ಆ್ಯಪ್ನಗರ

ಶ್ರವಣಕುಮಾರ ನೀತಿ ಪ್ರಧಾನ ಚಿತ್ರ

ಹೆತ್ತವರು ಮಕ್ಕಳಿಂದ ನಿರ್ಲಕ್ಷ ್ಯಕ್ಕೊಳಗಾಗಿ ವೃದ್ಧಾಶ್ರಮ, ಅನಾಥಾಶ್ರಮ ಸೇರುತ್ತಿರುವ ಹಿನ್ನೆಲೆಯಲ್ಲಿ ಯುವಕರ ಹಾಗೂ ಸಾಮಾಜಿಕ ಪರಿವರ್ತನೆ ಆಶಯ ಇಟ್ಟುಕೊಂಡು ಪೌರಾಣಿಕ ಹಿನ್ನೆಲೆಯುಳ್ಳ 'ಶ್ರವಣ ಕುಮಾರ' ಚಲನ ಚಿತ್ರ ನಿರ್ಮಿಸಲಾಗಿದ್ದು, ಚಿತ್ರಪ್ರೇಮಿಗಳು ಸಿನಿಮಾವನ್ನು ಬೆಂಬಲಿಸಬೇಕೆಂದು ಚಿತ್ರದ ನಿರ್ದೇಶಕ ಬಂತಿ ಸಿರಾ ಹೇಳಿದರು.

ವಿಕ ಸುದ್ದಿಲೋಕ 18 Jul 2017, 8:06 am
ಚಿತ್ರದುರ್ಗ : ಹೆತ್ತವರು ಮಕ್ಕಳಿಂದ ನಿರ್ಲಕ್ಷ ್ಯಕ್ಕೊಳಗಾಗಿ ವೃದ್ಧಾಶ್ರಮ, ಅನಾಥಾಶ್ರಮ ಸೇರುತ್ತಿರುವ ಹಿನ್ನೆಲೆಯಲ್ಲಿ ಯುವಕರ ಹಾಗೂ ಸಾಮಾಜಿಕ ಪರಿವರ್ತನೆ ಆಶಯ ಇಟ್ಟುಕೊಂಡು ಪೌರಾಣಿಕ ಹಿನ್ನೆಲೆಯುಳ್ಳ 'ಶ್ರವಣ ಕುಮಾರ' ಚಲನ ಚಿತ್ರ ನಿರ್ಮಿಸಲಾಗಿದ್ದು, ಚಿತ್ರಪ್ರೇಮಿಗಳು ಸಿನಿಮಾವನ್ನು ಬೆಂಬಲಿಸಬೇಕೆಂದು ಚಿತ್ರದ ನಿರ್ದೇಶಕ ಬಂತಿ ಸಿರಾ ಹೇಳಿದರು.
Vijaya Karnataka Web
ಶ್ರವಣಕುಮಾರ ನೀತಿ ಪ್ರಧಾನ ಚಿತ್ರ


ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,' ಶ್ರೀವಾಲ್ಮೀಕಿ ಪ್ರೊಡಕ್ಷನ್‌ ಲಾಂಛನದಡಿ ತಯಾರಾಗಿ ಇದೀಗ ಬಿಡುಗಡೆಯಾಗುತ್ತಿರುವ 'ಶ್ರವಣ ಕುಮಾರ' ನೀತಿ ಪ್ರಧಾನ ಒಂದು ಕಥಾವಸ್ತು. ಆಲಕ್ಷ್ಯಕ್ಕೆ ಒಳಗಾಗಿದ್ದ ಈ ಕಥಾವಸ್ತುವನ್ನು ಆಸಕ್ತ, ಅನುಭವಿ ಕಲಾವಿದರ ಹಾಗೂ ನುರಿತ ತಾಂತ್ರಿಕ ವರ್ಗದ ನೆರವಿನಿಂದ, ಆತ್ಮೀಯ ಸಹಕಾರದಿಂದ ನಿರ್ದೇಶಿಸಿದ್ದೇನೆ' ಎಂದು ತಿಳಿಸಿದರು.

ಚಿತ್ರದ ಮೊದಲ ವೀಕ್ಷಣೆಯಲ್ಲಿ ಚಲನಚಿತ್ರ ವಿಮರ್ಶಕರು, ಸಾಹಿತಿಗಳು, ಕಲಾವಿದರು, ತಂತ್ರಜ್ಞರು ಮೆಚ್ಚುಗೆ ಸೂಚಿಸಿದ್ದಾರೆ. ಸೆನ್ಸಾರ್‌ ಮಂಡಳಿ ಈ ಚಿತ್ರ ವೀಕ್ಷಿಸಿ ಪ್ರತಿಯೊಬ್ಬರೂ ಕುಟುಂಬ ಸಹಿತ ನೋಡಲೇಬೇಕಾದ ಚಿತ್ರ ಎಂದು ಮೆಚ್ಚಿ ಯು ಸರ್ಟಿಫಿಕೇಟ್‌ ನೀಡಿದೆ ಎಂದರು.

ಇಂದಿನ ಹೆತ್ತವರು ಮಕ್ಕಳಿಗೆ ಭಾರವಾಗುತ್ತಿದ್ದಾರೆ. ಅವರನ್ನು ಸಾಕುವ, ನೋಡಿಕೊಳ್ಳುವ ಕನಿಷ್ಟ ಜವಾಬ್ದಾರಿಯೂ ಇಲ್ಲದೇ, ಹೆತ್ತವರ ಇಳಿವಯಸ್ಸಿನ ಸಹಜ ಕಾಯಿಲೆಗಳಿಗೆ ಸರಿಯಾದ ಚಿಕಿತ್ಸೆ ಕೊಡಿಸಲಾರದ ದುರಂತ ಸ್ಥಿತಿಗೆ ಇಂದಿನ ಯುವ ಸಮುದಾಯ ತಲುಪಿದೆ. ಇದೊಂದು ಸಾಮಾಜಿಕ ಪಿಡುಗು ಆಗಿದೆ. ಈ ನಿಟ್ಟಿನ ಸಾಮಾಜಿಕ ಪ್ರಭಾವ ಬೀರುವ ಆಶಯ ಇಟ್ಟುಕೊಂಡು ಚಿತ್ರ ನಿರ್ದೇಶಿಸಲಾಗಿದೆ ಎಂದು ಹೇಳಿದರು.

ಚಿತ್ರದ ತಾರಾಗಣದಲ್ಲಿರುವ ಉದಯರವಿ ದೊಡ್ಡಗಟ್ಟ ಮಾತನಾಡಿ ಶ್ರವಣಕುಮಾರ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ. ಮಕ್ಕಳು ತಂದೆ ತಾಯಿಗಳ ಸೇವೆ ಹೇಗೆ ಮಾಡಬೇಕೆನ್ನುವ ಪರಿಣಾಮ ಬೀರುವ ಸನ್ನಿವೇಶ ಈ ಚಿತ್ರದಲ್ಲಿದೆ. ಯಾವುದೇ ಸಂಭಾವನೆ ಪಡೆಯದೆ ಚಿತ್ರದಲ್ಲಿ ನಟಿಸಿದ್ದೇನೆ ಎಂದರು.

ಶ್ರೀವಾಲ್ಮೀಕಿ ಪ್ರೊಡಕ್ಷನ್‌ನ ಬೋರಯ್ಯ ಆರ್‌.ಎನ್‌.ಮದಕರಿ,' ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದ್ದು ಜು.28 ರಂದು ರಾಜ್ಯದಾದ್ಯಂತ ಬಿಡುಗಡೆ ಆಗುತ್ತಿದೆ. ಸದಭಿರುಚಿಯ ಕನ್ನಡ ಚಿತ್ರಗಳನ್ನು ವೀಕ್ಷಿಸಿ, ಬೆಂಬಲಿಸಿದ ಕನ್ನಡ ಪ್ರೇಕ್ಷಕರು ಶ್ರವಣಕುಮಾರ ಚಿತ್ರಕ್ಕೂ ಬೆಂಬಲಿಸಬೇಕು' ಎಂದು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ