ಆ್ಯಪ್ನಗರ

ಗ್ರಾಪಂ ಆಯ್ಕೆಗೆ 35 ಮಾನದಂಡ | ಶೇಕಡವಾರು ಅಂಕ ಗಳಿಕೆ ನಿಗದಿ

'ಗಾಂಧಿ ಗ್ರಾಮ ಪುರಸ್ಕಾರ' ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿರುವ ಸರಕಾರ ಗ್ರಾಪಂ ಆಯ್ಕೆಗೆ 35 ಪ್ರಶ್ನಾವಳಿಗಳ ಮಾನದಂಡ ರೂಪಿಸಿದೆ. ಈ ಮಾನದಂಡ ಶೇಕಡವಾರು ಸಾಧನೆ ಮೇಲೆ ಇಂತಿಷ್ಟು ಅಂಕ ಫಿಕ್ಸ್‌ ಮಾಡಿದೆ. ಏಕೆಂದರೆ ಈ ಪುರಸ್ಕಾರದ ಜತೆ ಐದು ಲಕ್ಷ ರೂ.ಗಳ ಪ್ರೋತ್ಸಾಹ ಧನ ಕೂಡ ನೀಡುತ್ತದೆ.

Vijaya Karnataka 27 Jul 2018, 9:07 pm
ಚಿತ್ರದುರ್ಗ : 'ಗಾಂಧಿ ಗ್ರಾಮ ಪುರಸ್ಕಾರ' ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿರುವ ಸರಕಾರ ಗ್ರಾಪಂ ಆಯ್ಕೆಗೆ 35 ಪ್ರಶ್ನಾವಳಿಗಳ ಮಾನದಂಡ ರೂಪಿಸಿದೆ. ಈ ಮಾನದಂಡ ಶೇಕಡವಾರು ಸಾಧನೆ ಮೇಲೆ ಇಂತಿಷ್ಟು ಅಂಕ ಫಿಕ್ಸ್‌ ಮಾಡಿದೆ. ಏಕೆಂದರೆ ಈ ಪುರಸ್ಕಾರದ ಜತೆ ಐದು ಲಕ್ಷ ರೂ.ಗಳ ಪ್ರೋತ್ಸಾಹ ಧನ ಕೂಡ ನೀಡುತ್ತದೆ.
Vijaya Karnataka Web
ಗ್ರಾಪಂ ಆಯ್ಕೆಗೆ 35 ಮಾನದಂಡ | ಶೇಕಡವಾರು ಅಂಕ ಗಳಿಕೆ ನಿಗದಿ


ಯಾವುದಕ್ಕೆ ಎಷ್ಟು ಅಂಕ:


ಪಂಚಾಯತ್‌ ರಾಜ್‌ ಇಲಾಖೆ 2017-18ರ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಗ್ರಾಪಂಗಳಿಂದ ಅರ್ಜಿ ಆಹ್ವಾನಿಸಿದೆ. ಈ ಪುರಸ್ಕಾರ ಆಯ್ಕೆ ಮಾನದಂಡಗಳಿಗೆ ನಿಗದಿಪಡಿಸಿರುವ ಅಂಕಗಳು ಹೀಗಿವೆ.

ವೈಯಕ್ತಿಕ ಶೌಚಾಲಯ ನಿರ್ಮಾಣ 5, ನರೇಗಾದಡಿ ಪ್ರತಿಶತ ಉದ್ಯೋಗ, ಅನುದಾನ ವಿನಿಯೋಗ 5, ನರೇಗಾದಡಿ ಸಂಪನ್ಮೂಲ ನಿರ್ವಹಣೆಗೆ 5 ಅಂಕಗಳಿವೆ. ಮೂಲ ಸೌಕರ್ಯ 3, ವಸತಿ ಯೋಜನೆಗಳ ಅನುಷ್ಠಾನ 5, ನೈರ್ಮಲ್ಯೀಕರಣ 5, ಹದಿನಾಲ್ಕನೇ ಹಣಕಾಸು ಆಯೋಗ ಅನುದಾನ ವಿನಿಯೋಗ 4, ಶಾಸನಬದ್ದ ಅನುದಾನ ಬಳಕೆ 4, ಪಂಚತಂತ್ರ ತಂತ್ರಾಂಶದಲ್ಲಿ ಗ್ರಾಪಂ ಮಾಸಿಕ ಸಭೆ ಮತ್ತು ಸಭಾ ನಡಾವಳಿ ಅಳವಡಿಕೆಗೆ 5, ವಿಡಿಯೋ ಚಿತ್ರೀಕರಣಕ್ಕೆ 5 ಅಂಕ ನಿಗದಿಪಡಿಸಲಾಗಿದೆ.

ಬ್ಯಾಂಕ್‌ ಲೆಕ್ಕ ಮರುಹೊಂದಾಣಿಕೆ ವರದಿ 3, ಸ್ವಂತ ಸಂಪನ್ಮೂಲ ಸಂಗ್ರಹ 8, ಸ್ಥಾಯಿ ಸಮಿತಿ, ಉಪ ಸಮಿತಿ ರಚನೆ, ನಡಾವಳಿಗೆ 7, ಗ್ರಾಪಂ ಅಭಿವೃದ್ಧಿ ಯೋಜನೆ 5, ಕಾಮಗಾರಿ ವಿವರ ಗಾಂಧಿಸಾಕ್ಷಿ ತಂತ್ರಾಂಶ ಅಳವಡಿಕೆಗೆ 3, ವಾರ್ಷಿಕ ಕ್ರಿಯಾ ಯೋಜನೆಗೆ 3, ಆಸ್ತಿ ವಿವರಗಳಿಗೆ 6, ಪರಿಶಿಷ್ಟರಿಗೆ ಮೀಸಲಿರಿಸಿದ ಅನುದಾನದ ಬಳಕೆಗೆ 5 ಅಂಕ ಇದೆ.

ವಿಕಲಚೇತನರ ಅನುದಾನದ ಬಳಕೆಗೆ 3, ಕ್ರೀಡಾ ಹಣ ಬಳಕೆಗೆ 5, ಅನುದಾನ ಬಳಕೆ ತಂತ್ರಾಂಶ ಅಳವಡಿಕೆಗೆ 3, ಗ್ರಾಪಂ ಸಿಬ್ಬಂದಿ ಹಾಜರಾತಿ ಬಯೋಮೆಟ್ರಿಕ್‌ ನಿರ್ವಹಣೆಗೆ 4 ಅಂಕ ನಿಗದಿಪಡಿಸಲಾಗಿದೆ.

ಸಕಾಲ ಸೇವೆಗಳಿಗೆ 2, ಜಮಾಬಂದಿ 4, ಗ್ರಾಪಂ ಆಸ್ತಿ ಒತ್ತುವರಿ ತೆರವು 4, ಮಾಹಿತಿ ಹಕ್ಕು ಅಧಿನಿಯಮ, ಸಕಾಲ ಸೇವೆ ಪ್ರಚಾರಕ್ಕೆ 2, ಗ್ರಾಪಂ ಸೇವೆ ಪ್ರಚುರಪಡಿಸಲು 4, ಮಾಹಿತಿ ಹಕ್ಕು ಕಾಯಿದೆಗೆ 4, ಗ್ರಾಪಂ ಸಿಬ್ಬಂದಿ ಸೇವಾ ಭದ್ರತೆಗೆ 4, ಗ್ರಾಪಂ ಕಚೇರಿ ಐಪಿ ಆಧಾರಿತ ಸಿಸಿಟಿವಿ ಅಳವಡಿಕೆಗೆ 4, ಉಪಕರಗಳಿಗೆ 4, ಇ -ಸ್ವತ್ತು ತಂತ್ರಾಂಶದಡಿ ಆಸ್ತಿ ನಮೂನೆಗಳ ವಿತರಣೆಗೆ 2 ಅಂಕ ಇರುತ್ತದೆ.

---------ಬಾಕ್ಸ್‌/

ವಿನೂತನ ಉಪಕ್ರಮಗಳು


ಗ್ರಾಪಂ ಆಡಳಿದಲ್ಲಿ ಕೈಗೊಂಡ ವಿನೂತನ ಉಪಕ್ರಮಗಳಿಗೆ 14 ಅಂಕ ನಿಗದಿ ಪಡಿಸಲಾಗಿದೆ. ಉದಾಹರಣೆಗೆ ವೈಫೈ, ನಗದುರಹಿತ ವಹಿವಾಟು, ಕುಂದುಕೊರತೆ ನಿವಾರಣೆಗೆ ವ್ಯವಸ್ಥೆ, ಗ್ರಾಪಂ ಸಭೆಗಳನ್ನು ಸ್ಥಳೀಯ ಟಿ.ವಿ.ಚಾನೆಲ್‌ಗಳಲ್ಲಿ ಪ್ರಸಾರ ಮಾಡುವುದು, ಕುಡಿಯುವ ನೀರಿಗೆ ಮೀಟರ್‌ ಅಳವಡಿಕೆ, ಹೊಗೆ ಮಕ್ತ ಗ್ರಾಪಂ, ಸಂಪೂರ್ಣ ಸಾಕ್ಷರತೆ, ವಿಮಾದಾರರ ಗ್ರಾಮ, ಡಿಜಿಟಲ್‌ ವಿಲೇಜ್‌, ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹರಿಗೆ ಭದ್ರತೆ ಕಲ್ಪಿಸಿರುವುದು.

**ಬಾಕ್ಸ್‌/

ಅರ್ಜಿ ಸಲ್ಲಿಕೆ, ಆಯ್ಕೆ ಹೇಗೆ?


ಪಂಚತಂತ್ರ ತಂತ್ರಾಂಶದಲ್ಲಿ ಜು.31ರಿಂದ ಆ.15 ರೊಳಗೆ ಅರ್ಜಿ ಸಲ್ಲಿಸಬೇಕು. ಪ್ರತಿ ತಾಲೂಕಿನಿಂದ ಅರ್ಹತೆ ಪಡೆದ ಮೂರು ಗ್ರಾಪಂಗಳನ್ನು ಆರಿಸಿ ಜಿಪಂಗಳಿಗೆ ಕಳುಹಿಸಲಾಗುವುದು. ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಪ್ರತಿ ತಾಲೂಕಿಗೆ ಒಂದರಂತೆ ಆಯ್ಕೆ ಮಾಡಿ ರಾಜ್ಯ ಸರಕಾರಕ್ಕೆ ಸಲ್ಲಿಸುತ್ತದೆ. ಪಂಚಾಯತ್‌ ರಾಜ್‌ ಇಲಾಖೆ ನಿರ್ದೇಶಕ ಎಂ.ಕೆ.ಕೆಂಪೇಗೌಡ ಈ ಕುರಿತು ಜು.25ರಂದು ಆದೇಶ ಹೊರಡಿಸಿದ್ದಾರೆ.

**

ಯೋಗ್ಯ ಆಯ್ಕೆಗೆ ಕ್ರಮ


ಗಾಂಧಿ ಪುರಸ್ಕಾರಕ್ಕೆ ಆಯ್ಕೆ ಮಾಡುವ ಗ್ರಾಪಂ ಕುಡಿವ ನೀರು, ಬೀದಿದೀಪ, ಸ್ವಚ್ಛತೆ, ತಿಪ್ಪೆಗುಂಡಿ ಸ್ಥಳಾಂತರ, ರಸ್ತೆ ಬದಿ, ಸಾರ್ವಜನಿಕ ಸ್ಥಳಗಳು, ಗ್ರಾಮಗಳ ನೈರ್ಮಲ್ಯ, ಸಮಗ್ರ ಸ್ವಚ್ಛತೆಗೆ ಕ್ರಮ ಕೈಗೊಂಡು, ಪುರಸ್ಕಾರದ ಗೌರವಕ್ಕೆ ಧಕ್ಕೆ ಬಾರದಂತೆ ಗ್ರಾಪಂ ಆಯ್ಕೆ ಮಾಡಲು ಸೂಚಿಸಿದೆ.

**

ಐದು ಲಕ್ಷ ಪುರಸ್ಕಾರ


ಶೇ 90ರಿಂದ 95 ರಷ್ಟು ಸಾಧನೆ ಮಾಡಿರುವ ಗ್ರಾಪಂಗಳನ್ನು ತಾಲೂಕಿಗೊಂದರಂತೆ ಗುರುತಿಸಿ, ಗಾಂಧಿ ಪುರಸ್ಕಾರದ ಜತೆ ಐದು ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ