Please enable javascript.M Chandrappa And Sons In The Allegation Of Property Fraud - ಆಸ್ತಿ ಕಬಳಿಕೆ ಆರೋಪ: ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ, ಪುತ್ರರ ವಿರುದ್ಧ ಎಫ್‌ಐಆರ್ ದಾಖಲು

ಆಸ್ತಿ ಕಬಳಿಕೆ ಆರೋಪ: ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ, ಪುತ್ರರ ವಿರುದ್ಧ ಎಫ್‌ಐಆರ್ ದಾಖಲು

Lipi 5 May 2022, 11:19 am
Subscribe

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ. ಚಂದ್ರಪ್ಪ, ಶಾಸಕರ ಪತ್ನಿ ಹಾಗೂ ಮಕ್ಕಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅನೂರ್ಜಿತ ಜಿಪಿಎ ಅಟಾರ್ನಿ ಬಳಸಿ ಆಸ್ತಿ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ಪದ್ಮಜಾ ಎಂಬುವವರು ಹೊಳಲ್ಕೆರೆ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

ಹೈಲೈಟ್ಸ್‌:

  • ಅನೂರ್ಜಿತ ಜಿಪಿಎ ಅಟಾರ್ನಿ ಬಳಸಿ ಆಸ್ತಿ ಕಬಳಿಕೆ ಆರೋಪ
  • ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ, ಪುತ್ರರ ವಿರುದ್ಧ ಎಫ್‌ಐಆರ್
Holalkere MLA M Chandrappa
ಚಿತ್ರದುರ್ಗ: ಅನೂರ್ಜಿತ ಜಿಪಿಎ ಅಟಾರ್ನಿ ಬಳಸಿ ಆಸ್ತಿ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ. ಚಂದ್ರಪ್ಪ, ಶಾಸಕರ ಪತ್ನಿ ಹಾಗೂ ಮಕ್ಕಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪದ್ಮಜಾ ಎಂಬುವವರು ಹೊಳಲ್ಕೆರೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪದ್ಮಜಾ ಅಣ್ಣ ಶ್ರೀಧರ್ ಮೂಲಕ ಪವರ್ ಆಫ್ ಅಟಾರ್ನಿ ಪಡೆದಿದ್ದ ಎ1 ಆರೋಪಿ ನಾಗರಾಜ್ ಅವರು ದಿನಾಂಕ 22-03-2016 ರಂದು ಪವರ್ ಆಫ್ ಅಟಾರ್ನಿ ಶ್ರೀಧರ್ ಬರೆದುಕೊಟ್ಟಿದ್ದರು. ಇನ್ನು ಹೊಳಲ್ಕೆರೆ ಮೂಲದ ಶ್ರೀಧರ್‌ಗೆ ಸಂಬಂಧಿಸಿದ ಪಟ್ಟಣದಲ್ಲಿನ ಆಸ್ತಿಯಾಗಿದೆ. ಈ ಆಸ್ತಿಯಲ್ಲಿ ಪಾಲು ಬರಬೇಕಿತ್ತು ಎಂದು ತಂಗಿ ಪದ್ಮಜಾ‌ ದೂರು ಸಲ್ಲಿಸಿದ್ದರು.
ಇ-ಖಾತೆ ನಕಲು ಮಾಡಿ ಗ್ರಾಹಕರಿಗೆ ವಂಚನೆ; ಬೆಂಗಳೂರು ಸುತ್ತಮುತ್ತ ಹೆಚ್ಚುತ್ತಿದೆ ಪ್ರಕರಣ
ನಾಗರಾಜ್‌ನಿಂದ 23-04-21 ಆಸ್ತಿ ಕ್ರಯ ಮಾಡಿಕೊಂಡಿರುವ ಶಾಸಕ ಎಂ. ಚಂದ್ರಪ್ಪ ಪತ್ನಿ ಹಾಗೂ ಪುತ್ರರು, ದಿನಾಂಕ 18-07-20 ಕ್ಕೆ ಮೃತಪಟ್ಟಿರೋದಿಕ್ಕೆ ಶ್ರೀಧರ್ ಅಟಾರ್ನಿ ಬರೆದುಕೊಟ್ಟಿದ್ದರು. ಅಟಾರ್ನಿ ಬರೆದುಕೊಟ್ಟವರು ಮೃತಪಟ್ಟರೆ ಅಟಾರ್ನಿ ಅನೂರ್ಜಿತ ವಾಗಿರುತ್ತದೆ. ಈ ಕುರಿತು ಹೊಳಲ್ಕೆರೆ ನ್ಯಾಯಾಲಯಕ್ಕೆ ಖಾಸಗಿ ಕೇಸ್ ಸಲ್ಲಿಸಿದ್ದ ಪದ್ಮಜಾ, ಸಹೋದರಿಯರು. ದೂರು ಸ್ವೀಕರಿಸಿ ತಪ್ಪಿತಸ್ಥರ ವಿರುದ್ದ ಪ್ರಕರಣ ದಾಖಲಿಸಲು ಕೂರ್ಟ್ ಸೂಚನೆ ನೀಡಿದೆ.

ಇನ್ನು ಕೋರ್ಟ್ ನಿರ್ದೇಶನದಂತೆ ಎಂ ಚಂದ್ರಪ್ಪ ಪತ್ನಿ ಚಂದ್ರಕಲಾ,ಪತ್ರರಾದ ರಘುಚಂದನ್, ದೀಪ್ ಚಂದನ್ ವಿರುದ್ದ FIR ದಾಖಲಾಗಿದೆ. ಪವರ್ ಆಫ್ ಅಟಾರ್ನಿ ದುರುಪಯೋಗ ಮಾಡಿರುವ ನಾಗರಾಜ್ ಎ1 ಆರೋಪಿಯಾಗಿದ್ದು, ಚಂದ್ರಕಲಾ, ರಘು ಚಂದನ್, ದೀಪ್ ಚಂದನ್ ಎ2 ಆರೋಪಿ ಮಾಡಿ FIR ಮಾಡಲಾಗಿದೆ. ಒಟ್ಟಾರೆಯಾಗಿ ಆಸ್ತಿ ಪರಬಾರೆ ದುರುಪಯೋಗ ಪ್ರಕ್ರಿಯೆಯಲ್ಲಿದ್ದ 6 ಜನರ ವಿರುದ್ದ FIR ದಾಖಲಿಸಿದ್ದು, ಸಬ್ ರಿಜಿಸ್ಟರ್ ಕಚೇರಿ ಸಿಬ್ಬಂದಿ ನಾಗರತ್ನಮ್ಮ ಎ3, ಪತ್ರ ಬರಹಗಾರ ಲೋಕೇಶ್ A4, ಸಾಕ್ಷಿಗಳಾದ ಪ್ರವೀಣ್ A5 ಮಹೇಶ್ A6 ಆರೋಪಿಗಳಾಗಿದ್ದಾರೆ.
ಸಾಯೋನು ಎಲ್ಲಾದರೂ ಸಾಯಲಿ, ನಾನು ಆಸ್ಪತ್ರೆ ಇಲ್ಲಿ ಮಾಡೋದಿಲ್ಲ: ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಆಡಿಯೋ ವೈರಲ್‌
ಚಂದ್ರಕಲಾ 34 ಲಕ್ಷ 80 ಸಾವಿರ, ರಘುಚಂದನ್ 38 ಲಕ್ಷ, 80 ಸಾವಿರ, ದೀಪ್ ಚಂದನ್ 38 ಲಕ್ಷ 80 ಸಾವಿರ ಹಣ ನೀಡಿ ನಾಗರಾಜ್ ಬಳಿ ಆಸ್ತಿ ಕ್ರಯ ಮಾಡಲಾಗಿದೆ. ಅಟಾರ್ನಿ ದುರುಪಯೋಗ ಮಾಡಿ ಆಸ್ತಿ ಖರೀದಿಸಿರುವವರ ವಿರುದ್ದ IPC 1860(404, 405, 415, 420, 423, 463, 464, 466, 470, 149 ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದರೆ, ಚಂದ್ರಕಲಾ ವಿರುದ್ದ ಕ್ರೈಂ ನಂ0147, ರಘುಚಂದನ್ ವಿರುದ್ದ ಕ್ರೈಂ ನಂ,145, ದೀಪ್ ಚಂದನ್, ವಿರುದ್ದ ಕ್ರೈಂ ನಂ 146 ನ ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ