ಆ್ಯಪ್ನಗರ

ಈರುಳ್ಳಿ ದರ ಕುಸಿತಕ್ಕೆ ಮೊದಲ ಆತ್ಮಹತ್ಯೆ ಪ್ರಕರಣ

ಜಿಲ್ಲೆಯಲ್ಲಿ ಈರುಳ್ಳಿ ಬೆಳೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡ ಮೊದಲ ಪ್ರಕರಣ ಭಾನುವಾರ ನಡೆದಿದೆ. ರೇಖಲಗೆರೆ ಲಂಬಾಣಿಹಟ್ಟಿಯ ಸೇವ್ಯಾನಾಯ್ಕ (40) ಹೀಗೆ ಆತ್ಮಹತ್ಯೆಗೆ ಬಲಿಯಾದ ರೈತ.

ವಿಕ ಸುದ್ದಿಲೋಕ 5 Oct 2016, 7:48 pm
ನಾಯಕನಹಟ್ಟಿ : ಜಿಲ್ಲೆಯಲ್ಲಿ ಈರುಳ್ಳಿ ಬೆಳೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡ ಮೊದಲ ಪ್ರಕರಣ ಭಾನುವಾರ ನಡೆದಿದೆ. ರೇಖಲಗೆರೆ ಲಂಬಾಣಿಹಟ್ಟಿಯ ಸೇವ್ಯಾನಾಯ್ಕ (40) ಹೀಗೆ ಆತ್ಮಹತ್ಯೆಗೆ ಬಲಿಯಾದ ರೈತ.
Vijaya Karnataka Web
ಈರುಳ್ಳಿ ದರ ಕುಸಿತಕ್ಕೆ ಮೊದಲ ಆತ್ಮಹತ್ಯೆ ಪ್ರಕರಣ


ವಾಸ್ತವವಾಗಿ ಈರುಳ್ಳಿ ಬೆಳೆದ ಬೆಳೆಗಾರರ ಪರಿಸ್ಥಿತಿ ತುಂಬಾ ಕಠಿಣವಾಗಿದೆ ಎನ್ನಲಿಕ್ಕೆ ಇದು ನಿದರ್ಶನ.. ಒಂದೆಡೆ ಕುಸಿಯುತ್ತಿರುವ ಅಂತರ್ಜಲ, ಮತ್ತೊಂದೆಡೆ ಕುಸಿದಿರುವ ಈರುಳ್ಳಿ ಬೆಳೆಯಿಂದ ರೈತರು ಕಂಗಾಲಾಗಿದ್ದಾರೆ.

ಚಳ್ಳಕೆರೆ ತಾಲೂಕಿನಲ್ಲಿ ಖುಷ್ಕಿ ಜಮೀನಿಗೆ ಶೇಂಗಾ ಹಾಗೂ ಅಲ್ಪಸ್ವಲ್ಪ ಬೋರ್‌ವೆಲ್‌ ನೀರು ದೊರೆತ ರೈತರು ಈರುಳ್ಳಿ ಬೆಳೆಯುತ್ತಿದ್ದಾರೆ. ಆದರೆ ಈರುಳ್ಳಿ ಪಾತಾಳಕ್ಕೆ ಕುಸಿದಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ.

ಅತಿ ಹೆಚ್ಚು ಬೆಳೆಯುವ ಫಸಲಿನಲ್ಲಿ ಶೇಂಗಾ ಮೊದಲ ಸ್ಥಾನವಿದ್ದರೆ, ಈರುಳ್ಳಿಗೆ ಎರಡನೇ ಸ್ಥಾನವಿದೆ. ಕಳೆದ ಮೂರು ವರ್ಷಗಳ ಕಾಲ ಈರುಳ್ಳಿಗೆ ಉತ್ತಮ ಬೆಲೆ ದೊರೆಯುತ್ತಿತ್ತು. ಆದರೆ ಈ ವರ್ಷ ಬೆಂಗಳೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 500-800 ರೂ. ದಾಟುತ್ತಿಲ್ಲ. ಬೆಲೆ ಏರಿಕೆಯಾಗುವ ಲಕ್ಷ ಣಗಳು ಕೂಡ ಕಂಡುಬರುತ್ತಿಲ್ಲ.

ಗೌರಿ,ಗಣೇಶ, ದಸರಾ, ದೀಪಾವಳಿ ಹಬ್ಬಗಳ ಸಾಲಿನಲ್ಲಿಯೂ ಬೆಲೆ ಏರಿಕೆಯಾಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆಯಾಗುವ ನಿರೀಕ್ಷೆ ರೈತರಲ್ಲಿಲ್ಲ. ಶೇ.90ರಷ್ಟು ರೈತರು ದರ ಕುಸಿತಕ್ಕೆ ಭೂಮಿಯಿಂದ ಕಿತ್ತಿರುವ ಬೆಳೆ ಹೊಲದಲ್ಲಿಯೇ ಬಿಟ್ಟಿದ್ದಾರೆ. ಇನ್ನೂ ಕೆಲ ರೈತರು ಬೆಳೆ ಕಿತ್ತು ಪ್ರತಿದಿನ ಕೊಳೆತ ಈರುಳ್ಳಿ ಗಡ್ಡೆಗಳನ್ನು ಬೇರ್ಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿ ದಿನವೂ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಬಿಸಿಲಿಗೆ ಒಣಗಿಸುವ ಹಾಗೂ ಪ್ರತಿದಿನ ಚೀಲಕ್ಕೆ ತುಂಬುವ ಕಾರ್ಯದಲ್ಲಿ ತೊಡಗಿದ್ದಾರೆ.

ತಿರುಗಿ ನೋಡದ ದಲ್ಲಾಳಿಗಳು : ಕಳೆದ ವರ್ಷ ಎಕರೆಗೆ ಲಕ್ಷ ಗಟ್ಟಲೆ ಹಣ ನೋಡಿದ್ದ ರೈತ ಹಳೆಯ ಬೆಲೆ ದೊರೆತರೆ ತಮ್ಮೆಲ್ಲ ಸಾಲ ಪರಿಹಾರವಾದೀತೆಂದು ಹೆಚ್ಚು ಬಿತ್ತನೆ ಮಾಡಿದ್ದರು. ಚಳ್ಳಕೆರೆ ತಾಲೂಕಿನಲ್ಲಿ 7,500 ಹೆಕ್ಟೇರ್‌ ಈರುಳ್ಳಿ ಕಟಾವು ಹಂತದಲ್ಲಿದೆ. ಪ್ರತಿ ವರ್ಷ ಈರುಳ್ಳಿ ಕಟಾವು ಆದ ತಕ್ಷ ಣ ಆಂಧÜ್ರದ ನೂರಾರು ದಳ್ಳಾಳಿಗಳು ರೈತರ ಹೊಲಗಳಿಗೆ ದಾಳಿಯಿಡುತ್ತಿದ್ದರು. ಅಲ್ಲೇ ರೇಟ್‌ ನಿಗದಿಪಡಿಸಿ ಹಣ ನೀಡುತ್ತಿದ್ದರು. ಕೆಲವರು ತಾವಾಗಿಯೇ ಕಟಾವು ಮಾಡಿಕೊಳ್ಳುತ್ತಿದ್ದರು. ಆದರೆ ಈ ವರ್ಷದ ಪರಿಸ್ಥಿತಿ ವಿಭಿನ್ನವಾಗಿದೆ.

ಯಾವುದೇ ದಳ್ಳಾಳಿಗಳು ಹಳ್ಳಿಗಳ ಕಡೆಗೆ ಸುಳಿಯುತ್ತಿಲ್ಲ. ಜತೆಗೆ ತಾವಾಗಿಯೇ ರೈತರು ಮಾರಲು ಪ್ರಯತ್ನಿಸಿದರೂ ಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ರಾಶಿ ಮುಂದೆ ಕುಳಿತು ಬೆಲೆ ಏರಿಕೆಗೆ ಕಾಯುತ್ತಾ ಕೂರುವಂತಾಗಿದೆ. ಕಳೆದ ವರ್ಷ ಬಂಪರ್‌ ಬೆಲೆ ಕಂಡಿದ್ದ ರೈತರು ಈ ಸಲ ಅಸಲೂ ದೊರೆಯದ ಪರಿಸ್ಥಿತಿಯಲ್ಲಿದ್ದಾರೆ.ಇದೀಗ ಬೆಳೆಗಾರರು ನಷ್ಟದಿಂದ ಕೈ ಸುಟ್ಟುಕೊಂಡು ಸರಕಾರದ ಪರಿಹಾರದತ್ತ ನೋಡುತ್ತಿದ್ದಾರೆ.

------------

ಸರಕಾರ ಈರುಳ್ಳಿ ಬೆಳೆದಿರುವ ರೈತರನ್ನು ಗುರುತಿಸಿ ಬೆಳೆ ಪರಿಹಾರ ಘೋಷಿಸಬೇಕು. ಶೇಂಗಾ ಹಾಗೂ ಈರುಳ್ಳಿ ಎರಡು ಬೆಳೆಗಳು ವಿಫಲವಾಗಿವೆ. ಈರುಳ್ಳಿ ರಫ್ತು ತಕ್ಷ ಣ ಆರಂಭಿಸಬೇಕು. ಆತಂಕದಲ್ಲಿರುವ ರೈತರಿಗೆ ಪರಿಹಾರ ಘೋಷಣೆ ಮಾಡಬೇಕಿದೆ.

-ಜಯಣ್ಣ, ರೈತ, ರೇಖಲಗೆರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ