂಡಿದ್ದಾರೆ. ಚಿಕಿತ್ಸೆ ಪಡೆದುಕೊಂಡ ಹಾವು ಸುಧಾರಿಸಿಕೊಂಡಿದೆ. ಬಳಿಕ ಅದನ್ನು ಶನಿವಾರ ಭದ್ರಾ ಹುಲಿ ಅಭಯಾರಣ್ಯಕ್ಕೆ ಬಿಡಲಾಗಿದೆ.

ಕೆಲದಿನಗಳ ಹಿಂದೆ ಉರಗ ರಕ್ಷಕ ನಾಗೇಶ್ ಅವರಿಗೆ ಮೂಡಿಗೆರೆಯ ಕೊಟ್ಟಿಗೆಹಾರದ ದೇವನಗಲ್ಲು ಗ್ರಾಮದಿಂದ ಹಾವು ಬಂದಿರುವ ಬಗ್ಗೆ ಕರೆಬಂದಿತ್ತು. ಅದರಂತೆ ತೆರಳಿದ್ದ ನಾಗೇಶ್ ಅವರು ಹಾವನ್ನು ಹಿಡಿಯುವ ಸಂದರ್ಭದಲ್ಲಿ ಅದು ಗಾಯಗೊಂಡಿತ್ತು. ಹೀಗಾಗಿ ಹಿಡಿಯಲು ಸಾಧ್ಯವಾಗಿರಲಿಲ್ಲ.
ಇದಾಗಿ ಮತ್ತೆ ಕೆಲದಿನಗಳ ಬಳಿಕ ಹಾವು ಬಂದಿರುವ ಬಗ್ಗೆ ನಾಗೇಶ್‌ಗೆ ಕರೆಬಂದಿತ್ತು. ಗಾಯಗೊಂಡಿದ್ದ ಅದೇ ಹಾವನ್ನು ಹಿಡಿದ ನಾಗೇಶ್ ಬಳಿಕ ಶುಕ್ರವಾರ ವೈದ್ಯರ ಬಳಿಗೆ ತಂದಿದ್ದರು. ಚಿಕಿತ್ಸೆ ಬಳಿಕ ಹಾವು ಚೇತರಿಸಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ