Please enable javascript.ಮಳೆಗೆ ನಾಲ್ಕು ಗ್ರಾಮಗಳಿಗೆ ವಿದ್ಯುತ್ ಮೊಟಕು - ಮಳೆಗೆ ನಾಲ್ಕು ಗ್ರಾಮಗಳಿಗೆ ವಿದ್ಯುತ್ ಮೊಟಕು - Vijay Karnataka

ಮಳೆಗೆ ನಾಲ್ಕು ಗ್ರಾಮಗಳಿಗೆ ವಿದ್ಯುತ್ ಮೊಟಕು

ವಿಕ ಸುದ್ದಿಲೋಕ 5 Jun 2014, 2:00 am
Subscribe

ಸೋಮವಾರ ರಾತ್ರಿ ಸುರಿದ ಮಳೆಗೆ ತಾಲೂಕಿನ ನಾಲ್ಕು ಗ್ರಾಮಗಳು ಮಂಗಳವಾರ ವಿದ್ಯುತ್ ಸೌಕರ್ಯದಿಂದ ವಂಚಿತವಾಗಿ ಕತ್ತಲಿನಲ್ಲಿ ಕಾಲ ಕಳೆಯುವಂತಾಯಿತು.

ಮಳೆಗೆ ನಾಲ್ಕು ಗ್ರಾಮಗಳಿಗೆ ವಿದ್ಯುತ್ ಮೊಟಕು
ಮೊಳಕಾಲ್ಮುರು: ಸೋಮವಾರ ರಾತ್ರಿ ಸುರಿದ ಮಳೆಗೆ ತಾಲೂಕಿನ ನಾಲ್ಕು ಗ್ರಾಮಗಳು ಮಂಗಳವಾರ ವಿದ್ಯುತ್ ಸೌಕರ್ಯದಿಂದ ವಂಚಿತವಾಗಿ ಕತ್ತಲಿನಲ್ಲಿ ಕಾಲ ಕಳೆಯುವಂತಾಯಿತು.

ಗಾಳಿ ಮಿಶ್ರಿತ ಮಳೆಯ ಆರ್ಭಟ ಹಾಗೂ ಗುಡುಗು ಸಿಡಿಲಿಗೆ 50 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ತಾಲೂಕಿನ ರಾಜ್ಯ ಹೆದ್ದಾರಿಯಲ್ಲಿ ರಾಂಪುರದಿಂದ ಬಳ್ಳಾರಿಗೆ ತೆರಳುವ ರಸ್ತೆಯ ಬದಿಯಲ್ಲಿ 18 ಕಂಬಗಳು ಸಾಲಾಗಿ ನೆಕ್ಕುರುಳಿದ್ದು, ಎರಡು ಗಂಟೆಗೂ ಹೆಚ್ಚುಕಾಲ ಟ್ರಾಫಿಕ್ ಜಾಮ್‌ನಿಂದ ಹೆದ್ದಾರಿಯಲ್ಲಿ ಪಯಣಿಸುತ್ತಿದ್ದ ಪ್ರಯಾಣಿಕರು ಪರದಾಡುವಂತಾಯಿತು.

ತಾಲೂಕಿನ ಶಿರೇಕೊಳ, ಮುರುಡಿ, ತಮ್ಮೇನಹಳ್ಳಿ, ಕಣ್‌ಕುಪ್ಪೆ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಸಂಪೂರ್ಣ ವಿದ್ಯುತ್ ಸರಬರಾಜು ಸ್ಥಗಿತವಾಗಿದೆ. ಈ ಹಳ್ಳಿಗಳ ಸಾರ್ವಜನಿಕರು ಕಗ್ಗತ್ತಲಿನಲ್ಲಿ ಕಾಲ ಕಳೆದರು.

ನಾಗಸಮುದ್ರ ಸರಕಾರಿ ಶಾಲಾ ಆವರಣದಲ್ಲಿ ನೀರು ನಿಂತು ವಿದ್ಯಾರ್ಥಿಗಳೂ ಸೇರಿದಂತೆ ಶಿಕ್ಷಕರು ಪರದಾಡುವಂತಾಯಿತು. ಇದೇ ಗ್ರಾಮದ ಅಂಗನವಾಡಿ ಮೇಲ್ಚಾವಣಿ ಸೋರಿ ಕೊಠಡಿಯಲ್ಲಿ ನೀರು ತುಂಬಿದೆ.

ಗ್ರಾಮದ ಶಾಲಾ ಆವರಣ ಸೇರಿದಂತೆ ಅಂಗನವಾಡಿ ಮೇಲ್ಚಾವಣಿಗಳನ್ನು ಸರಿಪಡಿಸುವಂತೆ ನೀಡಿದ ಮನವಿಗಳು ಕಚೇರಿಗಳ ಮೂಲೆ ಸೇರಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ