ಆ್ಯಪ್ನಗರ

ಕೊರೊನಾ ತುರ್ತು: ಖಾಸಗಿ ಆಸ್ಪತ್ರೆ, ಕ್ಲಿನಿಕ್ ತೆರೆಯಲು ಕಟ್ಟುನಿಟ್ಟಿನ ಸೂಚನೆ!

ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದರೂ, ಆಸ್ಪತ್ರೆ, ಕ್ಲಿನಿಕ್‍ಗಳನ್ನು ತೆರೆಯಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ತಿಳಿಸಿದ್ದಾರೆ.

Vijaya Karnataka Web 26 Mar 2020, 9:07 pm
ಚಿತ್ರದುರ್ಗ: ಕೊರೊನಾವೈರಸ್‌ (ಕೋವಿಡ್-19) ನಿಯಂತ್ರಣಕ್ಕಾಗಿ ದೇಶಾದ್ಯಾಂತ ಲಾಕ್‍ಡೌನ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಕರ್ಫ್ಯೂ ವಿಧಿಸಲಾಗಿದ್ದರೂ ಆಸ್ಪತ್ರೆ, ಕ್ಲಿನಿಕ್‍ಗಳಿಗೆ ಅನ್ವಯವಾಗುವುದಿಲ್ಲ. ಆದ್ದರಿಂದ ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗಳನ್ನು ತೆರೆಯಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ತಿಳಿಸಿದರು.
Vijaya Karnataka Web Coronavirus 6


ಅವರು (ಮಾ.26) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್-19 ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳು ಮುಚ್ಚಿರುವುದರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು ಯಾವ ಕಾರಣಕ್ಕೂ ಮುಚ್ಚಬಾರದು ಈ ಸಂದರ್ಭದಲ್ಲಿ ಅವರೆಲ್ಲರೂ ತರೆಯಬೇಕೆಂದು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ ಎಂದರು.

ಕೋವಿಡ್-19 ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದ್ದು ಈ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಂದರೆಯಾಗದಂತೆ ಜಿಲ್ಲಾ ಆಡಳಿತ ವ್ಯವಸ್ಥೆ ಮಾಡಿಕೊಳ್ಳಲಿದ್ದು ಈ ಬಗ್ಗೆ ಸೂಚನೆ ನೀಡಲಾಗಿದೆ. ಮತ್ತು ಜಿಲ್ಲಾ ಆಸ್ಪತ್ರೆಯ ಪಕ್ಕದಲ್ಲಿನ ಹೊಸ ಎಂ.ಸಿ.ಹೆಚ್. ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆ ಎಂದು ಘೋಷಣೆ ಮಾಡಿ ಇದಕ್ಕೆ ಬೇಕಾದ ವೆಂಟಿಲೇಟರ್, ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್, ಕಿಟ್‍ಗಳ ಪೂರೈಕೆಯನ್ನು ಮಾಡಲಾಗುತ್ತದೆ. ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ 9 ಕೋಟಿ ಅನುದಾನ ಇದ್ದು ಅಗತ್ಯವಿರುವ ಎಲ್ಲಾ ಪರಿಕರ ಹಾಗೂ ವಸ್ತುಗಳನ್ನು ಖರೀದಿ ಮಾಡಲು ಆದೇಶಿಸಲಾಗಿದೆ ಎಂದರು.

ಬೆಳಗಾವಿಯಲ್ಲಿ ಪ್ರಾರ್ಥನೆಗೆಂದು ಮಸೀದಿಗೆ ಬಂದ ಗುಂಪಿಗೆ ಬೆತ್ತದ ರುಚಿ!

ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ಒಬ್ಬರಲ್ಲಿ ಮಾತ್ರ ದೃಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಇದುವರೆಗೆ 59 ಜನರ ರಕ್ತ, ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು 28 ವರದಿ ಬಂದಿವೆ. ಉಳಿದ 24 ವರದಿ ಬರಬೇಕಾಗಿದೆ. ಒಂದರಲ್ಲಿ ಸಕಾರಾತ್ಮಕ ಹೊರತುಪಡಿಸಿ ಉಳಿದೆಲ್ಲವೂ ನಕರಾತ್ಮಕವಾಗಿವೆ. ವಿದೇಶಗಳಿಂದ ಆಗಮಿಸಿದವರಲ್ಲಿ 177 ಜನರನ್ನು ವೀಕ್ಷಣೆಗಾಗಿ ಇಟ್ಟಿದ್ದು 75 ಜನರು 14 ದಿನ ಅವಧಿಯನ್ನು ಪೂರೈಸಿದ್ದಾರೆ.

ಲಾಕ್ ಡೌನ್ ಮೀರಿ ಹೊರ‌ಬಂದರೆ ಅರೆಸ್ಟ್: ಯಡಿಯೂರಪ್ಪ ಆದೇಶ!

ಒಂದು ಸಕಾರಾತ್ಮಕ ವರದಿ ಬಂದಿದ್ದರಿಂದ ಭೀಮಸಮುದ್ರ ವ್ಯಾಪ್ತಿಯಲ್ಲಿ 5 ಕಿ.ಮೀವರೆಗೆ ರೆಡ್‍ಝೋನ್ ಎಂದು ಘೋಷಣೆ ಮಾಡಿ ತೀವ್ರ ನಿಗಾವಹಿಸಲಾಗಿದೆ. ವೈದ್ಯರು ಹಾಗೂ ನರ್ಸ್‍ಗಳು ಮನೆ ಬಾಡಿಗೆ ಇದ್ದಲ್ಲಿ ಅಂತಹ ಮನೆಯನ್ನು ಖಾಲಿ ಮಾಡಿಸಬೇಕೆಂದು ಯಾರಾದರೂ ಒತ್ತಡ ಹಾಕಿದಲ್ಲಿ ಅಂತಹವರ ಮೇಲೆ ಜಿಲ್ಲಾಧಿಕಾರಿ ಹಾಗೂ ರಕ್ಷಣಾಧಿಕಾರಿಯವರು ನಿರ್ಧಾಕ್ಷೀಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಕೊರೊನಾ ಕಡಿವಾಣಕ್ಕೆ ವಿವಿಧ ಸಾಮಗ್ರಿಗಳ ಆವಿಷ್ಕರಿಸಿದೆ ಡಿಆರ್‌ಡಿಒ!

ಮತ್ತು ಗ್ರಾಮಾಂತರ ಪ್ರದೇಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಯಾವುದೇ ಆಸ್ಪತ್ರೆಯ ವೈದ್ಯರು ರಜೆಯ ಮೇಲೆ ತೆರಳುವಂತಿಲ್ಲ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ