ಆ್ಯಪ್ನಗರ

ಮೊದಲ ಬಾರಿ ಮೊಳಕಾಲ್ಮುರಿಗೆ ಒಲಿದ ಸಚಿವ ಸ್ಥಾನ

ಇದೇ ಮೊದಲ ಬಾರಿ ಮೊಳಕಾಲ್ಮುರು ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಿದೆ. ರಾಷ್ಟ್ರ ನಾಯಕ ಎಸ್‌. ನಿಜಲಿಂಗಪ್ಪ ಈ ಕ್ಷೇತ್ರದಿಂದ 1957ರಲ್ಲಿ ಆಯ್ಕೆಯಾಗಿದ್ದರು. ನಂತರ ಕ್ಷೇತ್ರಕ್ಕೆ ಸಚಿವ ಸ್ಥಾನದ ಕೊರತೆಯಿತ್ತು. ಈಗ ಬಿಜೆಪಿ ಸರಕಾರದಲ್ಲಿ ಅಧಿಕಾರ ಒಲಿದಿದೆ.

Vijaya Karnataka 21 Aug 2019, 5:00 am
ನಾಯಕನಹಟ್ಟಿ: ಇದೇ ಮೊದಲ ಬಾರಿ ಮೊಳಕಾಲ್ಮುರು ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಿದೆ. ರಾಷ್ಟ್ರ ನಾಯಕ ಎಸ್‌. ನಿಜಲಿಂಗಪ್ಪ ಈ ಕ್ಷೇತ್ರದಿಂದ 1957ರಲ್ಲಿ ಆಯ್ಕೆಯಾಗಿದ್ದರು. ನಂತರ ಕ್ಷೇತ್ರಕ್ಕೆ ಸಚಿವ ಸ್ಥಾನದ ಕೊರತೆಯಿತ್ತು. ಈಗ ಬಿಜೆಪಿ ಸರಕಾರದಲ್ಲಿ ಅಧಿಕಾರ ಒಲಿದಿದೆ.
Vijaya Karnataka Web for the first time molokalmuri is a ministerial minister
ಮೊದಲ ಬಾರಿ ಮೊಳಕಾಲ್ಮುರಿಗೆ ಒಲಿದ ಸಚಿವ ಸ್ಥಾನ


ಪಕ್ಷದಲ್ಲಿ ಪ್ರಭಾವಿ ನಾಯಕರಾದ ಬಿ.ಶ್ರೀರಾಮುಲು 2018 ರ ಚುನಾವಣೆಯಲ್ಲಿ ಬಾದಾಮಿ, ಮೊಳಕಾಲ್ಮುರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಇಲ್ಲಿನ ಕ್ಷೇತ್ರದ ಜನರು 42,866 ಮತಗಳ ಅಂತರದಿಂದ ಗೆಲ್ಲಿಸಿದ್ದರು. ಇದೇ ಕ್ಷೇತ್ರದಿಂದ 1994, 1997, 1999 ಹಾಗೂ 2004ರಲ್ಲಿ ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಗೆದ್ದ ಎನ್‌.ವೈ.ಗೋಪಾಲಕೃಷ್ಣ ಸಚಿವ ಸ್ಥಾನ ವಂಚಿತರಾಗಿದ್ದರು. ಅವರು ನಿಗಮ, ಮಂಡಳಿಗೆ ಮಾತ್ರ ಸೀಮಿತವಾಗಬೇಕಾಯಿತು. ಒಂದು ಬಾರಿ ರೇಷ್ಮೆ ಬೋರ್ಡ್‌, ಇನ್ನೊಂದು ಬಾರಿ ವಿಧಾನಸಭಾ ಉಪಾಧ್ಯಕ್ಷ ಹಾಗೂ ಮತ್ತೊಂದು ಬಾರಿ ಡಿ.ಎಂ. ನಂಜುಡಪ್ಪ ಸಮಿತಿ ಅಧ್ಯಕ್ಷ ರಾಗಿದ್ದರು. ಇದೇ ಕ್ಷೇತ್ರದವರಾದ ಮುತ್ತಪ್ಪ ಜನತಾಪರಿವಾರದಿಂದ 1985 ಹಾಗೂ 1994ರಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದರು. ಅತ್ಯಂತ ಪ್ರಾಮಣಿಕತೆ, ಸರಳ ರಾಜಕಾರಣಿಯಾಗಿದ್ದ ಮುತ್ತಪ್ಪನವರಿಗೆ ರಾಮಕೃಷ್ಣ ಹೆಗಡೆ ಹಾಗೂ ಎಚ್‌.ಡಿ.ದೇವೇಗೌಡರ ನಿಕಟವರ್ತಿಯಾಗಿದ್ದರೂ ಸಚಿವ ಸ್ಥಾನ ಲಭಿಸಲಿಲ್ಲ. 1967 ಹಾಗೂ 1962ರಲ್ಲಿ ಆಯ್ಕೆಯಾಗಿದ್ದ ಎಸ್‌. ಎಚ್‌. ಬಸಣ್ಣ, 1972 ಹಾಗೂ 1978ರಲ್ಲಿ ಗೆದ್ದ ಪಾಪ ನಾಯಕ ಕೂಡ ಸಚಿವ ಸ್ಥಾನ ವಂಚಿತರಾಗಿದ್ದರು.

2008ರಿಂದ ಎಸ್ಟಿ ಮೀಸಲು ಕ್ಷೇತ್ರವಾದ ಬಳಿಕ ಇದೇ ಮೊದಲ ಬಾರಿ ಬಿಜೆಪಿ ರಾಜ್ಯ ಉಪಾಧ್ಯಕ್ಷ , ಎಸ್ಟಿ ಸಮುದಾಯದ ಪ್ರಭಾವಿ ಮುಖಂಡ ಬಳ್ಳಾರಿಯ ಶ್ರೀರಾಮುಲುಗೆ ಸಚಿವ ಸ್ಥಾನ ದೊರೆತಿದೆ. ಸಹಜವಾಗಿಯೇ ಕ್ಷೇತ್ರದ ಜನರಲ್ಲಿ ಭಾರೀ ನಿರೀಕ್ಷೆ ಗರಿಗೆದರಿವೆ.

ನಿರೀಕ್ಷೆಗಳು:

ಹೋಬಳಿಯ ನೀರಾವರಿ ಮೂಲದ ರಂಗಯ್ಯನದುರ್ಗ ಜಲಾಶಯಕ್ಕೆ ನೀರು ತುಂಬಿಸುವುದು. ಭದ್ರಾ ಮೇಲ್ದಂಡೆ ಯೋಜನೆಯಡಿ ಕ್ಷೇತ್ರ ವ್ಯಾಪ್ತಿಯ 46 ಕೆರೆಗಳನ್ನು ತುಂಬಿಸುವ ಜವಾಬ್ದಾರಿ ಸಚಿವರ ಮೇಲಿದೆ. ಮೊದಲ ಬಾರಿ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಿದ್ದರಿಂದ ಅನೇಕ ಸಮಸ್ಯೆಗಳು ಪರಿಹಾರ ಕಾಣುವ ನಿರೀಕ್ಷೆಯಲ್ಲಿದ್ದಾರೆ ಜನತೆ.

=====ಕೋಟ್‌======

ಕ್ಷೇತ್ರದ ಎಲ್ಲ ಗ್ರಾಮಗಳ ಜನರಿಗೆ ತುಂಗಭದ್ರಾ ಹಿನ್ನೀರಿನಿಂದ ಕುಡಿಯುವ ನೀರು ಒದಗಿಸುವ ಉದ್ದೇಶವಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮೊದಲ ಆದ್ಯತೆ. ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಕ್ಷೇತ್ರದ ಜನರ ಆಯ್ಕೆಯಿಂದ ಸಚಿವ ಸ್ಥಾನ ದೊರೆತಿದೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲಾಗುವುದು.

-ಬಿ.ಶ್ರೀರಾಮುಲು, ನೂತನ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ