Please enable javascript.ಹೆಚ್ಚು ಮನೆ ನೀಡಲು ಒತ್ತಾಯ - ಸರಕಾರ - Vijay Karnataka

ಹೆಚ್ಚು ಮನೆ ನೀಡಲು ಒತ್ತಾಯ

ವಿಕ ಸುದ್ದಿಲೋಕ 22 Oct 2013, 9:53 pm
Subscribe

ಸರಕಾರ ಕಡುಬಡವರಿಗೆ ನೀಡುವ ವಸತಿ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಶಾಸಕ ಎಸ್. ತಿಪ್ಪೇಸ್ವಾಮಿ ಹೇಳಿದ್ದಾರೆ.

news/chitradurga
ಹೆಚ್ಚು ಮನೆ ನೀಡಲು ಒತ್ತಾಯ
ನಾಯಕನಹಟ್ಟಿ : ಸರಕಾರ ಕಡುಬಡವರಿಗೆ ನೀಡುವ ವಸತಿ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಶಾಸಕ ಎಸ್. ತಿಪ್ಪೇಸ್ವಾಮಿ ಹೇಳಿದ್ದಾರೆ.

ಹೋಬಳಿಯ ತಳಕು ಗ್ರಾಮದಲ್ಲಿ ಮಂಗಳವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ಸಮುದಾಯದವರು ಇದ್ದಾರೆ. ಇವರಿಗೆ ಗ್ರಾಪಂನಿಂದ 10-20 ಮನೆ ನೀಡುವುದು ಬಿಟ್ಟು ನೂರು ಮನೆಗಳನ್ನು ನೀಡಬೇಕು. ಕೆಲವು ಗ್ರಾಪಂಗಳಲ್ಲಿ ಅಧ್ಯಕ್ಷರು, ಪಿಡಿಒಗಳು ಗ್ರಾಮ ಸಭೆ ನಿರ್ಣಯಗಳನ್ನು ಗಾಳಿಗೆ ತೂರಿ ತಮ್ಮದೇ ಪಟ್ಟಿ ತಯಾರಿಸುತ್ತಿರು ವುದು ಗಮನಕ್ಕೆ ಬಂದಿದೆ. ಈ ರೀತಿಯ ವರ್ತನೆ ಬಿಟ್ಟು ಸರಿಯಾಗಿ ಲಾನುಭವಿ ಗಳನ್ನು ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ಎಲ್ಲ ಕ್ರಮಕ್ಕೆ ನೀವುಗಳೇ ಹೊಣೆಯಾಗುತ್ತಿರ ಎಂದು ಎಚ್ಚರಿಸಿದರು.

ಎಸ್ಸಿ,ಎಸ್ಟಿ ಹಾಗೂ ಅಲ್ಪ ಸಂಖ್ಯಾತರ ಹಾಸ್ಟೆಲ್ ಸ್ಥಾಪನೆ ಕುರಿತ ಮನವಿಗೆ, ಸಮಾಜಕಲ್ಯಾಣ ಸಚಿವರ ಜತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಗ್ರಾಮದ ವಾಣಿಜ್ಯ ಮಳಿಗೆಗಳ ಹಂಚಿಕೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪಿಡಿಒಗೆ ಸೂಚಿಸಿದರು.

ಗಿರಿಯಮ್ಮನ ಹಳ್ಳಿ,ಚಿಕ್ಕಮ್ಮನ ಹಳ್ಳಿ, ಬೇಡರೆಡ್ಡಿ ಹಳ್ಳಿ, ರುದ್ರಮ್ಮನ ಹಳ್ಳಿ, ಪಾಲನಾಯಕಹಟ್ಟಿ ಕೋಟೆ ಸೇರಿದಂತೆ 16 ಗ್ರಾಮಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ತಹಸೀಲ್ದಾರ್ ವಿಜಯ ರಾಜು, ಎಇಇ ರಾಮಚಂದ್ರಪ್ಪ, ಆಹಾರ ಇಲಾಖೆ ಶಿರಸ್ತೇದಾರ್ ನಾಗರಾಜ್, ಮುಖಂಡರಾದ ಎಚ್.ವಿ. ಹನುಮಂತ ರೆಡ್ಡಿ, ಎಂ.ವೈ.ಟಿ. ಸ್ವಾಮಿ, ಗ್ರಾಪಂ ಸದಸ್ಯ ನಾಗರಾಜ್, ರೈತ ಸಂಘದ ಮಲ್ಲೇಶ್, ಸ್ವಾಮಿ ಇತರರಿದ್ದರು.

ತಳಕು ಗ್ರಾಮದಲ್ಲಿ ಮಂಗಳವಾಅರ ಶಾಸಕ ಎಸ್.ತಿಪ್ಪೇಸ್ವಾಮಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ