ಆ್ಯಪ್ನಗರ

ಹೆಚ್ಚುವರಿ ಮಕ್ಕಳು ಸೇರ್ಪಡೆಗೆ ಸಿಎಂ ಜತೆ ಚರ್ಚೆ

ಸರಕಾರಿ ಶಾಲೆಗಳಲ್ಲಿ ಆರಂಭಿಸಿರುವ ಆಂಗ್ಲ ಮಾಧ್ಯಮಕ್ಕೆ ಎಷ್ಟೇ ಮಕ್ಕಳು ಬಂದರೂ ದಾಖಲು ಮಾಡಿಕೊಳ್ಳಲು ಆದೇಶ ಮಾಡುವಂತೆ ಮುಖ್ಯಮಂತ್ರಿ, ಡಿಸಿಎಂ ಜತೆ ಚರ್ಚಿಸಲಾಗುವುದು ಎಂದು ವಿಧಾನಪರಿಷತ್‌ ಸದಸ್ಯ ರಘು ಆಚಾರ್‌ ತಿಳಿಸಿದರು.

Vijaya Karnataka 4 Jul 2019, 5:00 am
ಚಿತ್ರದುರ್ಗ : ಸರಕಾರಿ ಶಾಲೆಗಳಲ್ಲಿ ಆರಂಭಿಸಿರುವ ಆಂಗ್ಲ ಮಾಧ್ಯಮಕ್ಕೆ ಎಷ್ಟೇ ಮಕ್ಕಳು ಬಂದರೂ ದಾಖಲು ಮಾಡಿಕೊಳ್ಳಲು ಆದೇಶ ಮಾಡುವಂತೆ ಮುಖ್ಯಮಂತ್ರಿ, ಡಿಸಿಎಂ ಜತೆ ಚರ್ಚಿಸಲಾಗುವುದು ಎಂದು ವಿಧಾನಪರಿಷತ್‌ ಸದಸ್ಯ ರಘು ಆಚಾರ್‌ ತಿಳಿಸಿದರು.
Vijaya Karnataka Web discussion with cm on the inclusion of additional children
ಹೆಚ್ಚುವರಿ ಮಕ್ಕಳು ಸೇರ್ಪಡೆಗೆ ಸಿಎಂ ಜತೆ ಚರ್ಚೆ


ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ರದುರ್ಗ ಐದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ. 35 ಮಕ್ಕಳಿಗೆ ಸೀಮಿತ ಮಾಡಿದ್ದಾರೆ. ಜಿಲ್ಲೆಯಲ್ಲಿ ಎಷ್ಟೇ ಸ್ಕೂಲ್‌, ಎಷ್ಟೇ ಮಕ್ಕಳು ಬಂದರೂ ಸೇರಿಸಿಕೊಳ್ಳಲು ಆದೇಶ ಮಾಡುವಂತೆ ಮುಖ್ಯಮಂತ್ರಿ ಜತೆ ಚರ್ಚಿಸಿ ಆಗ್ರಹಿಸಲಾಗುವುದು ಎಂದರು.

ಶಾಲೆಗಳಿಗೆ ಶೇ.85ರಷ್ಟು ಪುಸ್ತಕ ಬಂದಿವೆ. ಉಳಿದ ಪುಸ್ತಕ ತರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಗರದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶೀಘ್ರ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ವಾರ್ಡ್‌ಗಳಲ್ಲಿ ರೋಗಿಗಳ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ರೋಗಿಗಳಿಗೆ ಉತ್ತಮ ಸೇವೆ ನೀಡಬೇಕು, ಸ್ವಚ್ಛತೆ ಕಾಪಾಡಬೇಕು. ರೋಗಿಗಳಿಂದ ಹಣ ಪಡೆದುಕೊಳ್ಳಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಂತರ ಮಾತನಾಡಿ, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯನ್ನು 450 ಬೆಡ್‌ಗಳಿಂದ 750 ಅಥವಾ 1000 ಬೆಡ್‌ಗೆ ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಒತ್ತಾಯ ಮಾಡಲಾಗಿದೆ. ಚಿತ್ರದುರ್ಗಕ್ಕೆ ಮೆಡಿಕಲ್‌ ಕಾಲೇಜು ಬೇಕು ಎಂಬುದು ನನ್ನ ಮೊದಲ ಆದ್ಯತೆ ಆಗಿತ್ತು. ಈ ಬಗ್ಗೆ ಡಿಸಿಎಂ ಹಾಗೂ ಸಚಿವ ತುಕರಾಂ ಅವರಿಗೂ ಕೇಳಿದ್ದೆ. ಡಿಸಿಎಂ ನನಗೆ ಮಾತು ಕೊಟ್ಟಿದ್ದರು. ಅದರ ಪ್ರಯತ್ನದಲ್ಲಿದ್ದೇನೆ ಎಂದು ತಿಳಿಸಿದರು.

ಆಸ್ಪತ್ರೆಯ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಒಂದು ಆಂಬ್ಯುಲೆನ್ಸ್‌, ಓಟಿಎಸ್‌ ಕಾಂಪ್ಲೆಕ್ಸ್‌, ಪ್ಯಾರ ಮೆಡಿಕಲ್‌ ಹಾಗೂ ನರ್ಸಿಂಗ್‌ ಹಾಸ್ಟೆಲ್‌, ರೋಗಿಗಳ ಸಂಬಂಧಿಗಳಿಗೆ ಅನುಕೂಲ ಆಗಲು ಡಾರ್ಮೆಂಟರಿ ನಿರ್ಮಾಣ ಹಾಗೂ ಅಗತ್ಯ ಸಿಬ್ಬಂದಿ ನೇಮಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ