ಆ್ಯಪ್ನಗರ

ಯಾರೊಬ್ಬರೂ ಗುಳೆ ಹೋಗದಂತೆ ಕಾಪಾಡುವೆ

ತಾಲೂಕಿನ ಕಸಬಾ ವ್ಯಾಪ್ತಿಯ ನಾನಾ ಗ್ರಾಮಗಳಿಗೆ ಭಾನುವಾರ ಶಾಸಕ ಬಿ.ಶ್ರೀರಾಮುಲು ಭೇಟಿ ನೀಡಿ ಜನ ಸಂಪರ್ಕ ಸಭೆ ನಡೆಸಿದರು.

Vijaya Karnataka 20 Aug 2018, 5:00 am
ಮೊಳಕಾಲ್ಮುರು : ತಾಲೂಕಿನ ಕಸಬಾ ವ್ಯಾಪ್ತಿಯ ನಾನಾ ಗ್ರಾಮಗಳಿಗೆ ಭಾನುವಾರ ಶಾಸಕ ಬಿ.ಶ್ರೀರಾಮುಲು ಭೇಟಿ ನೀಡಿ ಜನ ಸಂಪರ್ಕ ಸಭೆ ನಡೆಸಿದರು.
Vijaya Karnataka Web and no one can protect it from flickering
ಯಾರೊಬ್ಬರೂ ಗುಳೆ ಹೋಗದಂತೆ ಕಾಪಾಡುವೆ


ಕೊಂಡ್ಲಹಳ್ಳಿ ತಿಮ್ಮಪ್ಪ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಶಾಸಕ ಬಿ.ಶ್ರೀರಾಮುಲು ಮಾತನಾಡಿ, ಗ್ರಾಮದಲ್ಲಿನ ಮೂಲ ಸಮಸ್ಯೆ ಬಗೆಹರಿಸುತ್ತೇನೆ. ಕುಡಿವ ನೀರಿನ ಹಾಹಾಕಾರ ತಪ್ಪಿಸಲು ಮುಂದಿನ ದಿನದಲ್ಲಿ ತಜ್ಞರನ್ನು ನೀರಿನ ಮೂಲ ಕಂಡುಹಿಡಿದು ಕೊಳವೆಬಾವಿ ಕೊರೆಸಲಾಗುವುದು. ತುಂಗಭದ್ರ ಹಿನ್ನೀರು ಯೋಜನೆಯ ಟೆಂಡರ್‌ ಕಾಮಗಾರಿಗೆ ಚುರುಕಾಗಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಪ್ರತಿ ಗ್ರಾಪಂಗೂ 1.50 ಕೋಟಿ ರೂ. ಅನುದಾನ ನೀಡಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಈ ಯೋಜನೆಯಡಿ ಪ್ರತಿ ಮನೆಗೂ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾರೊಬ್ಬರೂ ಕೆಲಸ ಹುಡುಕಿಕೊಂಡು ಗುಳೇ ಹೋಗದಂತೆ ಕಾಪಾಡಲಾಗುವುದು ಎಂದರು.

ಶಾಸಕ ಪ್ರವಾಸ ನಡೆಸಿದ ಬಹುತೇಕ ಗ್ರಾಮಗಳಲ್ಲಿ ಖಾತ್ರಿ ಯೋಜನೆಯಲ್ಲಿ ಗ್ರಾಪಂ ಸದಸ್ಯರು, ಗುತ್ತಿಗೆದಾರರು ಕೆಲಸ ಮಾಡಿಸುತ್ತಿದ್ದಾರೆ. ಕೆಲಸವನ್ನು ಜೆಸಿಬಿ ಯಂತ್ರಗಳಿಂದ ಮಾಡಿಸಲಾಗುತ್ತಿದೆ. ಕುಡಿವ ನೀರಿನ ಸಮಸ್ಯೆ, ರಸ್ತೆ ಅಭಿವೃದ್ಧಿ ನಡೆಸುವಂತೆ ಮನವಿ ಮಾಡಿದ್ದು ಕಂಡು ಬಂತು.

ಕೊಂಡ್ಲಹಳ್ಳಿ ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಈರಕ್ಕ, ಬಿಜೆಪಿ ಮಂಡಲಾಧ್ಯಕ್ಷ ಟಿ.ರೇವಣ್ಣ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಚ್‌.ಟಿ.ನಾಗರೆಡ್ಡಿ, ಕ್ಷೇತ್ರ ಕಾರ್ಯದರ್ಶಿ ಶ್ರೀರಾಮರೆಡ್ಡಿ, ರೈತ ಮೋಚಾಧ್ಯಕ್ಷ ವಸಂತಕುಮಾರ್‌, ಒಬಿಸಿ ಮಾರ್ಚಾಧ್ಯಕ್ಷ ಹೊನ್ನೂರು ಗೋವಿಂದಪ್ಪ, ವಕೀಲ ಎಚ್‌.ಸಿ.ಪ್ರದೀಪ್‌ಕುಮಾರ್‌, ತಾಪಂ ಇಒ ಶ್ರೀಧರ್‌ ಇ.ಬಾರೇಕರ್‌, ಬೆಸ್ಕಾಂ ಇಎಎ ಚಿಕ್ಕಣ್ಣ, ಗ್ರಾಪಂ ಕಾರ್ಯದರ್ಶಿ ಮಾರಣ್ಣ, ಜಿ.ಬಿ.ನಾಗರಾಜ್‌, ಬಳಿಗಾರ ರಾಮಚಂದ್ರಪ್ಪ, ಮಂಜುನಾಥ್‌, ಸಂಜೀವ, ಮಹೇಶ್‌ ಇದ್ದರು.

ಪ್ರಾರಂಭದಲ್ಲಿ ಶಾಸಕರು, ಮರ್ಲಹಳ್ಳಿ, ನೇರ್ಲಹಳ್ಳಿ, ನೇತ್ರನಹಳ್ಳಿ, ಕೋನಸಾಗರ, ಊಡೇವು, ಕೊಂಡ್ಲಹಳ್ಳಿ, ಮಾರಮ್ಮನಹಳ್ಳಿ, ಮೊಗಲಹಳ್ಳಿ, ಬಿ.ಜಿ.ಕೆರೆ, ಮುತ್ತಿಗಾರಹಳ್ಳಿ, ಮ್ಯಾಸರಹಟ್ಟಿ, ಸೂರಮ್ಮನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ್ದರು.

------------

ಬಾಕ್ಸ್‌

ಸಂಕಷ್ಟಕ್ಕೆ ಸಿಲುಕಿದ ಜನರಿಗೆ ನೆರವಾಗಿ


ಮುಖ್ಯಮಂತ್ರಿ ಕುಮಾರಸ್ವಾಮಿ ಈ ಭಾಗದ ಜನರು ಮತ ನೀಡಿಲ್ಲ ಕೇವಲ ಬಿಜೆಪಿ ಪಕ್ಷ ಕ್ಕೆ ನೀಡಿದ್ದಾರೆ ಎಂದು ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಮೊದಲು ತಾವು ರಾಜ್ಯದ ಮುಖ್ಯಮಂತ್ರಿ ಎಂದು ಅರಿತು ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಮೊದಲು ನೆರವಾಗಬೇಕು ಎಂದು ಶ್ರೀರಾಮುಲು ಹೇಳಿದರು.

ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎನ್ನುವ ಸುದ್ದಿಯು ಕೇವಲ ವದಂತಿ. ಇಂಥ ವಿಷಯ ಹಬ್ಬಿಸುವುದು ತರವಲ್ಲ. ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಬಾ ಕ್ಷೇತ್ರಕ್ಕೆ ಆಯ್ಕೆಯಾಗಿದ್ದೇನೆ. ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ. ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯುವುದು ನನ್ನ ಗುರಿಯಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ