ಆ್ಯಪ್ನಗರ

ಆಸ್ಪತ್ರೆ ಆವರಣದಲ್ಲಿ ಆಸರೆ ಪಡೆದ ಬಾಣಂತಿ!

ತಾಲೂಕಿನ ನೆಲಗೇತನಹಟ್ಟಿ ಗ್ರಾಮದ ಶಾರದಮ್ಮ ಈ ಸ್ಥಿತಿಯಲ್ಲಿರುವ ಬಾಣಂತಿ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಡಿ.1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು.

Vijaya Karnataka 10 Dec 2018, 10:19 am
ಚಳ್ಳಕೆರೆ(ಚಿತ್ರದುರ್ಗ): ಅತ್ತ ಗಂಡನ ಮನೆ, ಇತ್ತ ತವರು ಮನೆಯಲ್ಲೂ ಆಸರೆ ಸಿಗದೇ ಬಾಣಂತಿ ತನ್ನ ಹಸುಗೂಸಿನೊಂದಿಗೆ ಸರಕಾರಿ ಆಸ್ಪತ್ರೆಯ ಆವರಣದ ಮಾರಮ್ಮದೇವಿ ದೇಗುಲದ ಬಳಿ ಆಶ್ರಯ ಪಡೆದ ಘಟನೆ ನಗರದಲ್ಲಿ ನಡೆದಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ತಾಯಿ ಮತ್ತು ಮಗುವನ್ನು ಶನಿವಾರ ಸಂಜೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
Vijaya Karnataka Web hospital


ತಾಲೂಕಿನ ನೆಲಗೇತನಹಟ್ಟಿ ಗ್ರಾಮದ ಶಾರದಮ್ಮ ಈ ಸ್ಥಿತಿಯಲ್ಲಿರುವ ಬಾಣಂತಿ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಡಿ.1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಗಂಡನ ಮನೆಗೆ ಹೋದಾಗ ಅತ್ತೆ, ಮಾವ ಸೇರಿಸಿಕೊಳ್ಳಲಿಲ್ಲ. ''ಪ್ರೀತಿಸಿ ವಿವಾಹವಾಗಿದ್ದೇ ಇದಕ್ಕೆ ಕಾರಣ. ಸೊಸೆ ಎಂದು ಈವರೆಗೂ ಒಪ್ಪಿಕೊಂಡಿಲ್ಲ ಎಂಬ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ,'' ಎಂಬುದು ಬಾಣಂತಿ ಅಳಲು.
ಆಸ್ಪತ್ರೆಯಲ್ಲಿ ತಾಯಿ, ಮಗುವಿಗೆ ಆರೈಕೆ ಮಾಡಲಾಗುತ್ತಿದೆ. ಆದರೆ ಗಂಡನ ಮನೆಯವರು ಯಾರೂ ಬಂದಿಲ್ಲ. ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು.
-ಡಾ.ತಿಪ್ಪೇಸ್ವಾಮಿ ಮಕ್ಕಳ ತಜ್ಞ ಹಾಗೂ ಆಸ್ಪತ್ರೆ ಆಡಳಿತಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ