ಆ್ಯಪ್ನಗರ

​ ಗೋಶಾಲೆಗಳಿಗೆ ರಾಜ್ಯ ತಂಡ ಭೇಟಿ, ಪರಿಶೀಲನೆ

ತಾಲೂಕಿನ ಗೋಶಾಲೆಗಳನ್ನು ಮುಂದುವರೆಸುವಂತೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಯಲ್ಲಿ ಶುಕ್ರವಾರ ತಾಲೂಕಿನ ಮುತ್ತಿಗಾರಹಳ್ಳಿ ಗೋಶಾಲೆಗೆ ಪಶು ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ ಒಳಗೊಂಡ ರಾಜ್ಯ ತಂಡವು ಭೇಟಿ ನೀಡಿ ಮಾಹಿತಿ ಪಡೆಯಿತು.

ವಿಕ ಸುದ್ದಿಲೋಕ 13 Aug 2017, 8:18 am
ಮೊಳಕಾಲ್ಮುರು : ತಾಲೂಕಿನ ಗೋಶಾಲೆಗಳನ್ನು ಮುಂದುವರೆಸುವಂತೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಯಲ್ಲಿ ಶುಕ್ರವಾರ ತಾಲೂಕಿನ ಮುತ್ತಿಗಾರಹಳ್ಳಿ ಗೋಶಾಲೆಗೆ ಪಶು ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ ಒಳಗೊಂಡ ರಾಜ್ಯ ತಂಡವು ಭೇಟಿ ನೀಡಿ ಮಾಹಿತಿ ಪಡೆಯಿತು.
Vijaya Karnataka Web
​ ಗೋಶಾಲೆಗಳಿಗೆ ರಾಜ್ಯ ತಂಡ ಭೇಟಿ, ಪರಿಶೀಲನೆ


ತಹಸೀಲ್ದಾರ್‌ ಜಿ.ಕೊಟ್ರೇಶ್‌ ಮಾತನಾಡಿ, ಈ ಗೋಶಾಲೆಗೆ ಪ್ರತಿ ದಿನವೂ 5100 ಕ್ಕೂ ಹೆಚ್ಚಿನ ಜಾನುವಾರುಗಳು, 4 ಸಾವಿರಕ್ಕೂ ಹೆಚ್ಚಿನ ಕುರಿಗಳು ಆಗಮಿಸುತ್ತಿವೆ. ಪ್ರತಿ ಜಾನುವಾರಿಗೆ ತಲಾ 8, ಕುರಿಗೆ ತಲಾ ಒಂದು ಕೆ.ಜಿ. ಕತ್ತರಿಸಿದ ಮೇವು ವಿತರಿಸಲಾಗುತ್ತಿದೆ. ದಿನಾಲು 14 ಟನ್‌ ಬೇಕಾಗುತ್ತದೆ ಎಂದು ತಂಡಕ್ಕೆ ಮಾಹಿತಿ ನೀಡಿದರು.

ಒಣಗಿದ ಮೇವಿಗೆ ಕೆ.ಜಿ.ಒಂದಕ್ಕೆ 3.30 ರೂ, ಹಸಿ ಮೇವಿಗೆ 1.10 ರೂ ನೀಡಲಾಗುತ್ತಿದೆ. ಸರಕಾರವು ಪ್ರತಿ ಟನ್‌ಗೆ 3500 ರೂ ನಿಗಧಿಪಡಿಸಿದೆ. ಈ ಬೆಲೆಗೂ ಕಡಿಮೆ ದರದಲ್ಲಿ ನಾವು ಮೇವು ಖರೀದಿಸುತ್ತಿದ್ದೇವೆ. ಇದರ ಜತೆಯಲ್ಲಿ ಮೇವಿಗೆ ಖನಿಜಾಂಶ ಮಿಶ್ರಣ ಮಾಡಲಾಗುತ್ತಿದೆ. ಇದನ್ನೆಲ್ಲಾ ಗುತ್ತಿಗೆದಾರರೇ ನಿರ್ವಹಿಸುತ್ತಿದ್ದು ಎಲ್ಲಾ ವೆಚ್ಚವನ್ನು ಅವರೇ ಭರಿಸುತ್ತಿದ್ದಾರೆ ಎನ್ನುವ ಮಾಹಿತಿಗೆ ತಂಡವು ಮೆಚ್ಚುಗೆ ವ್ಯಕ್ತಪಡಿಸಿತು.

ತಂಡದ ಮುಖ್ಯಸ್ಥ ಶ್ರೀನಿವಾಸ್‌ ಮಾತನಾಡಿ, ಸರಕಾರದ ನಿಯಮದ ಪ್ರಕಾರ ವರ್ಷದಲ್ಲಿ ಆರು ತಿಂಗಳು ಗೋಶಾಲೆ ನಡೆಸಬೇಕಿದೆ. ಜಿಲ್ಲೆಯಲ್ಲಿ ಈ ಅವಧಿಗೂ ಹೆಚ್ಚು ಗೋಶಾಲೆ ಮುಂದುವರಿಸುವಂತೆ ಒತ್ತಡ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಲಾಗಿದೆ. ಇದಕ್ಕೂ ಮೊದಲು ಸಾಣಿಕೆರೆ, ತುರುವನೂರು, ದೇವರಹಟ್ಟಿ ಗೋಶಾಲೆಗಳಿಗೆ ಭೇಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ರವಿಕುಮಾರ್‌, ಸಹಾಯಕ ಸಾಂಖ್ಯಿಕ ಅಧಿಕಾರಿ ಸೋಮಶೇಖರ್‌, ಉಪವಿಭಾಗಾಧಿಕಾರಿ ರಾಘವೇಂದ್ರ ತಳವಾರ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ