ಆ್ಯಪ್ನಗರ

ಸಂಭ್ರಮದ ಜುಂಜಪ್ಪಸ್ವಾಮಿ ಜಾತ್ರೆ

ತಾಲೂಕಿನ ಬೆಂಕಿಕಾಟನಹಟ್ಟಿ ಗ್ರಾಮದಲ್ಲಿ ಶ್ರೀಜುಂಜಪ್ಪಸ್ವಾಮಿ ಜಾತ್ರೆ ಸಂಭ್ರಮ ಸಡಗರದಿಂದ ಜರುಗಿತು.

Vijaya Karnataka 13 Dec 2018, 5:00 am
ಹಿರಿಯೂರು : ತಾಲೂಕಿನ ಬೆಂಕಿಕಾಟನಹಟ್ಟಿ ಗ್ರಾಮದಲ್ಲಿ ಶ್ರೀಜುಂಜಪ್ಪಸ್ವಾಮಿ ಜಾತ್ರೆ ಸಂಭ್ರಮ ಸಡಗರದಿಂದ ಜರುಗಿತು.
Vijaya Karnataka Web celebration junappaswamy fair
ಸಂಭ್ರಮದ ಜುಂಜಪ್ಪಸ್ವಾಮಿ ಜಾತ್ರೆ


ಯಾದವ(ಗೊಲ್ಲ) ಸಮುದಾಯದ ಆರಾದ್ಯದೈವ ಜುಂಜಪ್ಪಸ್ವಾಮಿ ದೇವಾಲಯದಲ್ಲಿ ಇತ್ತೀಚೆಗೆ ನಡೆದ ದೀಪೋತ್ಸವ ಮತ್ತು ಪಂಜಿನಸೇವೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು.

ಬಯಲು ಜಗಲಿಯ ಮೇಲೆ ಜುಂಜಪ್ಪಸ್ವಾಮಿಯ ಕಲ್ಲಿನ ಬೆನವ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಮಡಿಮೈಲಿಗೆ ಕಾಪಾಡುವುದು ಹಾಗೂ ಅತಿಕ್ರಮಣ ತಡೆಯುವ ಸಲುವಾಗಿ ಸುತ್ತಲು ಮುಳ್ಳಿನ ಬೇಲಿ ಹಾಕಲಾಗಿದೆ. ಜುಂಜಪ್ಪಸ್ವಾಮಿ ಏಳು ದಿಕ್ಕುಗಳನ್ನು ಕಾಯುವ ದೇವರು. ಬೂದಿ ಮುಚ್ಚಿದ ಕೆಂಡ, ಭೂ ಲೋಕಕ್ಕೆ ಉದ್ಧಾಂಡ ದೊಡ್ಡವನು, ಬೇಸಿಗೆಯಲ್ಲಿ ಮಳೆ ಸುರಿಸುವ ಶಕ್ತಿ ಇರುವ ದೇವರು ಎಂಬ ನಂಬಿಕೆ ಭಕ್ತರಲ್ಲಿದೆ.

ಗಂಗಾ ಪೂಜೆ, ಹೋಮ ಹವನ, ನೈವೇದ್ಯ, ಪಂಜಿನ ಸೇವೆ, ದೇವರಮೂರ್ತಿಯ ಮೆರವಣಿಗೆ, ಮಣೇವು, ಅನ್ನಸಂತರ್ಪಣೆ ಇತರೆ ಧಾರ್ಮಿಕ ಕಾರ್ಯಗಳು ಜರುಗಿದವು. ಜಾತ್ರೆ ಅಂಗವಾಗಿ ಗ್ರಾಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ನಿವೃತ್ತ ಪ್ರಾಚಾರ್ಯ ಮುದ್ದರಂಗಪ್ಪ, ಗ್ರಾಪಂ ಸದಸ್ಯ ಹೊಂಬಾಳಪ್ಪ, ಚಂದ್ರಪ್ಪ, ಕ್ಯಾತಪ್ಪ, ಈರಣ್ಣ, ಚಂದ್ರಶೇಖರ್‌, ಚಿತ್ತಣ್ಣ, ರವಿಕುಮಾರ್‌, ಪಾಂಡು, ಮಂಜುನಾಥ್‌, ರಂಗಸ್ವಾಮಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ