ಆ್ಯಪ್ನಗರ

ಖಾಸಗಿ ಬಸ್‌ ಲಾರಿಗೆ ಡಿಕ್ಕಿ: ಇಬ್ಬರು ಸಾವು

ರಾಷ್ಟ್ರೀಯ ಹೆದ್ದಾರಿ 4ರ ಹಿರಿಯೂರು ತಾಲೂಕು ಗಿಡೋಬನಹಳ್ಳಿ ಗೇಟ್‌ ಬಳಿ ಭಾನುವಾರ ಮುಂಜಾನೆ ಖಾಸಗಿ ಬಸ್‌ ಮರದ ಪೋಲ್ಸ್‌ ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಹತ್ತು ಜನ ಗಾಯಗೊಂಡಿದ್ದಾರೆ.

ವಿಕ ಸುದ್ದಿಲೋಕ 19 Sep 2016, 7:13 pm
ಐಮಂಗಲ (ಚಿತ್ರದುರ್ಗ) : ರಾಷ್ಟ್ರೀಯ ಹೆದ್ದಾರಿ 4ರ ಹಿರಿಯೂರು ತಾಲೂಕು ಗಿಡೋಬನಹಳ್ಳಿ ಗೇಟ್‌ ಬಳಿ ಭಾನುವಾರ ಮುಂಜಾನೆ ಖಾಸಗಿ ಬಸ್‌ ಮರದ ಪೋಲ್ಸ್‌ ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಹತ್ತು ಜನ ಗಾಯಗೊಂಡಿದ್ದಾರೆ.
Vijaya Karnataka Web
ಖಾಸಗಿ ಬಸ್‌ ಲಾರಿಗೆ ಡಿಕ್ಕಿ: ಇಬ್ಬರು ಸಾವು


ದಾವಣಗೆರೆ ಸತ್ಯನಾರಾಯಣ ಕ್ಯಾಂಪ್‌ ನಿವಾಸಿ, ಬಸ್‌ ಚಾಲಕ ಪ್ರವೀಣ ರಾಜಾರಾವ್‌ (34) ಹಾಗೂ ಬಸ್ಸಿನ ಕ್ಲೀನರ್‌ ಮೃತರು. ಈತನ ಹೆಸರು ತಿಳಿದು ಬಂದಿಲ್ಲ. ಗಾಯಗೊಂಡವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮುಂದೆ ಹೋಗುತ್ತಿದ್ದ ಲಾರಿಯ ಚಾಲಕ ಯಾವುದೇ ಸೂಚನೆ ನೀಡದೇ ತಕ್ಷ ಣ ಬ್ರೇಕ್‌ ಹಾಕಿದ್ದರಿಂದ ಹಿಂದೆ ಬರುತ್ತಿದ್ದ ಬೆಂಗಳೂರಿನಿಂದ ಚಿತ್ರದುರ್ಗದ ಕಡೆ ಹೊರಟಿದ್ದ ಖಾಸಗಿ ಬಸ್‌ ಲಾರಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಲಾರಿಯಲ್ಲಿದ್ದ ಕಟ್ಟಿಗೆ ಪೋಲ್ಸ್‌ಗಳು ಬಸ್ಸಿನ ಒಳಗೆ ನುಗ್ಗಿ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಸ್ಥಳಕ್ಕೆ ಸಿಪಿಐ ಸುದರ್ಶನ್‌, ಪಿಎಸ್‌ಐ ಉಮೇಶ್‌ಬಾಬು ಭೇಟಿ ನೀಡಿ ಪರಿಶೀಲಿಸಿದರು. ಐಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ