ಆ್ಯಪ್ನಗರ

ವಂಶ ಪರಂಪರೆ ಪಕ್ಷಗಳ ಒಕ್ಕೂಟ ತಿರಸ್ಕರಿಸಿ

ವಂಶ ಪರಂಪರೆಯ ಭ್ರಷ್ಟ ಪಕ್ಷ ಗಳ ಒಕ್ಕೂಟವನ್ನು ಜನರು ತಿರಸ್ಕರಿಸಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ಶ್ರೀರಾಮುಲು ಹೇಳಿದ್ದಾರೆ.

Vijaya Karnataka 18 Mar 2019, 5:00 am
ನಾಯಕನಹಟ್ಟಿ : ವಂಶ ಪರಂಪರೆಯ ಭ್ರಷ್ಟ ಪಕ್ಷ ಗಳ ಒಕ್ಕೂಟವನ್ನು ಜನರು ತಿರಸ್ಕರಿಸಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ಶ್ರೀರಾಮುಲು ಹೇಳಿದ್ದಾರೆ.
Vijaya Karnataka Web deny the federation of family heritage parties
ವಂಶ ಪರಂಪರೆ ಪಕ್ಷಗಳ ಒಕ್ಕೂಟ ತಿರಸ್ಕರಿಸಿ


ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೆಡಿಎಸ್‌ ಕೇವಲ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಪಕ್ಷ ವೆಂದು ಅದೇ ಪಕ್ಷ ದ ಮುಖಂಡರು ಸಾಬೀತುಪಡಿಸಿದ್ದಾರೆ. ಅವರ ಮಕ್ಕಳು ಮುಖ್ಯಮಂತ್ರಿಗಳು, ಮೊಮ್ಮಕ್ಕಳು, ಸೊಸೆಯಂದಿರು ಶಾಸಕರಾಗಿಬೇಕು ಎನ್ನುವುದು ಜೆಡಿಎಸ್‌ ಪಕ್ಷ ದ ಸಿದ್ಧಾಂತವಾಗಿದೆ. ಚುನಾವಣೆ ಬಂದಾಗ ಕುಟುಂಬದವರು ಜನರೆದುರು ಕಣ್ಣೀರು ಸುರಿಸುತ್ತಾರೆ. ನಂತರ ವೋಟ್‌ ಹಾಕಿದ ಜನರು ಐದು ವರ್ಷ ಕಣ್ಣೀರು ಹಾಕುವ ಪರಿಸ್ಥಿತಿ ಉಂಟಾಗುತ್ತದೆ.

ಅಧಿಕಾರಕ್ಕಾಗಿ ಕೂಟ: ಕಾಂಗ್ರೆಸ್‌ ಪಕ್ಷ ದಲ್ಲಿ ಇಂದಿರಾಗಾಂಧಿ, ರಾಜೀವ್‌ ಗಾಂಧಿ ಇದೇ ರೀತಿಯಲ್ಲಿ ವಂಶಾವಳಿ ಮುಂದುವರಿಯುತ್ತಿದೆ. ಭ್ರಷ್ಟ ಪಕ್ಷ ಗಳು ಹಾಗೂ ದುರಾಸೆಯ ಮುಖಂಡರು ಒಂದೆಡೆ ಸೇರಿ ಅಧಿಕಾರಕ್ಕಾಗಿ ಕೂಟ ರಚಿಸಿಕೊಂಡಿವೆ. ಇದಕ್ಕೆ ಪ್ರತಿಯಾಗಿ ಮೋದಿ ಮಾತ್ರ ದೃಢವಾಗಿ ನಿಂತಿದ್ದಾರೆ. ಸ್ವಾತಂತ್ರ್ಯಾನಂತರ ಕೇಂದ್ರದಲ್ಲಿ ಪ್ರಥಮ ಬಾರಿಗೆ ಯಾವುದೇ ಭ್ರಷ್ಟಾಚಾರವಿಲ್ಲದ ಸರಕಾರ ಐದು ವರ್ಷ ಪೂರೈಸಿದೆ ಎಂದರು.

ನಂಬರ್‌ ಒನ್‌:

ವಿಶ್ವದ ಆರ್ಥಿಕ ಶಕ್ತಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಮುಂದಿನ ಕೆಲವು ವರ್ಷಗಳಲ್ಲಿ ಮೊದಲ ಸ್ಥಾನಕ್ಕೇರುವ ವಿಶ್ವಾಸವಿದೆ. ಈ ಚುನಾವಣೆ ದೇಶದ ಇತಿಹಾಸದಲ್ಲಿ ವಿಶಿಷ್ಟವಾಗಿದೆ. ಮೋದಿ ಅವರು 550 ಭರವಸೆಗಳನ್ನು ಈಡೇರಿಸಿದ್ದಾರೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಒದಗಿಸಿದ್ದಾರೆ. ಉಜ್ವಲ ಯೋಜನೆಯಿಂದ ಮಹಿಳೆಯರಿಗೆ ಉತ್ತಮ ಸೌಲಭ್ಯ ದೊರೆತಿದೆ ಎಂದರು.

ಸರಕಾರ ಬಂದ್ರೆ ಭದ್ರೆ ನೀರು

ಶಾಸಕನಾಗಿ ಭದ್ರೆಯನ್ನು ಜಿಲ್ಲೆಗೆ ಹರಿಸಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ 104 ಸ್ಥಾನಗಳು ದೊರೆತಿದ್ದರೂ ಪಕ್ಷ ಅಧಿಕಾರಕ್ಕೆ ಬಂದಿಲ್ಲ. ರಾಜ್ಯದಲ್ಲಿ ಅವಕಾಶ ದೊರೆತ ತಕ್ಷ ಣ ಜಿಲ್ಲೆಯ ಜನರ ಬೇಡಿಕೆ ಈಡೇರಿಸಲಾಗುವುದು. ಚಳ್ಳಕೆರೆ ಕ್ಷೇತ್ರಕ್ಕೆ ಅನುದಾನ ನೀಡುವ ಸರಕಾರ ಮೊಳಕಾಲ್ಮೂರು ಸೇರಿದಂತೆ ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಅನುದಾನ ಒದಗಿಸುವಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದರು.

ಮಾಜಿ ಶಾಸಕ ತಿಪ್ಪೇಸ್ವಾಮಿ ಅವರನ್ನು ಬಿಎಸ್ಸಾರ್‌ ಪಕ್ಷ ದಿಂದ ಟಿಕೆಟ್‌ ಕೊಟ್ಟು ಗೆಲ್ಲಿಸಿದ್ದೇನೆ. ಆದರೆ ಅವರು ನನ್ನ ವಿರುದ್ಧ ಕೆಟ್ಟ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ರಾಜ್ಯ ನಾಯಕರು ಇಲ್ಲಿಗೆ ಟಿಕೆಟ್‌ ನೀಡಿದ್ದಾರೆ. ರಾಜ್ಯ ಮುಖಂಡರ ನಿರ್ದೇಶನದಂತೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಕ್ಷೇತ್ರದಲ್ಲಿ ನನ್ನ ಜಾತಕದ ವಿರುದ್ಧ ತಿಪ್ಪೇಸ್ವಾಮಿ ಮಾತನಾಡುತ್ತಿದ್ದಾರೆ. ನಾನಾ ಬಿಎಸ್ಸಾರ್‌ ಟಿಕೆಟ್‌ ನೀಡಿ ಶಾಸಕರನ್ನಾಗಿ ಮಾಡದೇ ಇದ್ದಲ್ಲಿ ಮೇಷ್ಟ್ರಾಗಿ ಇರಬೇಕಾಗಿತ್ತು. ಅವರ ಅಪ್ಪ, ತಾತ ಶಾಸಕರಾಗಿಲ್ಲ. ನನಗೆ ರಾಜ್ಯದ ಜನರು ಶಕ್ತಿಯನ್ನು ನೀಡಿದ್ದಾರೆ. ರಾಜ್ಯದಲ್ಲಿ 15 ಕ್ಷೇತ್ರದಲ್ಲಿ ಗೆಲ್ಲುವು ಶಕ್ತಿ ನನಗಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್‌.ನವೀನ್‌ ಮಾತನಾಡಿ, ಮಾಜಿ ಶಾಸಕ ಎಸ್‌.ತಿಪ್ಪೇಸ್ವಾಮಿ ಕಾಂಗ್ರೆಸ್‌ ಸೇರಿ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ಅವರ ಜತೆಗಿದ್ದ ಮತದಾರರು ಬಿಜೆಪಿಯಲ್ಲಿಯೇ ಉಳಿಯಲಿದ್ದಾರೆ. ಜಿಲ್ಲೆ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದೆ. ಇದಕ್ಕಾಗಿ ಪಕ್ಷ ದ ಕಾರ್ಯಕರ್ತರು ಕೇಂದ್ರದ ಸಾಧನೆಗಳನ್ನು ಜನರಿಗೆ ತಲುಪಿಸಬೇಕು ಎಂದರು.

ಮಂಡಲ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ, ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಮಂಡಲ ಕಾರ್ಯದರ್ಶಿ ಪಿ.ಶಿವಣ್ಣ, ಲೋಕಸಭಾ ಕ್ಷೇತ್ರ ಉಸ್ತುವಾರಿ ಬಾಳೆಮಂಡಿ ರಾಮದಾಸ್‌ ಮುಖಂಡರಾದ ಶ್ರೀರಾಮರೆಡ್ಡಿ, ಸಿ.ಬಿ.ಮೋಹನ್‌, ಪಿ.ಬಿ.ತಿಪ್ಪೇಸ್ವಾಮಿ,ದಿಲೀಪ್‌ ಕುಮಾರ್‌, ರತ್ಮಮ್ಮ, ಶಾರದಮ್ಮ, ಕುಬೇಂದ್ರ ರೆಡ್ಡಿ ಮತ್ತಿತರರಿದ್ದರು.

ಬಾಕ್ಸ್‌/-

ಚುನಾವಣೆ ನಂತರ ರಾಜ್ಯ ಸರಕಾರ ಪತನ

ನಾಯಕನಹಟ್ಟಿ: ಲೋಕಸಭಾ ಚುನಾವಣೆಯ ನಂತರ ರಾಜ್ಯ ಸರಕಾರ ಪತನವಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಹೇಳಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌, ಜೆಡಿಎಸ್‌ ನಡುವೆ ಭಿನ್ನಮತ ತಾರಕಕ್ಕೇರಿದೆ. ಸೀಟು ಹೊಂದಾಣಿಕೆಗೆ ಪಕ್ಷ ಗಳು ಕಚ್ಚಾಡುತ್ತಿವೆ. ಜೆಡಿಎಸ್‌ನ ವಂಶಪರಂಪರೆಯ ಟಿಕೆಟ್‌ ನೀಡಿಕೆಯಿಂದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮುಖಂಡರು ಬೇಸತ್ತಿದ್ದಾರೆ. ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ನಾನು ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ರಾಜ್ಯದ ರಾಜಕಾರಣದಲ್ಲಿ ಮುಂದುವರಿಯಲಿದ್ದೇವೆ. ಕರ್ನಾಟಕದಲ್ಲಿ ಪುನಃ ಸರಕಾರ ಮಾಡಬೇಕಾಗಿರುವುದರಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.

ನಾಲ್ಕು ಆಕಾಂಕ್ಷಿಗಳು:
ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಜೆ.ಶಾಂತಾ, ದೇವೇಂದ್ರಪ್ಪ, ವೆಂಕಟೇಶ್‌, ಸುರೇಶ್‌ ಬಾಬು ಆಕಾಂಕ್ಷಿಗಳಾಗಿದ್ದಾರೆ. ಬಳ್ಳಾರಿ ಹಾಗೂ ಚಿತ್ರದುರ್ಗ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಇಂದು ನಡೆಯುತ್ತಿರುವ ಕೋರ್‌ ಕಮಿಟಿ ಸಭೆಯಲ್ಲಿ ಬಹುತೇಕ ಫೈನಲ್‌ ಆಗಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ