ಆ್ಯಪ್ನಗರ

ಮಹಿಳೆ ಸಾವು: ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಮಹಿಳೆಯೊಬ್ಬಳ ಸಾವಿಗೆ ಕಾರಣನಾದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್‌.ಸುಬ್ರಹ್ಮಣ್ಯ ಶುಕ್ರವಾರ ತೀರ್ಪು ನೀಡಿದ್ದಾರೆ.

ವಿಕ ಸುದ್ದಿಲೋಕ 29 Jan 2017, 4:50 am
ಚಿತ್ರದುರ್ಗ : ಮಹಿಳೆಯೊಬ್ಬಳ ಸಾವಿಗೆ ಕಾರಣನಾದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್‌.ಸುಬ್ರಹ್ಮಣ್ಯ ಶುಕ್ರವಾರ ತೀರ್ಪು ನೀಡಿದ್ದಾರೆ.
Vijaya Karnataka Web
ಮಹಿಳೆ ಸಾವು: ವ್ಯಕ್ತಿಗೆ ಜೀವಾವಧಿ ಶಿಕ್ಷೆ


ಮೊಳಕಾಲ್ಮುರು ತಾಲೂಕಿನ ರಾಯಾಪುರ ಗ್ರಾಮದ ಮಹಾದೇವಿ ಎಂಬಾಕೆಯನ್ನು ಕಳೆದ 11 ವರ್ಷಗಳ ಹಿಂದೆ ಕೂಡ್ಲಿಗಿ ತಾಲೂಕಿನ ಯರ್ರೋಬ್ಬಯ್ಯನಹಟ್ಟಿ ಗ್ರಾಮದ ಓಬಯ್ಯಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯಾದ 16 ದಿನಗಳಲ್ಲಿ ಗಂಡನನ್ನು ಬಿಟ್ಟು ತವರಿಗೆ ವಾಪಸ್‌ ಬಂದಳು. ಕಳೆದ ಆರು ವರ್ಷದಿಂದ ರಾಯಾಪುರದ ಸಿ.ಎಂ.ಬಸವರಾಜ ಎಂಬಾತನ ಜತೆ ಬೇರೆಯೇ ಮನೆ ಮಾಡಿಕೊಂಡು ಒಟ್ಟಿಗೆ ಜೀವನ ಸಾಗಿಸುತ್ತಿದ್ದಳು.

ಇತ್ತೀಚೆಗೆ ಬಸವರಾಜ ಮಹಾದೇವಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ಕೊಡದಿದ್ದರೆ ದೈಹಿಕ, ಮಾನಸಿಕ ಹಿಂಸೆ ಕೊಡುತ್ತಿದ್ದ. 2015ರ ಜ.11ರ ಸಂಜೆ ಹಣ ಹಾಗೂ ಒಡವೆಗೆ ಒತ್ತಾಯಿಸಿದ. ಆದರೆ ಹಣ ಕೊಡಲು ನಿರಾಕರಿಸಿದ ಮಹಾದೇವಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಆಕೆ ಚಿಕಿತ್ಸೆ ಫಲಿಸದೆ 2015 ಜ.21ರಂದು ಸಾವಿಗೀಡಾದರು.

ಮೊಳಕಾಲ್ಮುರು ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಷೀಟ್‌ ಸಲ್ಲಿಸಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್‌.ಸುಬ್ರಹ್ಮಣ್ಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕ ಎಂ.ಚಂದ್ರಪ್ಪ ವಾದ ಮಂಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ