Please enable javascript.ಕೃಷಿ ಸವಲತ್ತು ತಿಳಿವಳಿಕೆಗೆ ಗೋಡೆ ಬರಹ - ಕೃಷಿ ಸವಲತ್ತು ತಿಳಿವಳಿಕೆಗೆ ಗೋಡೆ ಬರಹ - Vijay Karnataka

ಕೃಷಿ ಸವಲತ್ತು ತಿಳಿವಳಿಕೆಗೆ ಗೋಡೆ ಬರಹ

ವಿಕ ಸುದ್ದಿಲೋಕ 11 Apr 2014, 2:00 am
Subscribe

ತಾಲೂಕಿನ ಎಲ್ಲಾ ಮುಖ್ಯ ರಸ್ತೆ ಬದಿಯ ತಡೆ ಗೋಡೆಗಳು ಗಾಢ ಹಳದಿ ಬಣ್ಣಗಳಿಂದ ಕೂಡಿದ್ದುಘಿ, ಕೃಷಿ ಇಲಾಖೆಯ ಅಮೂಲ್ಯವಾದ ಮಾಹಿತಿಗಳಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ.

ಕೃಷಿ ಸವಲತ್ತು ತಿಳಿವಳಿಕೆಗೆ ಗೋಡೆ ಬರಹ
ಮೊಳಕಾಲ್ಮುರು: ತಾಲೂಕಿನ ಎಲ್ಲಾ ಮುಖ್ಯ ರಸ್ತೆ ಬದಿಯ ತಡೆ ಗೋಡೆಗಳು ಗಾಢ ಹಳದಿ ಬಣ್ಣಗಳಿಂದ ಕೂಡಿದ್ದುಘಿ, ಕೃಷಿ ಇಲಾಖೆಯ ಅಮೂಲ್ಯವಾದ ಮಾಹಿತಿಗಳಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ.

ಭೂಚೇತನ ಯೋಜನೆಯಡಿ ರೈತರು ಸೇರಿದಂತೆ ಗ್ರಾಮಸ್ಥರಿಗೆ ಕೃಷಿ ಚಟುವಟಿಕೆ, ಭೂಮಿ ನಿರ್ವಹಣೆ, ರಸಗೊಬ್ಬರ, ಔಷಧಗಳ ಮಾಹಿತಿ ಜತೆ ಸರಕಾರದ ನಾನಾ ಯೋಜನೆಗಳ ಸೌಲಭ್ಯ ಪ್ರಚಾರಪಡಿಸುವ ನಾಮಲಕಗಳನ್ನು ಇಲಾಖೆ ವತಿಯಿಂದ ಬರೆಸಲಾಗುತ್ತಿದೆ.

ಬೆಂಗಳೂರು ಮೂಲದ ಕಲಾವಿದರು ನಾಮಲಕ ಬರೆಯುವ ಗುತ್ತಿಗೆ ಪಡೆದಿದ್ದು ತಾಲೂಕಿನಲ್ಲಿ ತುಮಕೂರಿನ ಪಾಂಡು ಆರ್ಟ್ಸ್‌ನ ಪಾಂಡು ಮತ್ತು ಸುರೇಶ್ ಎಂಬ ಕಲಾವಿದರು ತಮ್ಮ ಕುಂಚಗಳಲ್ಲಿ ಕೃಷಿ ಇಲಾಖೆ ಅಕಾರಿಗಳು ನೀಡಿದ ಅಷ್ಟೂ ಮಾಹಿತಿಗಳನ್ನು ಚಿತ್ರಿಸಿ ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ.

ಅನ್ನ ಹಾಕಿದ ಮನೆ ಕೆಡಲ್ಲ ಗೊಬ್ಬರ ಹಾಕಿದ ಹೊಲ ಕೆಡಲ್ಲ, ಒಡ್ಡಿಲ್ಲದ ಹೊಲವಿಲ್ಲ ಎತ್ತಿಲ್ಲದ ಕೃಷಿ ಇಲ್ಲ, ಹಸಿರೆಲೆ ಗೊಬ್ಬರ ಬಳಸಿ ಭೂ ಲವತ್ತತೆ ಹೆಚ್ಚಿಸಿ, ಆಹಾರ ಉಳಿದರೆ ಉಳಿಯುವೆವು ಇಲ್ಲದಿದ್ದರೆ ಅಳಿಯುವೆವು, ಸಗಣಿ ಗೊಬ್ಬರ ಚಿನ್ನದ ಅಬ್ಬರ, ಸಾವಯವ ಕೃಷಿ ಜೀವಕ್ಕೆ ಖುಷಿ, ರಾಸಾಯನಿಕ ಕೃಷಿ ಸಾವಿಗೆ ಶರಣಾಗತಿ, ಮಣ್ಣಿನಿಂದಲೇ ಅನ್ನ ಮಣ್ಣಿನಿಂದಲೇ ಚಿನ್ನ ಎಂಬಂಥ ಹತ್ತು ಹಲವು ಅಮೂಲ್ಯವಾದ ಹಾಗೂ ಆಕರ್ಷಕವಾದ ಬರಹಗಳನ್ನು ಗೋಡೆಗಳ ಮೇಲೆ ಬರೆಸಿ ಕೃಷಿ ಚಟುವಟಿಕೆಗೆ ಒತ್ತು ನೀಡಲು ಇಲಾಖೆ ಕ್ರಮಕೈಗೊಂಡಿದೆ.

ಕೆಲ ಗ್ರಾಮಗಳಲ್ಲಿ ಇಲಾಖೆಯಿಂದ ಪಡೆಯಬಹುದಾದ ಸೌಲಭ್ಯ, ಯೋಜನೆಗಳ ವಿವರ, ಸರಕಾರ ತೆಗೆದುಕೊಂಡ ಕ್ರಮ, ಹನಿ ನೀರಾವರಿ ಪದ್ಧತಿಯ ಉಪಯೋಗ, ಗೊಬ್ಬರದ ಬಳಕೆಯ ಪ್ರಮಾಣ, ಮಣ್ಣಿನ ಪರೀಕ್ಷೆಯಿಂದಾಗುವ ಉಪಯೋಗ ಹಾಗೂ ಹೆಚ್ಚಿನ ಇಳುವರಿ ಬಗ್ಗೆ ಜಾಗೃತಿ ಮೂಡಿಸುವ ಲಕ ಹಾಗೂ ಬೆಳೆಗಳಿಗೆ ಗೊಣ್ಣೆ ಹುಳು, ಕೆಂಪು ತಲೆ ಕಂಬಳಿಹುಳು, ಎಲೆ ಚುಕ್ಕಿ ರೋಗ ಸೇರಿದಂತೆ ಇತರೆ ಬಾಧೆಗಳಿಂದ ರೈತರು ಮುಕ್ತವಾಗಲು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ನಾಮಲಕಗಳಲ್ಲಿ ಉಲ್ಲೇಖಿಸಲಾಗಿದೆ.

ಈಗಾಗಲೇ ಕೋನಸಾಗರ, ಬಿ.ಜಿ.ಕೆರೆ, ಕೊಂಡ್ಲಹಳ್ಳಿ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಲ್ಲಿ ಕೃಷಿಯಲ್ಲಿ ರೈತರು ಪಾಲ್ಗೊಳ್ಳುವ ಬಗೆ, ತಾಂತ್ರಿಕತೆ ಅಳವಡಿಕೆ, ರೋಗ ಕೀಟಾಣುಗಳ ಹತೋಟಿ, ಪೋಷಕಾಂಶ ಪ್ರಮಾಣ, ಬಿತ್ತನೆ ನಂತರ ಹಾಗೂ ಪೂರ್ವದಲ್ಲಿ ತೆಗೆದುಕೊಳ್ಳಬಹುದಾದ ಎಚ್ಚರಿಕೆ ಹಾಗೂ ಅನುಸರಿಸಬೇಕಾದ ಕಡ್ಡಾಯ ನಿಯಮಗಳು ರಾರಾಜಿಸುತ್ತಿವೆ.

ಒಟ್ಟಿನಲ್ಲಿ ಕೃಷಿ ಇಲಾಖೆ ರೈತರಿಗೆ ಮನವರಿಕೆ ಮಾಡಿ ಬೆಳೆ ಬೆಳೆಯುವ ಹಾಗೂ ಇಳುವರಿ ಹೆಚ್ಚಿಸುವ ಎಲ್ಲಾ ರೀತಿಯ ಮಾರ್ಗದರ್ಶನಗಳನ್ನು ಗೋಡೆ ಬರಹದ ಮೂಲಕ ತಿಳಿಸಿ ಪ್ರಚಾರ ಪಡಿಸುತ್ತಿದೆ. ಈ ಎಲ್ಲಾ ಮಾಹಿತಿಯೂ ಸಲವಾಗಲು ವರುಣನು ಕರುಣೆ ತೋರಿ ಸರಿಯಾದ ಸಮಯಕ್ಕೆ ಮಳೆ ಸುರಿಸಬೇಕೆನ್ನುವುದು ಅನ್ನದಾತನ ಆಶಯ. --- ಇಲಾಖೆ ಅಕಾರಿಗಳು ನೀಡುವ ಮಾಹಿತಿಯನ್ನು ರೈತರು ಮರೆತು ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಈಗ ತಾಲೂಕಿನ ಯಾವುದೇ ಗ್ರಾಮದ ಗೋಡೆಗಳ ಮೇಲೆ ಕಣ್ಣಾಡಿಸಿದರೂ ನಾಮಲಕಗಳು ರೈತರನ್ನು ಎಚ್ಚರಿಸಿ ಉತ್ತಮ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡಲಿವೆ. -ಡಾ.ಮಹಮದ್ ಒಬೇದುಲ್ಲಾ, ಎಡಿ, ಕೃಷಿ ಇಲಾಖೆ ಮೊಳಕಾಲ್ಮುರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ