ಆ್ಯಪ್ನಗರ

 ಸಾಹಿತ್ಯ ಭವನಕ್ಕೆ ಶೀಘ್ರವೇ ಶಂಕುಸ್ಥಾಪನೆ

 ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 13ರ ಬಸವೇಶ್ವರ ನಗರದಲ್ಲಿ 100*150 ಅಡಿ ನಿವೇಶನದಲ್ಲಿ ಕಸಾಪದಿಂದ ಆರು ಕೋಟಿ ವೆಚ್ಚದಲ್ಲಿ ಭವ್ಯ ಸಾಹಿತ್ಯ ಭವನ ನಿರ್ಮಾಣಕ್ಕೆ ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ತಿಳಿಸಿದರು.

ವಿಕ ಸುದ್ದಿಲೋಕ 27 Sep 2016, 9:24 pm
ಚಿತ್ರದುರ್ಗ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 13ರ ಬಸವೇಶ್ವರ ನಗರದಲ್ಲಿ 100*150 ಅಡಿ ನಿವೇಶನದಲ್ಲಿ ಕಸಾಪದಿಂದ ಆರು ಕೋಟಿ ವೆಚ್ಚದಲ್ಲಿ ಭವ್ಯ ಸಾಹಿತ್ಯ ಭವನ ನಿರ್ಮಾಣಕ್ಕೆ ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ತಿಳಿಸಿದರು.
Vijaya Karnataka Web news/chitradurga
 ಸಾಹಿತ್ಯ ಭವನಕ್ಕೆ ಶೀಘ್ರವೇ ಶಂಕುಸ್ಥಾಪನೆ


ನಗರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಳಿಕ ಉಳಿದ ಹಣದಲ್ಲಿ ನಿವೇಶನ ಖರೀದಿಸಲಾಗಿತ್ತು. ಹದಿಮೂರು ಲಕ್ಷ ಹಣ ಕೇಂದ್ರ ಪರಿಷತ್ತಿನಲ್ಲಿ ಠೇವಣಿ ಇದ್ದು ಕೂಡಲೇ ಸಾಹಿತ್ಯ ಭವನದ ಅಡಿಗಲ್ಲು ಕಾರ್ಯ ನಡೆಯಲಿದೆ ಎಂದರು.

ಕೇಂದ್ರ ಪರಿಷತ್ತಿನ ಸೂಚನೆಯಂತೆ ಜಿಲ್ಲೆಯಲ್ಲಿ ಒಟ್ಟು ಐದು ಮಂದಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ಅವರ ಹುಟ್ಟೂರಿನಲ್ಲಿ ಸಾಹಿತ್ಯ ಭವನಗಳನ್ನು ನಿರ್ಮಾಣ ಮಾಡಲು ತೀರ್ಮಾನವಾಗಿದೆ. ಅದರಂತೆ ಚಳ್ಳಕೆರೆ ತಾಲೂಕಿನ ತಳಕಿನಲ್ಲಿ ತಳುಕಿನ ವೆಂಕಣ್ಣಯ್ಯ, ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ ನಾಡೋಜ ಸಿರಿಯಜ್ಜಿ, ಚಿತ್ರದುರ್ಗ ತಾಲೂಕಿನ ಹುಲ್ಲೂರು ಶ್ರೀನಿವಾಸ ಜೋಯಿಸರ ಹೆಸರಿನಲ್ಲಿ ಸಾಹಿತ್ಯ ಭವನಗಳನ್ನು ನಿರ್ಮಾಣ ಪ್ರಯತ್ನಗಳನ್ನು ಆರಂಭಿಸಲಾಗಿದೆ. ಹೊಸದುರ್ಗದಲ್ಲಿ ಈಗಾಗಲೇ ಭವನ ನಿರ್ಮಾಣಕ್ಕೆ ಅಂದಾಜು ವೆಚ್ಚ ಪಟ್ಟಿ ಮತ್ತು ಯೋಜನೆ ತಯಾರಿಸಿ ಶಾಸಕರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆæ ಅನುದಾನ ಸಹಾಯಕ್ಕೆ ಸಲ್ಲಿಸಲಾಗಿದೆ ಎಂದರು.

ಕಸಾಪ ಗೌರವ ಕಾರ್ಯದರ್ಶಿ ಮಾಲತೇಶ್‌ ಅರಸ್‌, ಉಪಾಧ್ಯಕ್ಷ ಎಂ.ಕೆ.ಶಂಕರಪ್ಪ, ಜಿಲ್ಲಾ ಗೌರವ ಕಾರ್ಯದರ್ಶಿ ಆರ್‌.ನಾಗರಾಜ್‌, ಕೋಶಾಧ್ಯಕ್ಷ ಗೋವಿಂದಪ್ಪ, ಹಿರಿಯೂರು ಅಧ್ಯಕ್ಷ ಶಂಕರ್‌, ಚಳ್ಳಕೆರೆ ಶಿವಸ್ವಾಮಿ, ಚಿತ್ರದುರ್ಗ ಅಧ್ಯಕ್ಷ ರಾಮಲಿಂಗಶೆಟ್ಟಿ, ಹೊಸದುರ್ಗ ಅಧ್ಯಕ್ಷ ಧನಂಜಯ ಮೆಂಗಸಂದ್ರ, ನಾಗರಾಜ್‌ ಬೇದ್ರೆ, ಶರೀಫಾಬಿ, ಎ.ಪಿ.ರಾಜ್‌, ಯಾದವರೆಡ್ಡಿ, ರವಿಶಂಕರ್‌, ಡಾ.ಆರ್‌.ಪ್ರಭಾಕರ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ