ಆ್ಯಪ್ನಗರ

ಕಡಲೆ ಕಾಳು ನುಂಗಿ ಮಗು ಸಾವು

ತಾಲೂಕಿನ ಕಕ್ಕೇರು ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಒಂದೂವರೆ ವರ್ಷದ ಮಗು ಕಡಲೆಕಾಳು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ.

ವಿಕ ಸುದ್ದಿಲೋಕ 5 Sep 2017, 8:28 am
ಚಿತ್ರದುರ್ಗ: ತಾಲೂಕಿನ ಕಕ್ಕೇರು ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಒಂದೂವರೆ ವರ್ಷದ ಮಗು ಕಡಲೆಕಾಳು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ.
Vijaya Karnataka Web
ಕಡಲೆ ಕಾಳು ನುಂಗಿ ಮಗು ಸಾವು


ಮೃತ ಬಾಲಕನ ಹೆಸರು ಸೃಜನ್‌. ಕಕ್ಕೇರು ಗ್ರಾಮದ ಪಾತಲಿಂಗಪ್ಪ ಮತ್ತು ಅಂಬಿಕಾ ದಂಪತಿ ಪುತ್ರ.

ಮನೆಯಲ್ಲಿ ಆಟವಾಡುತ್ತಿದ್ದ ಮಗು ತನಗೆ ಸಿಕ್ಕಿದ ಕಡಲೆ ಕಾಳನ್ನು ಬಾಯಲ್ಲಿಟ್ಟುಕೊಂಡಿದೆ. ಅದು ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಒದ್ದಾಡಲಾರಂಭಿಸಿದೆ. ಇದನ್ನು ಗಮನಿಸಿದ ತಾಯಿ ಎತ್ತಿಕೊಂಡ ಸ್ವಲ್ಪ ಹೊತ್ತಿನಲ್ಲೇ ಮಗು ಚಟುವಟಿಕೆ ಸ್ಥಗಿತಗೊಂಡಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದೆ.

ಜಿಲ್ಲಾಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ. ಈ ಕುರಿತು ಡಾ.ಶ್ರೀರಾಮ್‌ 'ಚಿಕ್ಕಮಕ್ಕಳು ಗಟ್ಟಿ ಪದಾರ್ಥ ಸೇವನೆ ಮಾಡಿದಾಗ ಶ್ವಾಸಕೋಶಕ್ಕೆ ಹೋಗಿ ಉಸಿರುಗಟ್ಟಿರುವ ಸಾಧ್ಯತೆ ಇರುತ್ತದೆ' ಎಂದು ಹೇಳಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ