ಆ್ಯಪ್ನಗರ

ನೀರಾವರಿ ಯೋಜನೆಗೆ ಪಕ್ಷಾತೀತ ಪ್ರಯತ್ನ

ಸಂಸತ್ತಿನಲ್ಲಿ ರಾಷ್ಟ್ರೀಯ ಪಕ್ಷ ಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಸೇರಿದ ಸಂಸದರಿದ್ದು, ಅವರು ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಅವಧೂತ ಪ್ರಜ್ಞ ಪ್ರಶಸ್ತಿ ಸ್ವೀಕರಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ವಿಕ ಸುದ್ದಿಲೋಕ 24 Apr 2017, 7:50 pm
ಹಿರಿಯೂರು : ಸಂಸತ್ತಿನಲ್ಲಿ ರಾಷ್ಟ್ರೀಯ ಪಕ್ಷ ಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಸೇರಿದ ಸಂಸದರಿದ್ದು, ಅವರು ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಅವಧೂತ ಪ್ರಜ್ಞ ಪ್ರಶಸ್ತಿ ಸ್ವೀಕರಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.
Vijaya Karnataka Web
ನೀರಾವರಿ ಯೋಜನೆಗೆ ಪಕ್ಷಾತೀತ ಪ್ರಯತ್ನ


ತಾಲೂಕಿನ ಗಡಿಗ್ರಾಮ ಪಟ್ಟನಾಯಕನಹಳ್ಳಿಯ ಶ್ರೀಗುರುಗುಂಡ ಬ್ರಹ್ಮೇಶ್ವರ ಮಠದ ಶ್ರೀನಂಜಾವಧೂತ ಸ್ವಾಮೀಜಿ ಅವರ 38 ನೇ ವರ್ಧಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಮಧ್ಯಕರ್ನಾಟಕದ ನೀರಾವರಿ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದರು.

ತನಗೆ ವಯಸ್ಸು ಆಗಿದ್ದು ಹೋರಾಟಕ್ಕೆ ದೇಹ ಸ್ಪಂದಿಸುತ್ತಿಲ್ಲ. ಹಾಗೆಯೇ ಸುಮ್ಮನಿರಲಾಗದ ಸ್ಥಿತಿಯಲ್ಲಿ ನಾನಿದ್ದೇನೆ. ದುರದೃಷ್ಟದ ಸಂಗತಿ ಎಂದರೆ ನಾನೇ ಅನುಷ್ಟಾನಗೊಳಿದ ನೀರಾವರಿ ಯೋಜನೆಗಳು ನನ್ನ ಕಣ್ಣಮುಂದೆಯೇ ಪ್ರಕೃತಿ ವಿಕೋಪದಿಂದ ನಿಷ್ೊ್ರಯೋಜನೆಗೊಂಡಿರುವುದು ದು:ಖವುಂಟು ಮಾಡಿದೆ. ರಾಜ್ಯದ ಪರ ಬಲವಾದ ಕಾನೂನು ಹೋರಾಟ ಮಾಡದ ಕಾರಣಕ್ಕೆ ಸುಪ್ರೀಂ ಕೋರ್ಟ್‌ 24 ಏತನೀರಾವರಿ ಯೋಜನೆ ರದ್ದುಗೊಳಿಸಿರುವುದು ದೌಭಾಗ್ಯದ ಸಂಗತಿ ಎಂದರು.

ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಅವಧೂತರೆಂದರೆ ದೇವರ ಸಮಾನ. ಮಠದ ಏಳನೇ ಪೀಠಾಧ್ಯಕ್ಷ ಶ್ರೀನಂಜಾವಧೂತರಿಗೆ ದೂರದೃಷ್ಟಿತ್ವ ಮೆಚ್ಚತಕ್ಕದ್ದು. ಹಲವು ವರ್ಷಗಳಿಂದ ಸ್ವಾಮೀಜಿ ಮಧ್ಯಕರ್ನಾಟಕದ ನೀರಾವರಿ ಯೋಜನೆ ತ್ವರಿತ ಅನುಷ್ಟಾನಕ್ಕೆ ಒತ್ತಾಯಿಸುತ್ತಿದ್ದಾರೆ. ಭದ್ರಾಮೇಲ್ದಂಡೆ 7.5 ಕಿಮೀ ಸುರಂಗ ಕಾಮಗಾರಿ ಪೈಕಿ 6 ಕಿಮೀ ಕಾಮಗಾರಿ ಮುಗಿದಿದ್ದು, ವರ್ಷದ ಕೊನೆ ವೇಳೆಗೆ ವಿವಿ ಸಾಗರಕ್ಕೆ ನೀರು ಹರಿಯಲಿದೆ ಎಂದರು.

ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ರಾಜ್ಯದಲ್ಲಿ ಒಟ್ಟು 3554 ಟಿಎಂಸಿ ನೀರು ಲಭ್ಯವಿದ್ದು, ಅದರಲ್ಲಿ 1300 ಟಿಎಂಸಿ ಮಾತ್ರ ಬಳಕೆಯಾಗುತ್ತಿದೆ. ಬಾಕಿ ನೀರಿನ ಬಳಕೆಗೆ ಎಲ್ಲಾ ರಾಜಕೀಯ ಪಕ್ಷ ಗಳ ಮುಖಂಡರು ಬದ್ಧತೆ ಪ್ರದರ್ಶಿಸಬೇಕು. ದಕ್ಷಿಣ ಕನ್ನಡ ಭಾಗದಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆಗೆ ತೀವ್ರ ವಿರೋಧವಿದ್ದು, ತಾನು ಹಲವು ಬಾರಿ ಕಪ್ಪುಬಾವುಟ ಪ್ರದರ್ಶನ ಎದುರಿಸಿದ್ದೇನೆ. ಸಾವಿರಾರಕ್ಕೂ ಅಧಿಕ ಟಿಎಂಸಿ ನೀರು ಸಮುದ್ರ ಸೇರುತ್ತಿದ್ದು, ಆ ಪೈಕಿ ಕೇವಲ 23 ಟಿಎಂಸಿ ನೀರು ಎತ್ತಿನಯೋಜನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ನಮ್ಮ ಭಾಗದ ಜನರಿಗೆ ಮನವರಿಕೆ ಮಾಡಿದ್ದೇನೆ ಎಂದು ತಮ್ಮ ಸಮಷ್ಟಿ ಪ್ರಜ್ಞೆ ರಾಜಕಾರಣ ಕುರಿತು ಮಾತನಾಡಿದರು.

ಕುಂಚಿಟಿಗಒಕ್ಕಲಿಗರಿಗೆ ಒಬಿಸಿ ಮಾನ್ಯತೆ ದೊರಕಿಸಿಕೊಡಲು ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಡುವೆ ಎಂದು ತಿಳಿಸಿದರು.ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಸ್ವಾಮೀಜಿ ಮಾತನಾಡಿ, ಪ್ರಕೃತಿ ವಿರುದ್ಧವಾಗಿ ನಾವೆಲ್ಲ ನಡೆದುಕೊಂಡದ್ದು ತೀವ್ರ ಬರದ ಸ್ಥಿತಿ ಎದುರಿಸುವಂತಾಗಿದೆ. ಭೂಮಿ ತಾಯಿಯನ್ನು ಸಸ್ಯ ಶಾಮಲೆಯಾಗಿ ಮಾಡಬೇಕಿದೆ. ಕ್ಯಾಬಿನೆಟ್‌ ಸೆಕ್ರೇಟರಿ ಸುಬ್ರಮಣ್ಯಂ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ರನ್ನು ಕುರಿತು ರಚಿಸಿರುವ ಗ್ರಂಥ ಓದಿ ಅವರ ಸಾಧನೆ ತಿಳಿಯುವುದು ರಾಜ್ಯ ಜನರ ಅಗತ್ಯ ಎಂದು ಅವರ ಸಾಧನೆಗಳನ್ನು ಶ್ಲಾಘಿಸಿದರು.

ಪ್ರಶಸ್ತಿ ಪ್ರದಾನ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಜೀವಮಾನ ಸಾಧನೆ ಗುರುತಿಸಿ 'ಅವಧೂತ ಪ್ರಜ್ಞ' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮಾಜಿ ಪ್ರಧಾನಿಗೆ ಪ್ರಶಸ್ತಿ ಪ್ರದಾನ ಮಾಡಿ ಮೆಚ್ಚಿಗೆ ಮಾತನಾಡಿದ್ದು ವಿಶೇಷವಾಗಿತ್ತು.

ಸಭೆಯಲ್ಲಿ ಸಂಸದರಾದ ಮುದ್ದಹನುಮೇಗೌಡ, ಬಿ.ಎನ್‌.ಚಂದ್ರಪ್ಪ, ಶಾಸಕರಾದ ವೈ.ಎ.ನಾರಾಯಣಸ್ವಾಮಿ, ಅಶ್ವತ್ಥನಾರಾಯಣ, ಜಿ.ಎಚ್‌.ತಿಪ್ಪಾರೆಡ್ಡಿ, ತಿಮ್ಮರಾಯಪ್ಪ, ಚೌಡರೆಡ್ಡಿ, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಮಾಜಿ ಸಚಿವ ಸತ್ಯನಾರಾಯಣ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಡಿ.ಯಶೋಧರ, ಹನುಮಂತರಾಯಪ್ಪ, ನಿವೃತ್ತ ಐಎಎಸ್‌ ಅಧಿಕಾರಿ ಚಿಕ್ಕಣ್ಣ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ