ಆ್ಯಪ್ನಗರ

​ ಪ್ರಾಣಿ, ಪಕ್ಷಿಗಳ ಬಗ್ಗೆಯೂ ಕಾಳಜಿ ಇರಲಿ

ಮನುಷ್ಯನ ಸಹ ಜೀವಿಯಂತಿರುವ ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ನಮಗೆ ವಿಶೇಷ ಕಾಳಜಿಯಿರಬೇಕು. ಅದು ನಮ್ಮಿಂದ ಆಗುತ್ತಿಲ್ಲ. ಹೀಗಾಗಿ ಪರಿಸರದಲ್ಲಿ ಅಸಮತೋಲ ಉಂಟಾಗಿ ಕಾಡಿನ ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ ಎಂದು ವನ್ಯಜೀವಿ ಛಾಯಾ ಗ್ರಾಹಕ ಹಾಗೂ ಗುಬ್ಬಚ್ಚಿ ಟ್ರಸ್ಟ್‌ ಅಧ್ಯಕ್ಷ ಎಂ.ಕಾರ್ತಿಕ್‌ ಆತಂಕ ವ್ಯಕ್ತಪಡಿಸಿದರು.

ವಿಕ ಸುದ್ದಿಲೋಕ 12 May 2017, 6:45 pm
ಚಳ್ಳಕೆರೆ : ಮನುಷ್ಯನ ಸಹ ಜೀವಿಯಂತಿರುವ ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ನಮಗೆ ವಿಶೇಷ ಕಾಳಜಿಯಿರಬೇಕು. ಅದು ನಮ್ಮಿಂದ ಆಗುತ್ತಿಲ್ಲ. ಹೀಗಾಗಿ ಪರಿಸರದಲ್ಲಿ ಅಸಮತೋಲ ಉಂಟಾಗಿ ಕಾಡಿನ ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ ಎಂದು ವನ್ಯಜೀವಿ ಛಾಯಾ ಗ್ರಾಹಕ ಹಾಗೂ ಗುಬ್ಬಚ್ಚಿ ಟ್ರಸ್ಟ್‌ ಅಧ್ಯಕ್ಷ ಎಂ.ಕಾರ್ತಿಕ್‌ ಆತಂಕ ವ್ಯಕ್ತಪಡಿಸಿದರು.
Vijaya Karnataka Web
​ ಪ್ರಾಣಿ, ಪಕ್ಷಿಗಳ ಬಗ್ಗೆಯೂ ಕಾಳಜಿ ಇರಲಿ


ನಗರದ ಇಂಡಸ್‌ ಶಾಲೆಯಲ್ಲಿ ಭಾನುವಾರ ಪಕ್ಷಿಗಳ ಹಬ್ಬ ಮತ್ತು ಪಕ್ಷಿಗಳ ಸಂರಕ್ಷ ಣೆಗಾಗಿ ಪಕ್ಷಿಗೂಡು ಮತ್ತು ನೀರು, ಆಹಾರ ಒದಗಿಸುವ ಪರಿಕರದ ಅಳವಡಿಕೆ ಮತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಳೆಯಿಲ್ಲದೆ ನೀರಿಗಾಗಿ ಮನುಷ್ಯ ಏನೆಲ್ಲಾ ಪ್ರಯತ್ನ ನಡೆಸಿ ನೀರಿಲ್ಲದೆ ಬದುಕುವುದು ಎಷ್ಟು ಕಷ್ಟ ಎಂದು ಮಳೆಗಾಗಿ ಎದುರು ನೋಡುತ್ತಿದ್ದಾರೆ. ಆದರೆ ನಮ್ಮಂತೆ ಪಕ್ಷಿಗಳು ಎಂದು ತಿಳಿಯುತ್ತಿಲ್ಲ. ಪಕ್ಷಿಗಳಿಗೆ ಅಡವಿಯಲ್ಲಿ ನೀರಿಲ್ಲದೆ ಹಾರಲು ಶಕ್ತಿಯಿಲ್ಲದೆ ಸಾಯುತ್ತಿವೆ. ಬೇಸಿಗೆಯಲ್ಲಿ ನೀರು, ಆಹಾರ ನೀಡುವ ಮೂಲಕ ಪುಣ್ಯದ ಕೆಲಸಕ್ಕೆ ಮುಂದಾಗಬೇಕು. ಚಿತ್ರದುರ್ಗದಲ್ಲಿ 700 ಕಡೆ ನೀರು ಮತ್ತು ಗೂಡುಗಳ ಪರಿಕರಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಆಂಗ್ಲ ಉಪನ್ಯಾಸಕ ಕೆ.ವಿ.ವೆಂಕಟೇಶ್‌ಮೂರ್ತಿ ಮಾತನಾಡಿ, ಪ್ರಕೃತಿಯಲ್ಲಿ ಸಂಭವಿಸಬಹುದಾದ ತೊಂದರೆಗಳ ಬಗ್ಗೆ ಮನುಷ್ಯನಿಂತ ಪ್ರಾಣಿ, ಪಕ್ಷಿಗಳಿಗೆ ಮೊದಲು ಮಾಹಿತಿ ತಿಳಿಯುವುದು. ಆದರೂ ನಾವು ಇವುಗಳ ಬಗ್ಗೆ ನಿರ್ಲಕ್ಷ ್ಯವಹಿಸುತ್ತಿದ್ದೇವೆ. ಪಕ್ಷಿಗಳಿಗೆ 10 ಸಾವಿರ ವರ್ಷಗಳ ಇತಿಹಾಸವಿದೆ. ಶಬ್ಧ ಮಾಲಿನ್ಯ ಮತ್ತು ತರಂಗಗಳಿಂದ ಅನೇಕ ಪಕ್ಷಿ ಸಂಕುಲ ಕಣ್ಮರೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಮಾಯಣದಲ್ಲಿ ಸತ್ಯಕ್ಕಾಗಿ ರಾವಣನ ಜತೆ ಹೋರಾಟ ನಡೆಸಿದ ಜಟಾಯು ಪಕ್ಷಿ ನಮ್ಮ ಮೊಳಕಾಲ್ಮುರಿನ ನಡೆದಿದೆ ಎಂದು ಇತಿಹಾಸದಲ್ಲಿ ಕೇಳಿದ್ದೇವೆ. ನಮಗಿಂತ ವೈಜ್ಞಾನಿಕವಾಗಿ ಪಕ್ಷಿಗಳು ಮಳೆ, ಗಾಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿ ಗೂಡುಗಳನ್ನು ಕಟ್ಟಿಕೊಳ್ಳುತ್ತಿರುವುದನ್ನು ಕಾಣಬಹುದು ಎಂದರು.

ಹಾವುಗಳನ್ನು ಕಾಡಿಗೆ ಬಿಡುವ ನಾವು ಬಿಡುವ ನಾವು ಪಕ್ಷಿಗಳನ್ನು ಸಂರಕ್ಷ ಣೆ ಮಾಡಲು ಏಕೆ ಸಾಧ್ಯವಾಗುವುದಿಲ್ಲ ಎಂಬ ಪ್ರಶ್ನೆ ಕಾಡುವುದು. ಹಾಗೇ ಮನುಷ್ಯನಿಗೆ ಮೊದಲು ಜತೆಗಾಗಿದ್ದು, ನಾಯಿ, ತಾನು ಬೇಟೆಗೆ ಹೋದ ಸಂದರ್ಭದಲ್ಲಿ ತನ್ನ ಜತೆಯಲ್ಲಿ ರಕ್ಷ ಣೆಗೆ ಕರೆದುಕೊಂಡು ಹೋಗುತ್ತಿದ್ದರು. ಇಂತ ಪ್ರಾಣಿ,ಪಕ್ಷ ಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಿದೆ ಎಂದರು.

ಮೂಳೆ ತಜ್ಞ ಡಾ.ರಾಘವೇಂದ್ರ, ಇಂಡಸ್‌ ಶಾಲೆಯ ಕಾರ್ಯದರ್ಶಿ ಚಿಕ್ಕಣ್ಣ,ಬೆಳಗೆರೆ ಸುರೇಶ್‌ ಮಾತನಾಡಿದರು. ವೀರಣ್ಣ, ಹಟ್ಟಿರುದ್ರಪ್ಪ, ದಯಾನಂದ್‌, ಬಿಜೆಪಿ ನಗರದ ಘಟಕ ಅಧ್ಯಕ್ಷ ವೀರೇಶ್‌, ಕಾರ್ಯದರ್ಶಿ ಮಂಜುನಾಥ್‌, ಶಿಕ್ಷ ಕ ನಾಗರಾಜು,ಗಾಯಕ ಓಬಳೇಶ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ