ಆ್ಯಪ್ನಗರ

ಜಡ್ಡುಗಟ್ಟಿದ ದೇಹಕ್ಕೆ ಚೈತನ್ಯ ಮೂಡಿಸಿದೆ

ದಶಕಗಳ ಕಾಲ ಪಠ್ಯದ ಜತೆ ವಿದ್ಯಾರ್ಥಿಗಳಿಗೆ ಬದುಕಿನ ಮೌಲ್ಯ ಬೋಧಿಸುವ ಅನನ್ಯ ಅವಕಾಶ ಲಭಿಸಿದ್ದು ಆನಂದವುಂಟು ಮಾಡಿದೆ ಎಂದು ನಿವೃತ್ತ ಶಿಕ್ಷ ಕ ಮೋಕ್ಷ ನಾಥಯ್ಯ ತಿಳಿಸಿದರು.

ವಿಕ ಸುದ್ದಿಲೋಕ 23 May 2017, 8:34 am
ಹಿರಿಯೂರು : ದಶಕಗಳ ಕಾಲ ಪಠ್ಯದ ಜತೆ ವಿದ್ಯಾರ್ಥಿಗಳಿಗೆ ಬದುಕಿನ ಮೌಲ್ಯ ಬೋಧಿಸುವ ಅನನ್ಯ ಅವಕಾಶ ಲಭಿಸಿದ್ದು ಆನಂದವುಂಟು ಮಾಡಿದೆ ಎಂದು ನಿವೃತ್ತ ಶಿಕ್ಷ ಕ ಮೋಕ್ಷ ನಾಥಯ್ಯ ತಿಳಿಸಿದರು.
Vijaya Karnataka Web 31
ಜಡ್ಡುಗಟ್ಟಿದ ದೇಹಕ್ಕೆ ಚೈತನ್ಯ ಮೂಡಿಸಿದೆ


ನಗರದ ಬಾಲಕರ ಸರಕಾರಿ ಪಪೂ ಕಾಲೇಜಿನ ಪ್ರೌಢಶಾಲೆ ವಿಭಾಗದ 1986ನೇ ಸಾಲಿನ(ಆಂಗ್ಲಮಾಧ್ಯಮ) ವಿದ್ಯಾರ್ಥಿಗಳು ನಗರದ ಹೋಟೆಲ್‌ವೊಂದರಲ್ಲಿ ಭಾನುವಾರ ಏರ್ಪಡಿಸಿದ್ದ 'ಮಿತ್ರಕೂಟ-86' ರ ಹಳೆ ವಿದ್ಯಾರ್ಥಿಗಳು ಹಾಗೂ ಅಂದಿನ ಶಿಕ್ಷ ಕರ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷ ಕ ನಿರಂತರ ವಿದ್ಯಾರ್ಥಿ ಎಂಬ ಮಾತಿದೆ. ಅದೇ ರೀತಿ ಎಲ್ಲರೂ ನಿತ್ಯ ಕಲಿಯುವ ಸಂಗತಿಗಳು ಹಲವು ಇರುತ್ತವೆ. ಹಳೇ ವಿದ್ಯಾರ್ಥಿಗಳು ಏರ್ಪಡಿಸಿರುವ ಮಿತ್ರಕೂಟ ಕಾರ್ಯಕ್ರಮ ನಿವೃತ್ತಿ ಜೀವನದಿಂದ ಜಡ್ಡುಗಟ್ಟಿದ್ದ ದೇಹ ಮತ್ತು ಮನಸ್ಸಿಗೆ ಹೊಸ ಚೈತನ್ಯ ಮೂಡಿದ ಭಾವವುಂಟಾಗಿದೆ. ಇದೊಂದು ವಿಶಿಷ್ಟ ಅನುಭವ ನೀಡುವ ಸಭೆ. ವ್ಯಾಸಂಗದ ನಂತರ ಜೀವನ ನಿರ್ವಹಣೆಗೆ ಚದುರಿಹೋದ ಮಿತ್ರರು ಒಂದೇ ವೇದಿಕೆಯಲ್ಲಿ ಸೇರುವ ಗಳಿಗೆ ಆನಂದ, ಆಶ್ಚರ್ಯವುಂಟು ಮಾಡದೇ ಇರದು ಎಂದರು.

ನಿವೃತ್ತ ಶಿಕ್ಷ ಕ ಕೆ.ಹೊನ್ನೂರ್‌ಸಾಬ್‌ ಮಾತನಾಡಿ, ವ್ಯಾಸಂಗದ ನಂತರ ಉತ್ತಮ ಸ್ಥಾನಗಳಲ್ಲಿ ಸುಸ್ಥಿತಿಯಲ್ಲಿರುವ ವಿದ್ಯಾರ್ಥಿ ಮಿತ್ರರು ಮುಂದಿನ ದಿನಗಳಲ್ಲಿ ಸಮಾಜಮುಖಿ ಚಿಂತನೆ ಹಾಗೂ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಆರ್ಥಿಕ ಹಾಗೂ ಮಾನಸಿಕವಾಗಿ ದುರ್ಬಲ ಸ್ಥಿತಿಯಲ್ಲಿರುವ ಸಹಪಾಠಿಗಳು, ಬಡವರನ್ನು ಕೈಹಿಡಿಯುವ ಪುಣ್ಯದ ಕೆಲಸ ಮಾಡಿ. ಆಗ ಇಂತಹ ಸಭೆ, ಸ್ನೇಹಕೂಟಗಳಿಗೆ ಹೆಚ್ಚಿನ ಅರ್ಥ ಸಿಗುವುದು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಹಲವು ವರ್ಷಗಳ ನಂತರ ಭೇಟಿಯಾದ ಮಿತ್ರರು ಮಾತು, ಮಾತು, ಕೇಕೆ, ಕಾಲೆಳೆದಾಟದಲ್ಲಿ ಸಂತಸದಿಂದ ಕೆಲವು ಕ್ಷ ಣಗಳನ್ನು ಕಳೆದರು. ಬದುಕಿನ ಹೋರಾಟದ ಸವಾಲುಗಳನ್ನು ಚರ್ಚಿಸಿದರು. ಸಿಹಿ ತಿಂಡಿ, ಲಘುಉಪಹಾರ ಸೇವಿಸಿದರು.

ಸಭೆಯಲ್ಲಿ ನಿವೃತ್ತ ಶಿಕ್ಷ ಕರಾದ ಎಸ್‌.ಕೃಷ್ಣಮೂರ್ತಿ, ಎ.ವಿ.ಬಾಲಚಂದ್ರನ್‌, ಬಿ.ವಿ.ಸೂರ್ಯಪ್ರಕಾಶ್‌ ತಮ್ಮ ವೃತ್ತಿಜೀವನದ ಮಧುರ ನೆನಪನ್ನು ನಿವೃತ್ತಿ ನಂತರದ ಕಹಿಯೊಂದಿಗೆ ಮೆಲುಕು ಹಾಕಿದರು.

ಸನ್ಮಾನ: ನಿವೃತ್ತಿ ಶಿಕ್ಷ ಕರನ್ನು ಮಿತ್ರಕೂಟದ ಗೆಳೆಯರು ಸನ್ಮಾನಿಸಿದರು.

ಸಭೆಯಲ್ಲಿ ಎಸ್‌.ಆರ್‌.ಮುರೇಶ್‌, ಕೇಶವಮೂರ್ತಿ, ಅನಿಲ್‌ ಕುಮಾರ್‌, ಮಹಮದ್‌ ಸಲೀಂ, ಎಚ್‌.ಆರ್‌.ಶ್ರೀನಾಥ್‌, ಆರ್‌.ಉಮೇಶ್‌, ಡಾ.ಗೋಪಾಲ್‌, ಡಾ.ಮಂಜುನಾಥ್‌, ಡಾ.ಸಂಪತ್‌, ಡಾ.ದಿವಾಕರ್‌, ಸಯ್ಯದ್‌ಮುನೇರ್‌ಮುಲ್ಲಾ, ಸಿ.ಎಂ.ತಿಪ್ಪೇಸ್ವಾಮಿ, ದಿವಾಕರ, ತಿಮ್ಮರಾಜ್‌, ಸಾಜಿದ್‌, ಉದಯ್‌ ಕುಮಾರ್‌, ರಮೇಶ್‌, ಎಸ್‌.ಆರ್‌.ಮಠದ್‌, ಪ್ರಶಾಂತ್‌, ಹೊಯ್ಸಳ, ಶಾಬುದ್ದಿನ್‌, ಎಂ.ಎನ್‌.ಗುರುಪ್ರಸಾದ್‌, ಎಂ.ಜಿ.ರಘು, ಖಲಂದರ್‌, ನಲ್ಲತಂಬಿ, ಮೋಹನಾಚಾರಿ, ನಹೀಮ್‌, ಪ್ರಸನ್ನ, ನರೇಂದ್ರಬಾಬು, ರಾಜನ್‌, ಕೃಷ್ಣಕುಮಾರ್‌, ಸಣ್ಣಪ್ಪ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ