ಆ್ಯಪ್ನಗರ

ಮಕ್ಕಳನ್ನು ಶಾಲೆಗೆ ಸೇರಿಸಲು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ನಾನು ಜಿಲ್ಲೆಯ ಅನೇಕ ಗ್ರಾಮಗಳಿಗೆ ತೆರಳಿದ್ದೇನೆ, ಆದರೆ ಇಲ್ಲಿ ದೊರೆತ ಅಭೂತ ಪೂರ್ವ ಸ್ವಾಗತವು ನನಗೆ ಬೇರೆಲ್ಲೂ ದೊರೆತಿಲ್ಲ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಹೇಳಿದರು.

Vijaya Karnataka 25 Jun 2018, 7:30 am
ಮೊಳಕಾಲ್ಮುರು: ನಾನು ಜಿಲ್ಲೆಯ ಅನೇಕ ಗ್ರಾಮಗಳಿಗೆ ತೆರಳಿದ್ದೇನೆ, ಆದರೆ ಇಲ್ಲಿ ದೊರೆತ ಅಭೂತ ಪೂರ್ವ ಸ್ವಾಗತವು ನನಗೆ ಬೇರೆಲ್ಲೂ ದೊರೆತಿಲ್ಲ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಹೇಳಿದರು.
Vijaya Karnataka Web DC


ತಾಲೂಕಿನ ತಮ್ಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕೋನಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಾಸ್ತವ್ಯ ಹೂಡಲು ಬಂದಿದ್ದ ಅವರು, ಜಿಪಂ, ತಾಪಂ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷ ಣ ಇಲಾಖೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿದ್ಯಾಶಕ್ತಿ ಯೋಜನೆಯಡಿ ದುರ್ಗದ ಚಿತ್ತ ಶಾಲೆಗಳತ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾನು ಇಂದು ಇಲ್ಲಿಯೇ ವಾಸ್ತವ್ಯ ಹೂಡಿ ಇಲ್ಲಿನ ಶಾಲೆ ಬಿಟ್ಟಮಕ್ಕಳನ್ನು ಪತ್ತೆ ಹಚ್ಚಿ ನಾಳೆ ಅವರನ್ನು ಶಾಲೆಗೆ ಕಳುಹಿಸಿ ವಾಪಸಾಗುತ್ತೇನೆ. ಗ್ರಾಮಸ್ಥರು ಯಾವ ಮಗು ಶಾಲೆಯಿಂದ ಹೊರಗುಳಿದಿರುವ ಮಾಹಿತಿ ನೀಡುವಂತೆ ಮತ್ತೊಮ್ಮೆ ಮನವಿ ಮಾಡಿದರು.

ಜಿಪಂ ಸಿಇಒ ರವೀಂದ್ರ ಮಾತನಾಡಿ, ನಮಗೆ ಕಾರ್ಯಕ್ರಮದಲ್ಲಿ ಭಾಷಣ ಮಾಡುವುದಕ್ಕಿಂತ ನಿಮ್ಮಿಂದ ದೊರೆಯುವ ಸಕಾರಾತ್ಮಕ ಮಾಹಿತಿಯೇ ಮುಖ್ಯ. ಸರಕಾರವು ಮಕ್ಕಳ ವಿದ್ಯಾಭ್ಯಾಸಕ್ಕೆ ಅನೇಕ ಸೌಲಭ್ಯ ನೀಡಿದರೂ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ ಎನ್ನುವುದು ನಿಜಕ್ಕೂ ಸೋಜಿಗದ ಸಂಗತಿ. ಅನೇಕ ಸಮಸ್ಯೆಗಳಿದ್ದರೂ ಅದಕ್ಕೊಂದು ಪರಿಹಾರ ಇರುತ್ತದೆ. ಈ ಪರಿಹಾರ ನೀಡಲು ಇಂಥಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೂ ಮುಂಚೆ ಜಿಲ್ಲಾಧಿಕಾರಿ, ಸಿಇಒ ಸೇರಿದಂತೆ ಅಧಿಕಾರಿಗಳನ್ನು ಕುಂಭ ಕಳಸದೊಂದಿಗೆ ವಿಜೃಂಭಣೆಯಿಂದ ಸ್ವಾಗತಿಸಲಾಯಿತು.

ಮೆರವಣಿಗೆಯುದ್ದಕ್ಕೂ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ತಮ್ಮ ಮಗ ಆದಿತ್ಯಾನನ್ನು ಕೈಯಲ್ಲಿ ಹಿಡಿದುಕೊಂಡು ಮಗಳು ಅಮೂಲ್ಯಳನ್ನು ಹೆಗಲಲ್ಲಿ ಹೊತ್ತುಕೊಂಡು ಸಾಗಿದರು. ಮೆರವಣಿಗೆ ಮುಗಿದು ಶಾಲಾ ಆವರಣ ಪ್ರವೇಶಿದ ತಕ್ಷ ಣವೇ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಒಂದು ಶಾಲಾ ಕೊಠಡಿ ಒಳಹೊಕ್ಕು ಮಕ್ಕಳ ಲಾಲನೆಯಲ್ಲಿ ತೊಡಗಿದರು.

ಆನಂತರ ಅರಣ್ಯ ಇಲಾಖೆಯರ ಜತೆಗೂಡಿ ಶಾಲಾ ಆವರಣದಲ್ಲಿ ಸಸಿಯೊಂದನ್ನು ನೆಟ್ಟು ನೀರೆರೆದರು. ಭಾಷಣದ ಮಧ್ಯೆ ರಚ್ಚೆ ಹಿಡಿದ ಮಗಳನ್ನು ಸಂತೈಸುತ್ತಾ ನಾನು ಒಬ್ಬ ತಾಯಿಯಾಗಿ ಮತ್ತು ಡಿಸಿಯಾಗಿ ಕರ್ತವ್ಯ ನಿರ್ವಹಿಸಬೇಕಿದೆ ಎಂದು ತಿಳಿಸುತ್ತಲೇ ಭಾಷಣ ಮುಂದುವರಿಸಿದ್ದು ಕಂಡು ಬಂತು.

ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂತು. ಡಿಡಿಪಿಐ ಆಂಥೋನಿ, ಡಿವೈಎಸ್‌ಪಿ ರೋಷನ್‌ ಜಮೀರ್‌, ತಹಸೀಲ್ದಾರ್‌ ಜಿ.ಕೊಟ್ರೇಶ್‌, ತಾಪಂ ಇಒ ಸಿ.ಎನ್‌.ಚಂದ್ರಶೇಖರ್‌, ಬಿಇಒ ಎನ್‌.ಸೋಮಶೇಖರ್‌,ಗ್ರಾಪಂ ಅಧ್ಯಕ್ಷೆ ರಾಮುಲಕ್ಕ, ತಾಪಂ ಸದಸ್ಯ ಲಕ್ಷ್ಮಿ, ಮುಖ್ಯಶಿಕ್ಷ ಕ ವೀರಭದ್ರಯ್ಯಸ್ವಾಮಿ, ದೈಹಿಕ ಶಿಕ್ಷ ಣ ಸಂಯೋಜಕ ಹನುಮಂತಪ್ಪ, ಬಿಆರ್‌ಪಿಗಳಾದ ವೈ.ಜಂಬುನಾಥ್‌, ಉಮೇಶಯ್ಯ, ಮಹಂತೇಶ್‌, ಪಿಎಸ್‌ಐಗಳಾದ ಬಿ.ಎನ್‌.ಮಂಜುನಾಥ್‌, ಕಿರಣ್‌ ಕುಮಾರ್‌, ಶಿಕ್ಷ ಕರ ಸಂಘದ ಮಾಜಿ ಅಧ್ಯಕ್ಷ ಸಣ್ಣಯಲ್ಲಪ್ಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ