ಆ್ಯಪ್ನಗರ

ಭಗವದ್ಗೀತೆ ಅಧ್ಯಯನದಿಂದ ಜೀವನ ದರ್ಶನ ಭಾಗ್ಯ

ಭಗವದ್ಗೀತೆ ಅಧ್ಯಯನದಿಂದ ಜೀವನದಲ್ಲಿನೆಮ್ಮದಿ ಹಾಗೂ ಶಾಂತಿ ಲಭಿಸುತ್ತದೆ. ಜತೆಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲಿಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.

Vijaya Karnataka 13 Nov 2019, 4:35 pm
ಹಿರಿಯೂರು: ಭಗವದ್ಗೀತೆ ಅಧ್ಯಯನದಿಂದ ಜೀವನದಲ್ಲಿನೆಮ್ಮದಿ ಹಾಗೂ ಶಾಂತಿ ಲಭಿಸುತ್ತದೆ. ಜತೆಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲಿಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
Vijaya Karnataka Web biography of bhagavad gita from the study
ಭಗವದ್ಗೀತೆ ಅಧ್ಯಯನದಿಂದ ಜೀವನ ದರ್ಶನ ಭಾಗ್ಯ


ನಗರದ ನೆಹರು ಮೈದಾನದಲ್ಲಿರುವ ಎ.ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿಸೋಮವಾರ ಭಗವದ್ಗೀತಾ ಅಭಿಯಾನ ತಾಲೂಕು ಸಮಿತಿ, ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಹಾಗೂ ರೋಟರಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿಹಮ್ಮಿಕೊಂಡಿದ್ದ ಭಗವದ್ಗೀತಾ ಅಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

'ಮನುಷ್ಯನಿಗೆ ನಾನು ಎಂಬ ಅಹಂಕಾರವೇ ಎಲ್ಲಸಮಸ್ಯೆಗಳಿಗೂ ಮೂಲ ಕಾರಣ. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಮೂಲಕ ನಮ್ಮ ಆಯಸ್ಸು ಕಡಿಮೆಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಅಹಂಕಾರ ತ್ಯಜಿಸಿ ನಾವು, ನಮ್ಮದು ಎಂಬ ಭಾವನೆ ಮೂಡಬೇಕು ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿಹೇಳಿದ್ದಾನೆ. ಶಾಲಾ, ಕಾಲೇಜಿಗಳಲ್ಲಿಭಗವದ್ಗೀತೆಯನ್ನು ಬೋಧಿಸಬೇಕು. ಇದರಿಂದ ಜೀವನ ದರ್ಶನವಾಗುತ್ತದೆ. ಮನಸಿನ ಕೌರ್ಯದ ಕತ್ತಲು ಕಳೆದು ಜ್ಞಾನದ ಬೆಳಕು ಮೂಡಲು ಸಹಕಾರಿಯಾಗುತ್ತದೆ' ಎಂದರು.

ಪ್ರಸ್ತುತ ಸಮಾಜದಲ್ಲಿಮನುಷ್ಯನಲ್ಲಿಕಾಮ, ಕ್ರೋಧ, ಲೋಭ ಹೆಚ್ಚಾಗಿ ಅನೇಕ ಕೃತ್ಯಗಳಲ್ಲಿತೊಡುಗುತ್ತಿರುವುದರಿಂದ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಇಂದು ಮಸೀದಿಗಳಲ್ಲಿಕುರಾನ್‌, ಗುರುದ್ವಾರಗಳಲ್ಲಿಗುರುನಾನಕ್‌ರ ಗ್ರಂಥಸಾಹಿ, ಚರ್ಚ್ಗಳಲ್ಲಿಬೈಬಲ್‌ ಬೋಧಿಸುವಂತೆ ಎಲ್ಲಹಿಂದೂ ದೇವಾಲಯಗಳಲ್ಲಿಭಗವದ್ಗೀತೆಯನ್ನು ಬೋಧಿಸಲು ಪ್ರಾರಂಭಿಸಬೇಕು' ಎಂದು ತಿಳಿಸಿದರು.

ಅಭಿಯಾನದ ತಾಲೂಕು ಸಮಿತಿ ಅಧ್ಯಕ್ಷ ನಾಗರಾಜ್‌ ಗುಪ್ತ, ಕಾರ್ಯಾಧ್ಯಕ್ಷ ಎಚ್‌.ಎಸ್‌.ಸುಂದರ್‌ರಾಜ್‌, ಪ್ರಧಾನ ಸಂಚಾಲಕ ಪರಮೇಶ್ವರ್‌ ಭಟ್‌, ಉಪಾಧ್ಯಕ್ಷ ಆನಂದಶೆಟ್ಟಿ, ಜೋಗಪ್ಪ, ರೋಟರಿ ಸಂಸ್ಥೆ ಅಧ್ಯಕ್ಷ ಎಚ್‌.ಎಸ್‌. ಪ್ರಶಾಂತ್‌, ನಾಗರಾಜನ್‌, ಮಹಾಬಲ್ಲೇಶ್ವರ ಶೆಟ್ಟಿ, ಜಗದೀಶ್‌ ಧರೇದಾರ್‌, ದೇವರಾಜ್‌ಮೂರ್ತಿ, ಟಿ.ಮಲ್ಲೇಶಪ್ಪ, ಕುಸುಮ ದೇಸಾಯಿ, ಮೀನಾ ಬಾಲರಾಜ್‌, ಗೀತಾಭಟ್‌, ಶ್ರೀಕರಾಂಭ, ಗೀತಾರಾಧಕೃಷ್ಣ, ಸುಲೋಚನಮ್ಮ, ಸರಸ್ವತಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ